ಇಂದಿನಿಂದ ಇತಿಹಾಸ ಪ್ರಸಿದ್ಧ ಸಾಗರ ಗಣಪತಿ ಕೆರೆ ಸರ್ವೆ ಆರಂಭ

By Kannadaprabha News  |  First Published May 27, 2020, 8:54 AM IST

ಸಾಗರದ ಐತಿಹಾಸಿಕ ಗಣಪತಿ ಕೆರೆ ಒತ್ತುವರಿಯಾಗಿದೆ ಎನ್ನುವ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸರ್ಕಾರ ಸರ್ವೆ ಮಾಡಲು ಮುಂದಾಗಿದೆ. ಸಾಹಿತಿ ನಾ ಡಿಸೋಜಾ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಈ ಸಂದರ್ಭದಲ್ಲಿ ಹಾಜರಿರಲು ಶಾಸಕ ಹರತಾಳು ಹಾಲಪ್ಪ ಕೋರಿಕೊಂಡಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.


ಸಾಗರ(ಮೇ.27): ಪಟ್ಟಣದ ಇತಿಹಾಸ ಪ್ರಸಿದ್ಧವಾದ ಗಣಪತಿ ಕೆರೆ ಸರ್ವೆ ಕಾರ್ಯ ಬುಧವಾರ ನಡೆಯುವ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಎಚ್‌.ಹಾಲಪ್ಪ ಮಂಗಳವಾರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಾಹಿತಿ ಡಾ.ನಾ. ಡಿಸೋಜ, ವಿಲಿಯಂ, ಡಾ.ಜಿ.ಎಸ್‌. ಭಟ್‌ ಸೇರಿದಂತೆ ಪರಿಸರ ಮತ್ತು ಅಭಿವೃದ್ಧಿಪರವಾಗಿರುವವರ ಮನೆಗೆ ಖುದ್ದಾಗಿ ಭೇಟಿ ನೀಡಿ ಸರ್ವೆ ಸಂದರ್ಭದಲ್ಲಿ ಪಾಲ್ಗೊಂಡು ಸೂಕ್ತ ಸಲಹೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಕಾಗೋಡು ತಿಮ್ಮಪ್ಪನವರ ಮನೆಯಲ್ಲಿ ಮಾತನಾಡಿದ ಶಾಸಕರು, ಗಣಪತಿ ಕೆರೆ ಒತ್ತುವರಿಯಾಗಿದೆ ಎನ್ನುವ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸರ್ವೆ ನಡೆಸುವಂತೆ ಫೆಬ್ರವರಿ ತಿಂಗಳಿನಲ್ಲಿ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಹಿರಿಯ ಅಧಿ​ಕಾರಿ ನೇತೃತ್ವದಲ್ಲಿ ಬುಧವಾರ ಸರ್ವೆ ನಡೆಯಲಿದೆ ಎಂದು ಹೇಳಿದರು.

Tap to resize

Latest Videos

ಗಣಪತಿ ಕೆರೆ ಒತ್ತುವರಿಗೆ ಸಂಬಂಧಪಟ್ಟಂತೆ ಯಾರನ್ನೂ ಉಳಿಸುವ ಪ್ರಶ್ನೆ ಇಲ್ಲ. ವಸ್ತುನಿಷ್ಠವಾಗಿ ಸರ್ವೆ ನಡೆಸಲಾಗುವುದು. ಈ ಬಗ್ಗೆ ಜನರಿಗೆ ಅನುಮಾನ ಬೇಡ ಎಂದ ಅವರು, ಸರ್ವೆ ಸಂದರ್ಭದಲ್ಲಿ ನಿವೃತ್ತರಾದ ಸರ್ಕಾರಿ ಸರ್ವೆಯರ್‌ಗಳು, ಖಾಸಗಿ ಸರ್ವೇಯರ್‌ ಸಹ ಪಾಲ್ಗೊಳ್ಳಬಹುದು. ಕೆರೆಯ ಮೇಲ್ಭಾಗದಲ್ಲಿ ಇರುವ 3 ಎಕರೆ ಜಾಗ ಕಾಗೋಡು ತಿಮ್ಮಪ್ಪನವರು ಸಾರ್ವಜನಿಕ ಉದ್ದೇಶಕ್ಕಾಗಿ ಖಾಸಗಿಯವರಿಂದ ಭೂಸ್ವಾ​ೕನ ಮಾಡಿಕೊಂಡಿದ್ದಾಗಿದೆ. ಕೆಲವರು ಇದನ್ನು ಸಹ ಕೆರೆ ಜಾಗ ಎಂದು ಬಿಂಬಿಸುತ್ತಿದ್ದಾರೆ. ಈ ಸರ್ವೆ ಮೂಲಕ ಒತ್ತುವರಿ ನಿಖರತೆ ಸಿಗುವ ಅಶಾಭಾವನೆ ಇದೆ ಎಂದು ತಿಳಿಸಿದರು.

ಸಂಸದರ ನಿಧಿ ಬಳಕೆ: ಪ್ರತಾಪ್‌ ಸಿಂಹ ಫಸ್ಟ್‌, ಸುಮಲತಾ ದ್ವಿತೀಯ!

ಕೆರೆ ನೋಡುವಂತೆ ಆಗಿದೆ :

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಗಣಪತಿ ಕೆರೆ ಈಗ ಸ್ವಲ್ಪ ನೋಡುವಂತೆ ಆಗಿದೆ. ಕೆರೆಯನ್ನು ಪರಿಪೂರ್ಣವಾಗಿ ಸರ್ವೆ ಮಾಡಿ ಗಡಿ ಗುರುತಿಸಬೇಕೆಂದು ಸಲಹೆ ನೀಡಿದರು.

ಊರಿಗೊಂದು ಕೆರೆ ಬೇಕು ಎನ್ನುವುದು ಎಲ್ಲರ ಬಯಕೆ. ಆದರೆ ಈ ಕೆರೆ ತನ್ನ ಹಿಂದಿನ ವಿಸ್ತಾರವನ್ನೇ ಹೊಂದಿರಬೇಕು. ಗಣಪತಿ ಕೆರೆಯಂತಹ ವಿಶಾಲ ಕೆರೆಯನ್ನು ಮತ್ತೊಮ್ಮೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಸರ್ವೆ ಸಂದರ್ಭದಲ್ಲಿ ಹಳೆ ಕೆರೆಯ ಅಳತೆಯನ್ನು ಗಮನದಲ್ಲಿ ಇರಿಸಿಕೊಂಡು ಅಳತೆ ಮಾಡಬೇಕು ಎಂದು ಸಾಹಿತಿ ಡಾ.ನಾ.ಡಿಸೋಜ ಸಲಹೆ ನೀಡಿದ್ದಾರೆ.

ಶಾಸಕರು ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಡಾ.ಜಿ.ಎಸ್‌.ಭಟ್‌, ಗಣಪತಿ ಕೆರೆ ಸರ್ವೆ ನಡೆಸುತ್ತಿರುವುದು ಉತ್ತಮವಾದ ಬೆಳವಣಿಗೆ. ಸರ್ವೆಗೆ ಸಂಬಂಧಪಟ್ಟಂತೆ ಪ್ರತಿರೋಧ ವ್ಯಕ್ತಪಡಿಸುವಾಗ ತರ್ಕಬದ್ಧತೆ ಇರಬೇಕು. ತರ್ಕಬದ್ಧತೆ ಇಲ್ಲದೆ ಪ್ರತಿರೋಧ ವ್ಯಕ್ತಪಡಿಸುವುದಕ್ಕೆ ಅರ್ಥವಿಲ್ಲ. ಕೆರೆ ಸರ್ವೆ ಕೆಲಸ ಅರ್ಥಪೂರ್ಣವಾಗಿ ನಡೆಯಬೇಕೆಂದು ಸಲಹೆ ನೀಡಿದರು.

ಬಹಳ ವರ್ಷಗಳ ನಂತರ ಕೆರೆ ಸರ್ವೆಯನ್ನು ಅ​ಧಿಕೃತವಾಗಿ ನಡೆಸುತ್ತಿರುವುದು ಸಂತೋಷ ತಂದಿದೆ ಎಂದ ಲೇಖಕ ವಿಲಿಯಂ, ಕೆರೆ ಅಭಿವೃದ್ಧಿ ಜೊತೆಗೆ ಪಟ್ಟಣ ವ್ಯಾಪ್ತಿಯ ಕೆಲವು ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್‌ ನಿರ್ಮಿಸಿ ಹಿರಿಯ ನಾಗರಿಕರು ಸುಗಮವಾಗಿ ಸಂಚರಿಸಲು ಅವಕಾಶ ಮಾಡಿಕೊಡಬೇಕು. ಪಟ್ಟಣವನ್ನು ಇನ್ನಷ್ಟು ಸ್ವಚ್ಛ ಹಾಗೂ ಸುಂದರವಾಗಿಸುವ ಬಗ್ಗೆ ಗಮನ ಹರಿಸುವಂತೆ ಸಲಹೆ ನೀಡಿದರು.

ಗಣಪತಿ ದೇವಸ್ಥಾನ ಹಿತರಕ್ಷಣಾ ಸಮಿತಿ ಸಂಚಾಲಕ ಐ.ವಿ. ಹೆಗಡೆ ಅವರ ಜೊತೆ ಸಹ ಕೆರೆ ಸರ್ವೆ ಬಗ್ಗೆ ಚರ್ಚೆ ನಡೆಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌, ನಗರ ಅಧ್ಯಕ್ಷ ಗಣೇಶಪ್ರಸಾದ್‌, ತಾಪಂ ಸದಸ್ಯ ದೇವೇಂದ್ರಪ್ಪ, ಪ್ರಮುಖರಾದ ವಿನಾಯಕರಾವ್‌, ಬಿ.ಟಿ.ರವೀಂದ್ರ ಇನ್ನಿತರರು ಹಾಜರಿದ್ದರು.
 

click me!