ಅಗತ್ಯವಿದ್ದಷ್ಟೇ ನೀರು ಬಳಸಲು ಶಾಸಕ ಸುರೇಶ್ ಸಲಹೆ

By Kannadaprabha News  |  First Published Oct 11, 2022, 9:13 AM IST
  •  ಜಂಬದಹಳ್ಳ ಜಲಾಶಯಕ್ಕೆ ಗಂಗಾಪೂಜೆ, ಬಾಗಿನ ಅರ್ಪಣೆ
  • ಎಷ್ಟುನೀರು ಅಗತ್ಯವೋ ಅಷ್ಟುನೀರು ಮಾತ್ರ ಬಳಸಿಕೊಳ್ಳಲು ಶಾಸಕ ಡಿ.ಎಸ್‌. ಸುರೇಶ್‌ ಕರೆ

ತರೀಕೆರೆ (ಅ.11) : ಎಷ್ಟುನೀರು ಅಗತ್ಯವೋ ಅಷ್ಟುನೀರನ್ನು ಮಾತ್ರ ಬಳಸಿಕೊಳ್ಳಬೇಕೆಂದು ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಅಧ್ಯಕ್ಷ, ಶಾಸಕ ಡಿ.ಎಸ್‌.ಸುರೇಶ್‌ ಸಲಹೆ ನೀಡಿದ್ದಾರೆ. ಸೋಮವಾರ ಸಮೀಪದ ಜಂಬದಹಳ್ಳ ಜಲಾಶಯ ತುಂಬಿ ಹರಿದುದರಿಂದ ಜಂಬದಹಳ್ಳ ಜಲಾಶಯದ ಬಳಿ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ನಂತರ ಜಲಾಶಯದಯ ಬಳಿ ಏರ್ಪಾಡಾಗಿದ್ದ ಸಮರಾಂಭದಲ್ಲಿ ಮಾತನಾಡಿದ ಅವರು, ಎಲ್ಲರ ಸೌಭಾಗ್ಯದಿಂದ ಕಳೆದ ನಾಲ್ಕು ವರ್ಷಗಳಿಂದಲೂ ತಾಲೂಕಿನ ಭದ್ರಾ ಜಲಾಶಯದಲ್ಲಿ ಮತ್ತು ಜಂಬದಹಳ್ಳ ಜಲಾಶಯದಲ್ಲಿ ನೀರು ತುಂಬಿ ಹರಿದುದರಿಂದ ನಿರಂತರವಾಗಿ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸುತ್ತಿದ್ದೇವೆ. ನೀರಿನ ನಿರ್ವಹಣೆ ತುಂಬಾ ಅಗತ್ಯವಾಗಿದೆ. ಬರಗಾಲದಲ್ಲಿ ಈ ಭಾಗದಲ್ಲಿ ಒಂದೊಂದು ಹನಿ ನೀರಿಗೂ ಬಹಳ ಕಷ್ಟಪಟ್ಟಿದ್ದೇವೆ. ಗುದ್ದಲಿ ಪೂಜೆ ನಡೆದ ದಿವಸದಿಂದಲೇ ಕಾಮಗಾರಿ ಕಾರ್ಯ ಪ್ರಾರಂಭಿಸಲಾಗುತ್ತಿದೆ. ತಾಲೂಕಿನಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.

ನೀರು ಬಂದಿಲ್ಲಂದ್ರೆ ಪುರಸಭೆ ಅಧ್ಯಕ್ಷಗೆ ಹೊಡೀರಿ ಎಂದ ಕಾಂಗ್ರೆಸ್ ಶಾಸಕ ಡಿ.ಎಸ್.ಹೊಲಗೇರಿ!

Tap to resize

Latest Videos

ತರೀಕೆರೆ, ಅಜ್ಜಂಪುರ, ಕಡೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ ಪ್ರತಿ ಗ್ರಾಮಕ್ಕೂ ಶುದ್ಧ ಕುಡಿಯುವ ನೀರು ತಲುಪಿಸುವ ಯೋಜನೆಯನ್ನು ನಿರ್ವಹಿಸಲಾಗುತ್ತದೆ. ತರೀಕೆರೆ ಪಟ್ಟಣ, ತರೀಕೆರೆ ತಾಲೂಕು ಮತ್ತು ಅಜ್ಜಂಪುರ ತಾಲೂಕಿನ ಪ್ರತಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ತಲುಪಿಸುವ ಯೋಜನೆ ಕೈಗೊಳ್ಳಲಾಗುತ್ತಿದೆ. ಈ ಯೋಜನೆ ಕಾಮಗಾರಿಗೆ 30 ತಿಂಗಳ ಅವಧಿ ನಿಗದಿಪಡಿಸಲಾಗಿದೆ, ಭದ್ರಾ ಮೇಲ್ದಂಡೆ ಯೋಜನೆಯಿಂದ ತಾಲೂಕಿನ 79 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. 14 ಕೋಟಿ ರು.ಗಳಲ್ಲಿ ಬೇಲೇನಹಳ್ಳಿ, ಅಜ್ಜಂಪುರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೈಗೊಳ್ಳಲಾಗುತ್ತಿದೆ. ಅಜ್ಜಂಪುರ ಭಾಗಕ್ಕೆ ಶೀಘ್ರದಲ್ಲೇ ಭದ್ರಾ ಜಲಾಶಯದ ನೀರು ತಲುಪುತ್ತದೆ ಎಂದು ಅವರು ಹೇಳಿದರು.

ಮಾಮ್‌ಕೋಸ್‌ ನಿರ್ದೇಶಕ ಡಾ.ಆರ್‌.ದೇವಾನಂದ್‌ ಅವರು ಮಾತನಾಡಿ ನಮ್ಮ ಸುದೈವ ಜಂಬದಹಳ್ಳ ಜಲಾಶಯ ನಾಲ್ಕನೆ ಬಾರಿ ತುಂಬಿ ಹರಿಯುತ್ತಿದೆ. ಕೆರೆ ಕಟ್ಟೆಬಾವಿಗಳನ್ನು ಉಳಿಸಬೇಕು. ಪರಿಸರವನ್ನು ಉಳಿಸಬೇಕು. ಸರ್ಕಾರದ ಸ್ವತ್ತನ್ನು ಕಾಪಾಡಬೇಕು ಎಂದು ಅವರು ಹೇಳಿದರು.

ಚರಂಡಿ ನೀರನ್ನು ಶುದ್ಧೀಕರಣಕ್ಕೆ ಬಂತು ‘ಗಾಲ್‌ ಮೊಬೈಲ್‌’ ಯಂತ್ರ

ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಉಪಾಧ್ಯಕ್ಷ ಟಿ.ಎಚ್‌.ಎಲ್‌. ರಮೇಶ್‌ ಮಾತನಾಡಿ, ಶಾಸಕ ಡಿ.ಎಸ್‌. ಸುರೇಶ್‌ ಅವರು ಅನೇಕ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಅವರು ನಿರ್ವಹಿಸುತ್ತಿರುವ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಅವರು ಹೇಳಿಕೊಳ್ಳಬೇಕು. ಆದರೆ ಅವರು ಹೇಳಿಕೊಳ್ಳುತ್ತಿಲ್ಲ. ತರೀಕೆರೆ ಕಸಬಾ ಹೋಬಳಿಯ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಶಾಸಕ ಡಿ.ಎಸ್‌.ಸುರೇಶ್‌ ನಿರ್ವಹಿಸಿದ್ದಾರೆ. ತಾಲೂಕಿನಲ್ಲಿ ಬಹುಗ್ರಾಮ ನೀರಿನ ಯೋಜನೆ, ರಸ್ತೆ ಅಭಿವೃದ್ಧಿ, ನೀರಾವರಿ ಇತ್ಯಾದಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲಾಗಿದೆ. ಜಂಬದಹಳ್ಳ ಜಲಾಶಯದ ನೀರಿನ ಸಮರ್ಪಕ ನಿರ್ವಹಣೆಗೆ ನೀರಾವರಿ ಸಮಿತಿ ರಚನೆಯಾಗಬೇಕು ಎಂದು ಅವರು ಹೇಳಿದರು. ಟಿ.ಎ.ಪಿ.ಸಿ.ಎಂ.ಎಸ್‌. ಮಾಜಿ ಅಧ್ಯಕ್ಷ ವಸಂತಕುಮಾರ್‌ ಮಾತನಾಡಿ ತಾಲೂಕಿನ ಎಲ್ಲ ಕೆರೆಗಳಲ್ಲೂ ನೀರು ತುಂಬಿದ್ದು ಎಲ್ಲ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಾಗಿದೆ ಎಂದು ಅವರು ಹೇಳಿದರು.

click me!