ಫ್ರಿ ಕಿಟ್‌ ಹಂಚಿಕೆ ವದಂತಿ: ಕೇಂದ್ರ ಸಚಿವ ಅಂಗಡಿ ಮನೆ ಮುಂದೆ ಜನವೋ ಜನ..!

Kannadaprabha News   | Asianet News
Published : May 27, 2020, 08:44 AM ISTUpdated : May 27, 2020, 09:02 AM IST
ಫ್ರಿ ಕಿಟ್‌ ಹಂಚಿಕೆ ವದಂತಿ: ಕೇಂದ್ರ ಸಚಿವ ಅಂಗಡಿ ಮನೆ ಮುಂದೆ ಜನವೋ ಜನ..!

ಸಾರಾಂಶ

ಉಚಿತ ಕಿಟ್‌ ಹಂಚಿಕೆ ವದಂತಿ: ಸಚಿವರ ಮನೆ ಮುಂದೆ ಸಾಲು| ಬೆಳಗಾವಿಯಲ್ಲಿ ನಡೆದ ಘಟನೆ| ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರನ್ನು ಕರೆಸಿ ಜನರ ಸಮಸ್ಯೆ ಆಲಿಸುವಂತೆ ಸೂಚಿಸಿದ ಸಚಿವ ಸುರೇಶ ಅಂಗಡಿ|

ಬೆಳಗಾವಿ(ಮೇ.27): ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ದಿನಸಿ ಕಿಟ್‌ ವಿತರಿಸಲಿದ್ದಾರೆ ಎಂಬ ವದಂತಿ ನಂಬಿ ನಗರದಲ್ಲಿರುವ ಸಚಿವರ ಕಚೇರಿಗೆ ಬಂದಿದ್ದ ಸಾವಿರಾರು ಜನರು ನಿರಾಶೆಯಾಗಿ ಹಿಂದಿರುಗಿದ ಘಟನೆ ಮಂಗ​ಳ​ವಾರ ನಡೆದಿದೆ.

ನಗರದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಸಚಿವರ ಕಚೇರಿ ಬಳಿ ಸಾವಿರಾರು ಜನರು ಬೆಳ್ಳಂಬೆಳಗ್ಗೆ ಸಚಿವರು ಕಿಟ್‌ ವಿತರಿಸುತ್ತಾರೆಂಬ ವದಂತಿ ನಂಬಿ ಬಂದಿದ್ದರು. ಈ ವೇಳೆ ಆಗಮಿಸಿದ ಸಚಿವ ಅಂಗಡಿ ಇಷ್ಟು ಜನ ಸೇರಿರುವುದನ್ನು ನೋಡಿ ತಬ್ಬಿಬ್ಬಾಗಿ ಪ್ರಶ್ನಿಸಿದ್ದಾರೆ. ಅದಕ್ಕೆ ತಾವು ದಿನಸಿ ಕಿಟ್‌ ಕೊಡ್ತೀರಾ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬಂದಿದ್ದೇವೆ ಎಂದಿದ್ದಾರೆ. ಆಗ ನಾನು ಯಾರಿಗೂ ಕಿಟ್‌ ವಿತರಿಸುತ್ತಿಲ್ಲ ಇಲ್ಲಿಂದ ಹೋಗಿ ಎಂದು ಕೈ ಮುಗಿದು ವಿನಂತಿಸಿದ್ದಾರೆ. 

ಊರಿಗೆ ಕರೆತರೋದಾಗಿ ಲಕ್ಷ ಲಕ್ಷ ಪೀಕಿದ ಮಹಿಳೆ: ಉಡುಪಿ ಮಂದಿ ಬೆಳಗಾವಿ ಗಡಿಯಲ್ಲಿ ಬಾಕಿ

ಆಗ ಸಾರ್ವಜನಿಕರು ನಾವು ಕಷ್ಟದಲ್ಲಿದ್ದೇವೆ ನೀವು ನಮಗೆ ನೆರವಾಗುವಂತೆ ಮನವಿ ಮಾಡಿದ್ದಾರೆ. ಬಳಿಕ ಸಚಿವ ಅಂಗಡಿ ಡಿಸಿ ಬೊಮ್ಮನಹಳ್ಳಿ ಅವರನ್ನು ಕೆರೆಸಿ ಜನರ ಸಮಸ್ಯೆ ಆಲಿಸುವಂತೆ ಸೂಚಿಸಿದ ಕಳುಹಿಸಿದ್ದಾರೆ.
 

PREV
click me!

Recommended Stories

ಮೈಸೂರು ಏಕತಾ ಮಹಲ್‌ ವಿವಾದ, ತಾಯಿ-ಮಗನ ವೈರುಧ್ಯ ನಡೆ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!
ತಾಳಿ ಕಟ್ಟುವ ಶುಭ ವೇಳೆ 'ಇವನು ನನ್ನ ಗಂಡ' ಎಂದ ಯುವತಿ; ಮಾಜಿ ಪ್ರೇಯಸಿ ರಾಕ್, ಮದುವೆ ಮನೇಲಿದ್ದವರು ಶಾಕ್!