ಟಿಕ್‌ ಟಾಕ್‌ ಮಾಡಲು ಹೋಗಿ ಆಸ್ಪತ್ರೆ ಸೇರಿದ್ದ ಯುವಕ ಸಾವು

Published : Jun 23, 2019, 04:36 PM ISTUpdated : Jun 23, 2019, 04:37 PM IST
ಟಿಕ್‌ ಟಾಕ್‌ ಮಾಡಲು ಹೋಗಿ ಆಸ್ಪತ್ರೆ ಸೇರಿದ್ದ ಯುವಕ ಸಾವು

ಸಾರಾಂಶ

ಟಿಕ್‌ ಟಾಕ್‌ ವಿಡಿಯೋಗಾಗಿ ಸ್ಟಂಟ್‌ ಮಾಡಲು ಹೋಗಿ ಕತ್ತಿನ ಮೂಳೆ ಮುರಿದುಕೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ  ವನ್ನಪ್ಪಿದ್ದಾನೆ.

ಬೆಂಗಳೂರು, (ಜೂ.23):  ಟಿಕ್‌ ಟಾಕ್‌ ವಿಡಿಯೋಗಾಗಿ ಸ್ಟಂಟ್‌ ಮಾಡಲು ಹೋಗಿ ಕತ್ತಿನ ಮೂಳೆ ಮುರಿದುಕೊಂಡು ಆಸ್ಪತ್ರೆಗೆ ಸೇರಿದ್ದ ಕುಮಾರ್‌ ಸಾವನ್ನಪ್ಪಿದ್ದಾನೆ.

 ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯ ಕುಮಾರ್‌ ಚಿಕಿತ್ಸೆ ಫಲಕಾರಿಯಾಗದೆ ಇಂದು (ಭಾನುವಾರ) ಮೃತಪಟ್ಟಿದ್ದಾನೆ.

TikTok ಗೀಳಿಗೆ ಪ್ರಾಣ ಬಿಟ್ಟ ಮಹಿಳೆ: ಟಿಕ್‌ ಟಾಕ್‌ನಲ್ಲಿ ವಿಡಿಯೋ ಅಪ್ಲೋಡ್

ಕೆಲ ದಿನಗಳ ಹಿಂದೆ ಕುಮಾರ್‌, ತನ್ನ ಸ್ನೇಹಿತರ ಜೊತೆಗೂಡಿ ಬ್ಯಾಕ್‍ ಫ್ಲಿಪ್‍ ಸಾಹಸದ ವಿಡಿಯೋ ಚಿತ್ರೀಕರಿಸಲು ಮುಂದಾಗಿದ್ದರು.ಇದಕ್ಕಾಗಿ ಓಡಿ ಬಂದ ಕುಮಾರ್ ತನ್ನ ಸ್ನೇಹಿತನ ಎರಡೂ ಅಂಗೈ ಮೇಲೆ ಪಾದ ಊರಿ ಹಿಂಬದಿಗೆ ಜಿಗಿದಿದ್ದ.

ಆದ್ರೆ, ಆಯಾತಪ್ಪಿ ಹಿಂಬದಿಗೆ ಬಿದ್ದು ಬೆನ್ನು ಹಾಗೂ ಕತ್ತಿನ ಮೂಳೆ ಮುರಿದು ಹೋಗಿತ್ತು. ಈತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.   

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC