ಚಾಮರಾಜೇಂದ್ರ ಮೃಗಾಲಯದ ಹಲವು ಪ್ರಾಣಿಗಳ ದತ್ತು ಪಡೆದ RBI

By Kannadaprabha News  |  First Published Jun 28, 2020, 10:52 AM IST

ಭಾರತೀಯ ರಿಸವ್‌ರ್‍ ಬ್ಯಾಂಕ್‌ ನೋಟು ಮುದ್ರಣ ಘಟಕವು ಶ್ರೀ ಚಾಮರಾಜೇಂದ್ರ ಮೃಗಾಲಯದ ಎರಡು ಭಾರತೀಯ ಆನೆ, ಒಂದು ಭಾರತೀಯ ಸಿಂಹ, ಒಂದು ಹುಲಿ, ಎರಡು ಜಿರಾಫೆ, ಎರಡು ಝೀಬ್ರಾ, ಒಂದು ಚಿಂಪಾಂಜಿ ಮತ್ತು ಒಂದು ಬಿಳಿ ಘೇಂಡಾಮೃಗಗಳನ್ನು ದತ್ತು ಸ್ವೀಕರಿಸಿದೆ.


ಮೈಸೂರು(ಜೂ.28): ಭಾರತೀಯ ರಿಸವ್‌ರ್‍ ಬ್ಯಾಂಕ್‌ ನೋಟು ಮುದ್ರಣ ಘಟಕವು ಶ್ರೀ ಚಾಮರಾಜೇಂದ್ರ ಮೃಗಾಲಯದ ಎರಡು ಭಾರತೀಯ ಆನೆ, ಒಂದು ಭಾರತೀಯ ಸಿಂಹ, ಒಂದು ಹುಲಿ, ಎರಡು ಜಿರಾಫೆ, ಎರಡು ಝೀಬ್ರಾ, ಒಂದು ಚಿಂಪಾಂಜಿ ಮತ್ತು ಒಂದು ಬಿಳಿ ಘೇಂಡಾಮೃಗಗಳನ್ನು ದತ್ತು ಸ್ವೀಕರಿಸಿದೆ.

ಆರ್‌ಬಿಐ ಸಿಎಸ್‌ಆರ್‌ ಸ್ಕೀಮ್‌ ಅಡಿ ಒಂದು ವರ್ಷದ ಅವಧಿಗೆ .10 ಲಕ್ಷ ಪಾವತಿಸಿ ದತ್ತು ಸ್ವೀಕರಿಸಿದ್ದಾರೆ. ಕಳೆದ 5 ವರ್ಷಗಳಿಂದ ಬೃಹತ್‌ ಗಾತ್ರದ ಪ್ರಾಣಿಯನ್ನು ದತ್ತು ಸ್ವೀಕಾರದ ಅವಧಿಯ ನವೀಕರಣ ಮಾಡುವ ಮೂಲಕ ಆರ್‌ಬಿಐ ನಟು ಮುದ್ರಣ್‌ ವನ್ಯ ಪ್ರಾಣಿಗಳ ಸಂರಕ್ಷಣೆಯಂತಹ ವಿಷಯ ತೋರಿಸಿರುವ ಆಸಕ್ತಿಯು ಅತ್ಯಂತ ಪ್ರಶಂಸನೀಯ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ತಿಳಿಸಿದ್ದಾರೆ.

Tap to resize

Latest Videos

undefined

ಹೀರೋಗಳ ಹೆಸರಿನಲ್ಲಿ ದತ್ತು; ಯಾರ ಹೆಸರಲ್ಲಿ ಯಾವ ಪ್ರಾಣಿ? ಇದು ಮೈಸೂರು ಝೂ ಕಹಾನಿ

ಅಂತೆಯೇ ಬೆಂಗಳೂರಿನ ಸುಚಚಿತ್‌ ರಘುರಾವ್‌ ಅವರು .7,500 ಪಾವತಿಸಿ ಚುಕ್ಕೆ ಜಿಂಕೆ, ವಿ. ಪೂರ್ಣಿಮಾ ಅವರು .5 ಸಾವಿರ ಪಾವತಿಸಿ ಮ್ಯಾಂಡರಿನ್‌ ಡಕ್‌, ನಕ್ಷತ್ರ ಆಮೆ ಮತ್ತು ಸಾಮಾನ್ಯ ಹಾವು, ಕೆ.ಬಿ. ಬೋರೆಗೌಡ ಎಂಬವರು .3,500 ಪಾವತಿಸಿ ಬಿಳಿ ನವಿಲು ದತ್ತು ಪಡೆದಿದ್ದಾರೆ.

click me!