ಕುಲಶಾಸ್ತ್ರೀಯ ಅಧ್ಯಯನದ ವರದಿ ಅಂಗೀಕರಿಸಲು ಆಗ್ರಹ

By Kannadaprabha News  |  First Published Oct 11, 2022, 9:27 AM IST
  • ಕುಲಶಾಸ್ತ್ರೀಯ ಅಧ್ಯಯನದ ವರದಿ ಅಂಗೀಕರಿಸಲು ಆಗ್ರಹ
  • ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಹಾಲುಮತ ಮಹಾಸಭಾದಿಂದ ರಾಜ್ಯ ಸರ್ಕಾರಕ್ಕೆ ಒತ್ತಾಯ

ಚಿಕ್ಕಮಗಳೂರು (ಅ.11) : ಎಸ್ಟಿ ಮೀಸಲಾತಿಗಾಗಿ ನಡೆದ ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಹಾಲುಮತ ಮಹಾಸಭಾ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಈ ಸಂಬಂಧ ಅಪರ ಜಿಲ್ಲಾಧಿಕಾರಿ ಬಿ.ಆರ್‌. ರೂಪಾ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಚಿಕ್ಕಮಗಳೂರು: ವಿಪರೀತ ಕಾಡಾನೆ ಕಾಟ,  ಓಡಿಸಲು ಹರಸಾಹಸ  ಪಡುತ್ತಿರುವ ಅರಣ್ಯ ಇಲಾಖೆ

Tap to resize

Latest Videos

ಇದೇ ಸಂದರ್ಭದಲ್ಲಿ ಮಾತನಾಡಿದ ಹಾಲು ಮತ ಮಹಾ ಸಭಾದ ಜಿಲ್ಲಾಧ್ಯಕ್ಷ ಎ.ಮೂರ್ತಿ ಅವರು, ಎಸ್‌.ಟಿ. ಪಟ್ಟಿಯಲ್ಲಿರುವ ಕುರುಬ ಮೀಸಲಾತಿಯನ್ನು ರಾಜ್ಯಾದ್ಯಂತ ವಿಸ್ತಾರ ಮಾಡುವಂತೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ ಹಿನ್ನಲೆಯಲ್ಲಿ 2018 ರಲ್ಲಿ ಸರ್ಕಾರ ಎಸ್‌.ಟಿ. ಮೀಸಲಾತಿಗಾಗಿ ಕುಲಶಾಸ್ತ್ರೀಯ ಅಧ್ಯಯನವನ್ನು ನಡೆಸಲು ಆದೇಶ ಮಾಡಿತ್ತು. ಈ ಸಂಬಂಧ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಇಲಾಖೆಯಿಂದ ಅಧ್ಯಯನ ನಡೆಸಲಾಗಿದೆ ಎಂದರು.

ಮೀಸಲಾತಿಗಾಗಿ ಹಕ್ಕೊತ್ತಾಯದ ಸಭೆಗಳನ್ನು ನಡೆಸಿ, ಅಂತಿಮವಾಗಿ ಕನಕ ಗುರುಪೀಠ, ಬೆಳ್ಳೂಡಿಯಲ್ಲಿ ರಾಜ್ಯ ಮಟ್ಟದ ಹಕ್ಕೋತ್ತಾಯ ಸಮಾವೇಶ ಕುಲಶಾಸ್ತ್ರೀಯ ಅಧ್ಯಯನವನ್ನು ಅಂಗೀಕರಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿ, ಈಶ್ವರಾನಂದ ಮಹಾಸ್ವಾಮಿಗಳ ಹಕ್ಕೋತ್ತಾಯದ ನಿರ್ಣಯ ಮಾಡಿ ಸೆಪ್ಟೆಂಬರ್‌ 11ರಂದು ಮುಖ್ಯಮಂತ್ರಿ ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಗಿತ್ತು ಎಂದರು.

ಕಾರುಗಳ ಕಾರುಬಾರು: 4 ತಿಂಗಳಲ್ಲಿ 69 ಸಾವಿರ ಪ್ರವಾಸಿ ವಾಹನಗಳು ಎಂಟ್ರಿ

ಸಾಮಾಜಿಕ ನ್ಯಾಯದಡಿಯಲ್ಲಿ ಎಸ್‌.ಸಿ/ಎಸ್‌.ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ನಿರ್ಧಾರ ಮಾಡಿರುವ ಸರ್ಕಾರ ಈಗಾಗಲೇ ಶಿಫಾರಸ್ಸು ಪೂರ್ಣಗೊಂಡಿರುವ ಕುರುಬ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್‌.ಪ್ರದೀಪ್‌, ಗೌರವಾಧ್ಯಕ್ಷ ರಂಗಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಮಧು, ರಂಗನಾಥ್‌, ಚಂದ್ರಪ್ಪ, ವೆಂಕಿ, ಸೋಮು, ಚಂದ್ರಶೇಖರ್‌, ಮಹೇಶ್‌ ಗೌಡ ಉಪಸ್ಥಿತರಿದ್ದರು.

click me!