ಬಾಗಲಕೋಟೆ: ಮಾನವೀಯತೆ ಮೆರೆದ ಸಚಿವ ತಿಮ್ಮಾಪುರ

By Web Desk  |  First Published Jun 23, 2019, 9:13 PM IST

ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ  ಸೇರಿಸುವ ಮೂಲಕ ರಾಜ್ಯ ಸಕ್ಕರೆ ಸಚಿವ ಆರ್. ಬಿ‌. ತಿಮ್ಮಾಪುರ ಅವರು ಮಾನವೀಯತೆ ಮೆರೆದಿದ್ದಾರೆ.


ಬಾಗಲಕೋಟೆ, [ಜೂ.23]: ಬಾಗಲಕೋಟೆಯ ನವನಗರದ ಬೈಪಾಸ್ ರಸ್ತೆಯಲ್ಲಿ ಇಂದು [ಭಾನುವಾರ] ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ಸಕ್ಕರೆ ಸಚಿವ ಆರ್. ಬಿ‌. ತಿಮ್ಮಾಪುರ ಮಾನವೀಯತೆ ಮೆರೆದಿದ್ದಾರೆ.

ಡಾಕ್ಟರ್ ಆಗಿ ಬದಲಾದ ಸಂಸದ: ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಿದ ಜಾಧವ್

Tap to resize

Latest Videos

ಬಾಗಲಕೋಟೆಯ ನವನಗರದ ಬೈಪಾಸ್ ರಸ್ತೆಯಲ್ಲಿ ಇನೋವಾ ಕಾರು ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಅದೇ ಮಾರ್ಗದಲ್ಲಿ  ಮುಧೋಳದಿಂದ ಬಾಗಲಕೋಟೆಗೆ ತೆರಳುತ್ತಿದ್ದ ತಿಮ್ಮಾಪುರ, ಕಾರು ಇಳಿದು ಬಂದು ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆ ಸಾಗಿಸಲು ಸಹಾಯ ಮಾಡಿದರು.

ಸ್ಥಳದಲ್ಲೇ ಇದ್ದ ಟಾಟಾ ಏಸ್ ವಾಹನದ ಮೂಲಕ ಗಾಯಾಳು ಮಹಿಳೆ ಇದ್ರವ್ವ ನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳಿಸಿದರು. ಈ ಮೂಲಕ  ಮಾನವೀಯತೆ ಮೆರೆದರು.

click me!