ಕಲಬುರಗಿ: ಹೆಲ್ತ್‌ ಇನ್ಸ್‌ಪೆಕ್ಟರ್‌ಗೆ ಥಳಿಸಿದ ಸಚಿವ ಪ್ರಿಯಾಂಕ್‌ ಖರ್ಗೆ ಬೆಂಬಲಿಗರು?

Published : Sep 01, 2023, 01:30 PM IST
ಕಲಬುರಗಿ: ಹೆಲ್ತ್‌ ಇನ್ಸ್‌ಪೆಕ್ಟರ್‌ಗೆ ಥಳಿಸಿದ ಸಚಿವ ಪ್ರಿಯಾಂಕ್‌ ಖರ್ಗೆ ಬೆಂಬಲಿಗರು?

ಸಾರಾಂಶ

ಮಳಿಗೆ ಪರವಾನಗಿ ವಿಚಾರದಲ್ಲಿ ಧನಶೆಟ್ಟಿ ಜೊತೆ ಮಾತಿಗಿಳಿದ ಅವಿನಾಶ ಭಾಸ್ಕರ್‌ ಜೋರಾಗಿ ಮಾತಿಗೆ ಮುಂದಾದರು. ಒಂದು ಹಂತದಲ್ಲಿ ವಾಗ್ವಾದ ನಡೆದು ಕೈ ಮಿಲಾಯಿಸುವ ಹಂತ ತಲುಪಿತು. ಆಗ ಅವಿನಾಶ್‌ ಭಾಸ್ಕರ್‌ ಧನಶೆಟ್ಟಿ ಮೇಲೆ ಹಲ್ಲೆ ಮಾಡಿದರು. ಇದನ್ನು ತಡೆ​ಯಲು ಉಪ ಆಯುಕ್ತ ಆರ್‌ಪಿ ಜಾಧವ್‌ ಮುಂದಾದರೂ ಸಹ ಅವರ ಪ್ರಯತ್ನ ವ್ಯರ್ಥವಾಯಿತು.

ಕಲಬುರಗಿ(ಸೆ.01): ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ಅರ್ಚನಾ ಕಮಲಾಪುರಕರ್‌ಗೆ ಕೆಪಿಸಿಸಿ ಪ್ರ. ಕಾರ್ಯದರ್ಶಿ ಶರಣು ಮೋದಿ ಕರೆ ಮಾಡಿ ಅವಾಜ್‌ ಹಾಕಿದ ಘಟನೆ ಮರೆಯುವ ಮುನ್ನವೇ ಕಲಬುರಗಿ ಮಹಾನಗರ ಪಾಲಿಕೆ ಕಚೇರಿಗೆ ನುಗ್ಗಿ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರು ಅಲ್ಲಿನ ಉಪ ಆಯುಕ್ತರ ಚೇಂಬರ್‌ನಲ್ಲಿ ಅಧಿಕಾರಿ ಎದುರಲ್ಲೇ ಆರೋಗ್ಯ ನಿರೀಕ್ಷಕಕನ್ನು ಥಳಿಸಿದ ಘಟನೆ ಗುರುವಾರ ನಡೆದಿದೆ.

ವ್ಯಾಪಾರ ಮಲಿಗೆಯ ಪರವಾನಿಗೆ ಸಂಬಂಧ ಮಹಾನಗರ ಪಾಲಿಕೆಗೆ ಆಗಮಿಸಿದ್ದ ಭೀಮ ನಗರ ನಿವಾಸಿಗಳಾದ ಅವಿನಾಶ ಭಾಸ್ಕರ್‌ ಹಾಗೂ ರಾಜು ಇವರಿಬ್ಬರು ಉಪ ಆಯುಕ್ತ ಆರ್‌ಪಿ ಜಾದವ್‌ ಚೆಂಬರ್‌ನಲ್ಲೇ ಅವರ ಸಮ್ಮುಖದಲ್ಲಿಯೇ ಅಲ್ಲೇ ಇದ್ದ ಆರೋಗ್ಯ ನಿರೀಕ್ಷಕ ದನಶೆಟ್ಟಿ ಎಂಬುವವರಿಗೆ ಥಳಿಸಿದ್ದಾರೆ. ಹಲ್ಲೆ ಮಾಡಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.

ಪ್ರಿಯಾಂಕ್‌ ಖರ್ಗೆ ತಾನೊಬ್ಬನೆ ಕರ್ನಾಟಕವನ್ನ ರಕ್ಷಣೆ ಮಾಡೋ ಹಾಗೆ ಮಾತಾಡ್ತಿದ್ದಾನೆ: ಸಂಸದ ಜಾಧವ್‌

ಮಳಿಗೆ ಪರವಾನಗಿ ವಿಚಾರದಲ್ಲಿ ಧನಶೆಟ್ಟಿ ಜೊತೆ ಮಾತಿಗಿಳಿದ ಅವಿನಾಶ ಭಾಸ್ಕರ್‌ ಜೋರಾಗಿ ಮಾತಿಗೆ ಮುಂದಾದರು. ಒಂದು ಹಂತದಲ್ಲಿ ವಾಗ್ವಾದ ನಡೆದು ಕೈ ಮಿಲಾಯಿಸುವ ಹಂತ ತಲುಪಿತು. ಆಗ ಅವಿನಾಶ್‌ ಭಾಸ್ಕರ್‌ ಧನಶೆಟ್ಟಿ ಮೇಲೆ ಹಲ್ಲೆ ಮಾಡಿದರು. ಇದನ್ನು ತಡೆ​ಯಲು ಉಪ ಆಯುಕ್ತ ಆರ್‌ಪಿ ಜಾಧವ್‌ ಮುಂದಾದರೂ ಸಹ ಅವರ ಪ್ರಯತ್ನ ವ್ಯರ್ಥವಾಯಿತು.

ಮಿಂಚಿನ ಪ್ರತಿಭಟನೆ:

ಹಲ್ಲೆ ಮಾಡಿರುವ ಅವಿನಾಶ ಭಾಸ್ಕರ್‌ ಹಾಗೂ ರಾಜು ವಿರುದ್ಧ ಪ್ರಕರಣ ದಾಖಲಿಸುವಂತೆ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ದೀಪಕ್‌ ಚವ್ಹಾಣ್‌ ನೇತೃತ್ವದಲ್ಲಿ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಿ ನಂತರ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪಾಲಿಕೆಯ ಅರ್ಧ ದಿನ ಪಾಲಿಕೆಯಲ್ಲಿ ಯಾವುದೇ ಕೆಲಸಗಳು ನಡೆಯಲೇ ಇಲ್ಲ. ಆರೋಗ್ಯ ನಿರೀಕ್ಷಕ ಧನಶೆಟ್ಟಿ ಪಾಲಿಕೆಯ ಹಿರಿಯ ಅಧಿಕಾರಿಯ ಚೆಂಬರ್‌ಗೆ ಎಳೆದೊಯ್ದು ಬಾಗಿಲು ಮುಚ್ಚಿ ಅವಾಚ್ಯ ಪದಗಳಿಂದ ನಿಂದಿಸಿ, ಥಳಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬ್ರಹ್ಮಪೂರ ಠಾಣೆಯಲ್ಲಿ ಘಟನೆ ಸಂಬಂಧ ಪಾಲಿಕೆಯ ಸಿಬ್ಬಂದಿ ದೂರು ದಾಖಲಿಸಿದ್ದಾರೆ. ಹಲ್ಲೆ ಘಟನೆ ಬಗ್ಗೆ ಆಯುಕ್ತರ ಗಮನಕ್ಕೆ ತರಲಾಗಿದೆ. ಅವರ ಸಲಹೆಯಂತೆಯೇ ದೂರು ದಾಖಲಿಸಲಾಗಿದೆ ಎಂದು ಪಾಲಿಕೆ ಸಿಬ್ಬಂದಿ ಹೇಳಿದ್ದಾರೆ.

ಹಲ್ಲೆ ಮಾಡಿದ ಕಾಂಗ್ರೆಸ್ಸಿಗರು ಪ್ರಿಯಾಂಕ್‌ ಖರ್ಗೆ ಬೆಂಬಲಿಗರು?

ಪಾಲಿಕೆಯ ಉಪ ಆಯುಕ್ತ ಆರ್‌.ಪಿ ಜಾದವ್‌ ಚೆಂಬರ್‌ನಲ್ಲಿ ಆರೋಗ್ಯ ನಿರೀಕ್ಷಕ ಧನÜಶೆಟ್ಟಿಮೇಲೆ ಹಲ್ಲೆ ನಡೆಸಿರುವ ಕಾಂಗ್ರೆಸ್ಸಿಗರಿಬ್ಬರೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಬೆಂಬಲಿಗರು ಎಂದು ಹೇಳಲಾಗುತ್ತಿದೆ. ಅವಿನಾಶ ಭಾಸ್ಕರ್‌ ಇಬ್ಬರು ಪ್ರಿಯಾಂಕ್‌ ಜೊತೆಗಿರುವ ಭಾವಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಬೆಂಬಲಿಗರೇ ಹೀಗೆ ಹಲ್ಲೆಗೆ ಮುಂದಾದರೆ ಹೇಗೆಂಬ ಪ್ರಶ್ನೆ ಉದ್ಭವವಾಗಿದೆ. ಈಚೆಗಷ್ಟೇ ಪಾಲಿಕೆ ಅಧಿಕಾರಿಗಳ ಸಭೆ ನಡೆಸಿದ್ದ ಪ್ರಿಯಾಂಕ್‌ ಖರ್ಗೆ ನಗರ ಪ್ರಗತಿಗೆ ಎಲ್ಲರೂ ಸಹಕರಿಸೋಣ ಎಂದಿದ್ದರು. ಆದರೀಗ ಅವರ ಬೆಂಬಲಿಗರೆ ಪಾಲಿಕೆ ಹೊಕ್ಕು ಅಧಿಕಾರಿ, ಸಿಬ್ಬಂದಿಗೆ ಹಲ್ಲೆ ಮಾಡಿರುವುದು ಆತಂಕ ಮೂಡಿಸಿದೆ.

PREV
Read more Articles on
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ