ವಿಶ್ವನಾಥ್ ಸಹ ನಮ್ಮ ಜೊತೆಯಲ್ಲೇ ಇದ್ದಾರೆ. ಬಂದಂಥವರಿಗೆ ಒಂದೊಂದು ಅವಕಾಶ ಈಗಾಗಲೇ ಆಗಿದೆ| ಅದೇ ರೀತಿ ಮುಂದಿನ ಬಾರಿ ಅವರಿಗೂ ಅವಕಾಶ ಆಗುತ್ತೆ| ನಮಗೆ ಹತ್ತೂ ಜನರಿಗೆ ಒಂದು ಸಾರಿ ಅವಕಾಶ ಆಯಿತು, ಇದೀಗ ನಾಗರಾಜ್ ಹಾಗೂ ಶಂಕರ್‌ಗೆ ಅವಕಾಶ ಸಿಕ್ಕಿದೆ. ಮುನಿರತ್ನ ಹಾಗೂ ಪ್ರತಾಪಗೌಡ ಪಾಟೀಲಗೆ ಮುಂದಿನ ತಿಂಗಳು ಚುನಾವಣೆ ನಿಗದಿಯಾಗುತ್ತೆ: ಸಚಿವ ಎಸ್.ಟಿ. ಸೋಮಶೇಖರ್|
ಗದಗ(ಜೂ.21): ವಿಶ್ವನಾಥ್ ಅನಾಥರಾಗಿದ್ದಾರೆ ಅಂತಾ ಯಾರು ಹೇಳಿದ್ದು? ಬಿಜೆಪಿಯೇ ಅವರೊಟ್ಟಿಗಿದೆ, ನಾವೆಲ್ಲ ಅವರೊಟ್ಟಿಗಿದ್ದೇವೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಅವರು ಶನಿವಾರ ಬೆಳಗ್ಗೆ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗದಲ್ಲಿ ಸುದ್ದಿಗಾರರು, ವಿಶ್ವನಾಥ್ ಕೈಬಿಟ್ಟ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೀತಿ ಇದು. ವಿಶ್ವನಾಥ ಸಹ ನಮ್ಮ ಜೊತೆಯಲ್ಲೇ ಇದ್ದಾರೆ. ಬಂದಂಥವರಿಗೆ ಒಂದೊಂದು ಅವಕಾಶ ಈಗಾಗಲೇ ಆಗಿದೆ. ಅದೇ ರೀತಿ ಮುಂದಿನ ಬಾರಿ ಅವರಿಗೂ ಅವಕಾಶ ಆಗುತ್ತೆ. ನಮಗೆ ಹತ್ತೂ ಜನರಿಗೆ ಒಂದು ಸಾರಿ ಅವಕಾಶ ಆಯಿತು, ಇದೀಗ ನಾಗರಾಜ್ ಹಾಗೂ ಶಂಕರ್‌ಗೆ ಅವಕಾಶ ಸಿಕ್ಕಿದೆ. ಮುನಿರತ್ನ ಹಾಗೂ ಪ್ರತಾಪಗೌಡ ಪಾಟೀಲಗೆ ಮುಂದಿನ ತಿಂಗಳು ಚುನಾವಣೆ ನಿಗದಿಯಾಗುತ್ತೆ. ಎಲ್ಲವೂ ಹಂತಹಂತವಾಗಿ ಅವಕಾಶಗಳಾಗುತ್ತವೆ.
ಈ ವಿಷಯವಾಗಿ ವಿಶ್ವನಾಥ ಅವರಿಗೂ ಸಿಎಂ ಯಡಿಯೂರಪ್ಪ ಎಂಎಲ್ಸಿ ಸ್ಥಾನದ ಆಶ್ವಾಸನೆ ನೀಡಿದ್ದಾರೆ. ಯಾರಿಗೂ ಕೂಡಾ ಇಲ್ಲ ಎನ್ನುವ ಪ್ರಶ್ನೆಯೇ ಇಲ್ಲ, ಮುಖ್ಯಮಂತ್ರಿಗಳು ನುಡಿದಂತೆ ನಡೆದಿದ್ದಾರೆ. ಈ ವಿಷಯವಾಗಿ ಈಗಾಗಲೇ ವಿಶ್ವನಾಥ ಸಮೇತ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಮುಂದಿನ ಸಲ ಅವಕಾಶ ಕೊಡುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ವಿಶ್ವನಾಥ ಕೂಡ ಒಪ್ಪಿಕೊಂಡಿದ್ದಾರೆ.
ಗದಗ: ಸಚಿವ S T ಸೋಮಶೇಖರ್‌ನನ್ನ ಹಾಡಿ ಹೊಗಳಿದ ಕಾಂಗ್ರೆಸ್ ನಾಯಕ
ಈಗಾಗಲೇ 14 ಜನರಿಗೆ ಅವಕಾಶ ಸಿಕ್ಕಾಗಿದೆ ವಿಶ್ವನಾಥ ಒಬ್ಬರಿದ್ದಾರೆ ಅಷ್ಟೇ. ವಿಶ್ವನಾಥ ಅವರಿಗೆ ಅವಕಾಶ ತಪ್ಪಲಿಕ್ಕೆ ಸಿದ್ದರಾಮಯ್ಯ, ಕುಮಾರಸ್ವಾಮಿ ಕಾರಣ ಎನ್ನುವ ವಿಶ್ವನಾಥ ಅವರ ಹೇಳಿಕೆ ವಿಚಾರ ಕುರಿತ ಪ್ರಶ್ನೆಗೆ ಇದೆಲ್ಲವೂ ಅವರ ವೈಯಕ್ತಿಕ ಅಭಿಪ್ರಾಯ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಬಿಜೆಪಿ ಸರ್ಕಾರ ಯಾವಾಗಲೂ ವಿಶ್ವನಾಥ ಅವರ ಜೊತೆಗಿರುತ್ತೆ ಅಷ್ಟೇ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮೋಹನ ಮಾಳಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಪತಿ ಉಡುಪಿ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು. ನಂತರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಕುರಿತು ಚರ್ಚೆ ನಡೆಸಿದರು.