
ಬೆಂಗಳೂರು[ಜೂ. 23] ಅಳುತ್ತ ಕುಳಿತಿದ್ದ ಮಗುವನ್ನು ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರು ತಲಘಟ್ಟಪುರ ಪೊಲೀಸ್ ಠಾಣೆಗೆ ತಂದು ನೀಡಿದ್ದರು. ಮಗು ತಂದೆ-ತಾಯಿಯಿಂದ ತಪ್ಪಿಸಿಕೊಂಡಿತ್ತು.
8 ವರ್ಷದ ಮಗುವು ತಂದೆ-ತಾಯಿ ಹೆಸರನ್ನು ಹೇಳಲು ಶಕ್ತವಿದ್ದ ಕಾರಣ ಪೊಲೀಸರಿಗೆ ಅರ್ಧ ತಲೆ ನೋವು ಕಡಿಮೆಯಾಗಿತ್ತು. ಕುಮಾರಸ್ವಾಮಿ ಲೇಔಟ್ ನಲ್ಲಿ ಮನೆ ಇದೆ. ತಂದೆ ಹೆಸರು ರುದ್ರೇಶ್, ತಾಯಿ ಹೆಸರು ನೇತ್ರಾ ಎಂದು ಮಗು ಹೇಳುತ್ತಿತ್ತು.
ದಾರುಣ ಸ್ಥಿತಿಯಲ್ಲಿದ್ದವಗೆ ಹೊಸ ಜೀವನ ಕೊಟ್ಟ ಬೆಂಗಳೂರು ಟ್ರಾಫಿಕ್ ಪೊಲೀಸ್
ಪೊಲೀಸರು ತಕ್ಷಣ ಮಾಹಿತಿಯನ್ನು ತಮ್ಮ ವಾಟ್ಸಪ್ ಗ್ರೂಪ್ ಮೂಲಕ ಎಲ್ಲ ಕಡೆ ಕಳುಹಿಸಿಕೊಟ್ಟರು. ಸಂಜೆ ವೇಳೆಗೆ ಮಗು ತಂದೆ ತಾಯಿ ಬಳಿ ಸುರಕ್ಷಿತವಾಗಿ ಸೇರಿದೆ.