ಬೀದರ್‌: ಸಚಿವ ಪ್ರಭು ಚವ್ಹಾಣ್‌ ಗ್ರಾಮ ಸಂಚಾರ, ಜನರ ಸಂಕಷ್ಟಗಳಿಗೆ ಸ್ಪಂದನೆ

By Kannadaprabha News  |  First Published Oct 11, 2022, 9:28 AM IST

ಔರಾದ್‌, ಕಮಲನಗರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ, ಜನತೆಯ ಅಹವಾಲುಗಳಿಗೆ ಸ್ಪಂದನೆ


ಔರಾದ್‌(ಅ.11):  ಪಶು ಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್‌ ಅವರು ಅ.10ರಂದು ಔರಾದ್‌ ಹಾಗೂ ಕಮಲನಗರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಕಿರಗುಣವಾಡಿ, ಗಣೇಶಪೂರ(ಎ), ಮುಂಗನಾಳ, ಹಿಪ್ಪಳಗಾಂವ, ರಕ್ಷ್ಯಾಳ(ಕೆ), ನಿಟ್ಟೂರ(ಕೆ), ಹೆಡಗಾಪೂರ, ಮಸ್ಕಲ್‌, ಕಪ್ಪೆಕೇರಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಸಂಚಾರ ನಡೆಸಿ ವ್ಯವಸ್ಥೆಯನ್ನು ಪರಿಶೀಲಿಸಿದರಲ್ಲದೇ ಜನರ ಸಂಕಷ್ಟಗಳಿಗೆ ಸ್ಪಂದಿಸಿದರು.
ಗಣೇಶಪೂರ(ಕೆ) ಗ್ರಾಮದಲ್ಲಿ ಮಕ್ಕಳನ್ನು ಕಳೆದುಕೊಂಡು ತೀವ್ರ ಸಂಕಷ್ಟ ಎದುರಿಸುತ್ತಿದ್ದ ಮೈನಾಬಾಯಿ ದತ್ತು ಪಾಟೀಲ ಅವರ ಮನೆಗೆ ಭೇಟಿ ನೀಡಿ ಕುಟುಂಬದವರ ಸಮಸ್ಯೆಗಳನ್ನು ಆಲಿಸಿ ವೈಯಕ್ತಿಕ ಧನಸಹಾಯ ಮಾಡಿದರು. ಮುಂಗನಾಳ ಗ್ರಾಮದಲ್ಲಿ ಆರ್ಥಿಕ ಸಮಸ್ಯೆಯಲ್ಲಿರುವ ಹಿರಿಯ ಮಹಿಳೆ ಅನುಷಾಬಾಯಿ ಅವರಿಗೂ ವೈಯಕ್ತಿಕ ನೆರವು ನೀಡದರು.

ಔರಾದ್‌(ಬಿ) ಪಟ್ಟಣದ ಹೊರವಲಯದ ಬಸವನವಾಡಿ ತಾಂಡಾ ಹತ್ತಿರ ನಡೆಯುತ್ತಿರುವ ಔರಾದ್‌ನಿಂದ ಸದಾಶಿವಘಡ್‌ವರೆಗಿನ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದರು. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಯಕ ಅಭಿಯಂತರರಿಂದ ಕೆಲಸದ ಬಗ್ಗೆ ಮಾಹಿತಿ ಪಡೆದ ಸಚಿವರು, ಔರಾದ್‌(ಬಿ) ತಾಲೂಕಿನ ಜನತೆಗೆ ಅನುಕೂಲಕರವಾಗಿರುವ ಈ ರಸ್ತೆ ಸರಿಯಾಗಿ ನಿರ್ಮಿಸಬೇಕೆಂದು ತಿಳಿಸಿದರು.

Tap to resize

Latest Videos

ನೂತನ ಅನುಭವ ಮಂಟಪ ನಿರ್ಮಾಣ ಕಲ್ಯಾಣ ಪರ್ವದ ಕೊಡುಗೆ: ಡಾ. ಮಾತೆ ಗಂಗಾದೇವಿ

ಅಧಿ​ಕಾರಿಗಳು ನಿರಂತರವಾಗಿ ಕಾಮಗಾರಿ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡುತ್ತಿರಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದ ರೀತಿಯಲ್ಲಿ ಕೆಲಸ ಮಾಡಬೇಕು. ಕಾಮಗಾರಿ ಗುಣಮಟ್ಟದ ವಿಷಯದಲ್ಲಿ ನಿಷ್ಕಾಳಜಿ ಮಾಡಿದ್ದಲ್ಲಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಸಚಿವರು 2 ಕೋಟಿಗೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಕಮಲನಗರ ತಹಸೀಲ್ದಾರ್‌ ರಮೇಶ ಪೆದ್ದೆ, ಔರಾದ್‌ ತಾಪಂ ಅಧಿಕಾರಿ ಬೀರೇಂದ್ರಸಿಂಗ್‌ ಠಾಕೂರ್‌, ಕಮಲನಗರ ತಾಪಂ ಅಧಿಕಾರಿ ಮಹಮ್ಮೂದ್‌ ಫಜಲ್‌, ಲೋಕೋಪಯೋಗಿ ಇಲಾಖೆಯ ವೀರಶೆಟ್ಟಿರಾಠೋಡ್‌, ಜೆಸ್ಕಾಂನ ರವಿ ಕಾರಬಾರಿ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ ಮುಂಗನಾಳ, ಪ್ರದೀಪ ಪವಾರ್‌, ಶಿವಾಜಿರಾವ ಕಾಳೆ, ಮಾರುತಿ ಪಾಟೀಲ ಹುಲ್ಯಾಳ, ಕೇರಬಾ ಪವಾರ್‌, ರಮೇಶ ಪಾಟೀಲ ಪಾಶಾಪೂರ, ಶ್ರೀಮಂತ ಪಾಟೀಲ, ವಿನಾಯಕ ಜಗದಾಳೆ, ಹಣಮಂತ ಸುರನಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
 

click me!