ಆಘಾತಕಾರಿ ಸುದ್ದಿ: 'ರಾಜ್ಯದಲ್ಲಿ ಶೇ.97 ರಷ್ಟು ಕೊರೋನಾ ಸೋಂಕಿತರಿಗೆ ರೋಗ ಲಕ್ಷಣಗಳೇ ಇಲ್ಲ'

By Kannadaprabha News  |  First Published Jun 12, 2020, 12:12 PM IST

ಐಲ್ಐಗಳಿಂದ‌ ಬಳಲುತ್ತಿರುವವರನ್ನು ಪ್ರತ್ಯೇಕ ಮಾಡಿ ಪರೀಕ್ಷೆ ನಡೆಸಲು ಸೂಚನೆ: ಸಚಿವ ಸುಧಾಕರ್| ಆಗಸ್ಟ್ ಅಂತ್ಯಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಲಿವೆ‌| ಪರಿಣಿತರ ವರದಿ ಅನುಸಾರ ಅದಕ್ಕೆ ತಕ್ಕ‌ ಎಲ್ಲ‌ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ| 


ಬಳ್ಳಾರಿ(ಜೂ.12): ಐಲ್ಐಗಳಿಂದ ಬಳಲುತ್ತಿರುವವರೇ ರಾಜ್ಯದಲ್ಲಿ ಅತಿಹೆಚ್ಚು ಕೊರೊನಾ ಸೊಂಕಿಗೀಡಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಂತ ಲಕ್ಷಣಗಳು ಇರುವವರನ್ನು ಪ್ರತ್ಯೇಕ ಮಾಡಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದ್ದಾರೆ.

ಇಂದು(ಶುಕ್ರವಾರ) ನಗರದ ವಿಮ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ‌ ಮಾತನಾಡಿದ ಅವರು, 60ವರ್ಷ ಮೇಲ್ಪಟ್ಟ ಐಲ್ಐ ಪ್ರಕರಣಗಳನ್ನು ಮೊದಲಿಗೆ ಪತ್ತೆ ಹಚ್ಚಿ ಅವರಿಗೆ‌ ಪರೀಕ್ಷಿಸಲು ತಿಳಿಸಲಾಗಿದೆ ಎಂದು ಹೇಳಿದ ಅವರು 60 ವರ್ಷ ಮೇಲ್ಪಟ್ಟ ಐಎಲ್ಐನಿಂದ ಬಳಲುತ್ತಿರುವವರು ಹಾಗೂ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವವರು, ಕೆಮ್ಮು, ಶೀತ, ಜ್ವರದಂತ ಲಕ್ಷಣಗಳು ಇರುವವರು ಹಾಗೂ ಬೇಸಿಗೆ ಹೋಗಿ‌ ಮಳೆಗಾಲ‌ ಬಂದಿರುವುದರಿಂದ ಹವಾಮಾನ ಬದಲಾವಣೆಯಾಗಿ ಸಾಮಾನ್ಯವಾಗಿ ಕೆಮ್ಮು, ನೆಗಡಿ, ಜ್ವರ ಬರುವಂತವರು ಈಗಾಗಲೇ ಸ್ಥಾಪಿಸಲಾಗಿರುವ ಫೀವರ್ ಕ್ಲಿನಿಕ್ ಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಲು ಅವರು ಸಲಹೆ ನೀಡಿದರು.

Tap to resize

Latest Videos

ಬಸ್‌ನಲ್ಲೇ ಕೊವಿಡ್ ಟೆಸ್ಟ್‌ ಲ್ಯಾಬ್‌; 24 ಗಂಟೆಯಲ್ಲೇ ರಿಪೋರ್ಟ್

ರಾಜ್ಯದಲ್ಲಿ 3 ಸಾವಿರಕ್ಕೂ‌ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಅವುಗಳಲ್ಲಿ ಶೇ.97 ರಷ್ಟು ಜನರಿಗೆ ರೋಗ ಲಕ್ಷಣಗಳೇ ಇಲ್ಲ ಎಂದು ಹೇಳಿದ ಅವರು ಆಗಸ್ಟ್ ಅಂತ್ಯಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಲಿವೆ‌ ಎಂದು ಅಧ್ಯಯನ ನಡೆಸಿ ನೀಡಿದ ಪರಿಣಿತರ ವರದಿ ಅನುಸಾರ ಅದಕ್ಕೆ ತಕ್ಕ‌ ಎಲ್ಲ‌ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್. ಆನಂದಸಿಂಗ್, ಡಿಸಿ ಎಸ್.ಎಸ್. ನಕುಲ್,ವಿಮ್ಸ್ ನಿರ್ದೇಶಕ ಡಾ.ದೇವಾನಂದ್ ಮತ್ತಿತರರು ಇದ್ದರು.
 

click me!