ನೀರಾವರಿ ವಿಷಯದಲ್ಲಿ ನಿರಂತರ ಮೋಸ: ಸಚಿವ ರಮೇಶ್‌ ಜಾರಕಿಹೊಳಿ

By Kannadaprabha News  |  First Published May 27, 2020, 9:06 AM IST

ಅಥಣಿಗೆ 2000 ಕೋಟಿ: ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಭರ​ವ​ಸೆ| ಎರಡೂ ಪಕ್ಷದವರು ನೀರಾವರಿ ವಿಷಯದಲ್ಲಿ ಮೋಸ ಮಾಡುತ್ತಾ ಬಂದಿದ್ದಾರೆ| ನಾನು ಮತ್ತು ಮಹೇಶ ಕುಮಟಳ್ಳಿ ಸತ್ಯ ಮಾತಾಡುತ್ತೇವೆ| ನಾಟಕ ಮಾಡುವುದಿಲ್ಲ, ಹಿಂದಿನ ಚುನಾವಣೆಯಲ್ಲಿ ನೀರಾವರಿ ಮಾಡಿಸುವ ಭರವಸೆ ಕೊಟ್ಟಿದ್ದಕ್ಕೆ ಸಮ್ಮಿಶ್ರ ಸರ್ಕಾರದಿಂದ ಹೊರಬಂದು ಬಿಜೆಪಿ ಸೇರಿದ್ದು, ಸ್ವಾರ್ಥಕ್ಕಾಗಿ ಪಕ್ಷ ತೊರೆದಿಲ್ಲ: ಜಾರಕಿಹೊಳಿ|


ಅಥಣಿ(ಮೇ.27): ಮುಂದಿನ ಮೂರು ವರ್ಷಗಳಲ್ಲಿ ಶಾಸಕ ಮಹೇಶ ಕುಮಟಳ್ಳಿ ಕ್ಷೇತ್ರವಾದ ಅಥಣಿಗೆ 2 ಸಾವಿರ ಕೋಟಿ ಕೊಡುವುದಾಗಿ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಭರವಸೆ ನೀಡಿದ್ದಾರೆ. 

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಮಂಗಳವಾರ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಇದು ರಾಜಕೀಯ ಭಾಷಣವಲ್ಲ. ಆದಷ್ಟು ಬೇಗ ಅಥಣಿಯ ಕೊಟ್ಟಲಗಿ ಭಾಗಕ್ಕೆ ನೀರು ತರುವ ಕೆಲಸ ಮಾಡುವೆ. ಈ ಮೂಲಕ ನೀರಾವರಿ ಸಚಿವನಾಗಿದ್ದಕ್ಕೆ ಸಾರ್ಥಕತೆ ಹೊಂದುತ್ತೇನೆ ಎಂದರು.

Latest Videos

undefined

ಫ್ರಿ ಕಿಟ್‌ ಹಂಚಿಕೆ ವದಂತಿ: ಕೇಂದ್ರ ಸಚಿವ ಅಂಗಡಿ ಮನೆ ಮುಂದೆ ಜನವೋ ಜನ..!

ನೀರಿನಲ್ಲಿ ರಾಜಕೀಯ ಬೇಡ 3 ವರ್ಷಗಳಲ್ಲಿ ಮಹೇಶ ಕುಮಟಳ್ಳಿ ಕ್ಷೇತ್ರಕ್ಕೆ ನೀರಾವರಿಗಾಗಿ 2 ಸಾವಿರ ಕೋಟಿ ಕೊಡುತ್ತೇನೆ. ಬರುವ ಚುನಾವಣೆಯಲ್ಲಿ ಪ್ರಚಾರ ಮಾಡದೆ ಮಹೇಶ ಕುಮಟಳ್ಳಿ ಆಯ್ಕೆ ಆಗಬೇಕು. ಹಣ ಬಿಡುಗಡೆಗೊಳಿಸುವ ಜವಾಬ್ದಾರಿ ನನ್ನದು ಎಂದರು.

ಈ ಹಿಂದೆ ನಿಮಗೆ ಎರಡೂ ಪಕ್ಷದವರು ನೀರಾವರಿ ವಿಷಯದಲ್ಲಿ ಮೋಸ ಮಾಡುತ್ತಾ ಬಂದಿದ್ದಾರೆ. ನಾನು ಮತ್ತು ಮಹೇಶ ಕುಮಟಳ್ಳಿ ಸತ್ಯ ಮಾತಾಡುತ್ತೇವೆ. ನಾಟಕ ಮಾಡುವುದಿಲ್ಲ. ಹಿಂದಿನ ಚುನಾವಣೆಯಲ್ಲಿ ನೀರಾವರಿ ಮಾಡಿಸುವ ಭರವಸೆ ಕೊಟ್ಟಿದ್ದಕ್ಕೆ ಸಮ್ಮಿಶ್ರ ಸರ್ಕಾರದಿಂದ ಹೊರಬಂದು ಬಿಜೆಪಿ ಸೇರಿದ್ದು, ಸ್ವಾರ್ಥಕ್ಕಾಗಿ ಪಕ್ಷ ತೊರೆದಿಲ್ಲ ಎಂದು ಇದೇ ವೇಳೆ ತಿಳಿಸಿದರು.
 

click me!