ಚಿತ್ರದುರ್ಗ (ಅ.22) : ಚಿತ್ರದುರ್ಗ ತಾಲೂಕಿನ ರೈಲ್ವೆ ಅಂಡರ್‌ಪಾಸ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮೂರು ತಿಂಗಳು ಉರುಳಿವೆ. ಇಲಾಖೆ ಅಧಿಕಾರಿಗಳಿಗೆ ಪೋಟೋಗಳನ್ನು ಕಳಿಸಿ ಸಮಸ್ಯೆಗಳ ಪಟ್ಟಿಮಾಡಿ ನಿವಾರಣೆಗೆ ಸೂಚಿಸಲಾಗಿದೆ. ಇದುವರೆಗೂ ಯಾವೊಂದೂ ಸಮಸ್ಯೆ ನಿವಾರಣೆಗೆ ಯತ್ನಿಸಿಲ್ಲ. ಕೇಂದ್ರ ಸಚಿವರು ಅಂದ್ರೆ ಏನಂತ ತಿಳ್ಕಂಡಿದ್ದೀರಾ? ಇಷ್ಟೊಂದು ಉದಾಸೀನ ಮಾಡಿದ್ರೆ ನಾವ್ಯಾಕೆ ಮೀಟಿಂಗ್ ಮಾಡಬೇಕು. ನಿಮ್ಮನ್ನೆಲ್ಲ ಕರೆಯಿಸಿಕೊಳ್ಳಬೇಕು?
ಸಂವಿಧಾನ ತಿದ್ದುಪಡಿ ಬಗ್ಗೆ ಅಂಬೇಡ್ಕರ್ ಅಂದೇ ಪ್ರಸ್ತಾಪಿಸಿದ್ರು: ಕೇಂದ್ರ ಸಚಿವ ನಾರಾಯಣಸ್ವಾಮಿ
undefined
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ರೈಲ್ವೆ ಅಧಿಕಾರಿಗಳಿಗೆ ಶುಕ್ರವಾರ ತೆಗೆದುಕೊಂಡ ಕ್ಲಾಸ್ ಇದು. ರೈಲ್ವೆ ಅಂಡರ್‌ಪಾಸ್‌ಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರಂಭದ ಇಪ್ಪತ್ತು ನಿಮಿಷ ಅಧಿಕಾರಿಗಳ ಮೇಲೆ ವ್ಯಗ್ರರಾದರು. ಡೆಲ್ಲಿಯಿಂದ ನಿಮಗೆ ಸಲಹೆ ಕೊಟ್ಟು ಹೋಗೋಕೆ ಬಂದಿಲ್ಲ. ನಾನು ಜನರ ಮಧ್ಯೆ ಕೆಲಸ ಮಾಡೋನು. ಅವರು ನನ್ನತ್ತ ಬೆರಳು ಮಾಡಿ ತೋರಿಸಿದರೆ ಸಹಿಸಿಕೊಳ್ಳಲು ಆಗೋಲ್ಲ ಎಂದರು.
ತುರುವನೂರು ರಸ್ತೆಯಲ್ಲಿ ಬರುವ ಅಂಡರ್‌ಪಾಸ್‌ನಲ್ಲಿ ಸದಾ ನೀರು ತುಂಬಿರುತ್ತೆ. ಕಳೆದ ಹದಿನೈದು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಈ ಮಾರ್ಗದಲ್ಲಿ ರೈತರು ಹೇಗೆ ಸಂಚರಿಸಬೇಕು, ವಾಹನಗಳು ಹೇಗೆ ಚಲಿಸಬೇಕು. ಶಾಲೆಗೆ ಹೋಗುವ ಮಕ್ಕಳ ಪರಿಸ್ಥಿತಿ ಏನು ಎಂಬುದು ನಿಮಗೆ ಗೊತ್ತಿದೆಯಾ? ಹೋದ ಬಾರಿ ಸ್ಥಳಕ್ಕೆ ಭೇಟಿ ನೀಡಿದಾಗ ಸಮಸ್ಯೆ ನಿವಾರಣೆ ಮಾಡುವಂತೆ ಸೂಚಿಸಿದ್ದೆ. ಪರಿಹಾರ ಕಂಡುಕೊಳ್ಳುವ ನಿಟ್ಟನಲ್ಲಿ ರೈಲ್ವೆ ಇಲಾಖೆಯ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೀರಾ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೀರಾ ? ಎಂದು ಪ್ರಶ್ನಿಸಿದರು.
ಅಂಡರ್‌ಪಾಸ್ ಮಾಡುವಾಗ ಎಲ್ಲಿಯೂ ಸೂಕ್ತ ವಿನ್ಯಾಸ ಮಾಡಿಲ್ಲ. ನೀರು ಸರಾಗವಾಗಿ ಹರಿದು ಹೋಗಲು ಗ್ರಾವಿಟಿ ಗಮನಿಸಿಲ್ಲ. ತಂತ್ರಜ್ಞಾನ ಇಷ್ಟೊಂದು ಬೆಳೆದಿರುವಾಗ ಅಧಿಕಾರಿಗಳು ಕೈಕಟ್ಟಿ ಕುಳಿತರೆ ಹೇಗೆ. ಎತ್ತಿನ ಹೊಳೆ ಪ್ರಾಜೆಕ್ಟ್ನಲ್ಲಿ ಸೆನ್ಸಾರ್ ಪಂಪ್‌ಗಳ ಮೂಲಕ ನೀರು ಎತ್ತುತ್ತಾರೆ. ಸಮಸ್ಯೆ ಬಗೆಹರಿಯುವ ತನಕ ಇಂತಹ ವ್ಯವಸ್ಥೆ ಅಳವಡಿಸಿಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲವೇ ಎಂದು ನಾರಾಯಣಸ್ವಾಮಿ ಅಧಿಕಾರಿಗಳ ಮೇಲೆ ಆಕ್ರೋಶ ಮಳೆಗರೆದರು.
ಅಧಿಕಾರಿಗಳಿಂದ ಸಮಜಾಯಿಸಿ:
ಈ ಮಾತಿಗೆ ಉತ್ತರಿಸಿದ ರೈಲ್ವೆ ಆಧಿಕಾರಿಗಳು ಪಂಪ್ ಮೂಲಕ ನೀರೆತ್ತಲು ಕ್ರಮ ಕೈಗೊಳ್ಳಲಾಗಿದೆ. ಕೆಲವು ಕಡೆ ಸೆನ್ಸಾರ್ ಪಂಪುಗಳ ಅಳವಡಿಕೆ ಕೆಲಸ ಅಂತಿಮ ಹಂತದಲ್ಲಿದೆ. ಗೋನೂರು ರಸ್ತೆಯಲ್ಲಿ ಬಸಿ ನೀರು ಬರುತ್ತಿರುವುದು ಸಮಸ್ಯೆ ಆಗಿದೆ. ಬಸಿ ನೀರು ಬಾರದಂತೆ ತುರ್ತು ಕ್ರಮ ಕೈಗೊಳ್ಳಬೇಕು. ನಗರಸಭೆ ಹಾಗೂ ಪಂಚಾಯತ್‌ರಾಜ್ ಇಲಾಖೆ ಅಧಿಕಾರಿಗಳ ನೆರವು ಬೇಕಾಗಿದೆ ಎಂದರು.
ನೆರವಿನ ವಿಚಾರದಲ್ಲಿ ನಿಮ್ಮ ಪಾಡಿಗೆ ನೀವೇ ಅಂದುಕೊಂಡು ಸುಮ್ಮ ನಾದರೆ ಹೇಗೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗಮನಕ್ಕೆ ತಂದಿದ್ದೀರಾ ಎಂದು ಪ್ರಶ್ನಿಸಿದ ಸಚಿವರು, ಸಮಸ್ಯೆ ನಿವಾರಣೆ ಕಾಳಜಿಗಳು ಇದ್ದಿದ್ದರೆ ಈ ಕೆಲಸ ಮಾಡುತ್ತಿದ್ದಿರಿ. ಇಂಜಿನಿಯರ್‌ಗಳೊಟ್ಟಿಗೆ ಮೊದಲು ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸಮೀಕ್ಷೆ ಮಾಡಬೇಕು. ನಂತರ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ನಿವಾರಣೆಗೆ ಯತ್ನಿಸುವಂತೆ ಸೂಚಿಸಿದರು.
ಎಲ್ಲಿ ನೀರನ್ನು ಡೈವರ್ಚ್ ಮಾಡಲು ಅವಕಾಶವಿದಿಯೋ, ಸರ್‌ಫೇಸ್‌ನಲ್ಲಿ ಹರಿಯುವ ಸಾಧ್ಯತೆ ಇದೆಯೋ, ತಡೆಗೋಡೆ ಕಟ್ಟುವ ಅವಕಾಶಗಳ ಬಗ್ಗೆ ಮೊದಲು ತೀರ್ಮಾನಿಸಿ ನಂತರ ಸೆನ್ಸಾರ್ ಪಂಪ್‌ಗಳ ಮೂಲಕ ನೀರನ್ನು ಹೊರ ಹಾಕುವ ಕೆಲಸದ ಕಡೆ ಗಮನ ಹರಿಸುವಂತೆ ನಾರಾಯಣಸ್ವಾಮಿ ಸೂಚಿಸಿದರು.
ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ರೈಲ್ವೆ ಇಲಾಖೆಯ ಮೈಸೂರು ವಿಭಾಗದ ಮ್ಯಾನೇಜರ್ ರಾಹುಲ್ ಅಗರವಾಲ್, ವಿಭಾಗೀಯ ಇಂಜಿನಿಯರ್ ಕೆ.ರವಿಚಂದ್ರನ್, ರೋಹನ್ ಡೊಂಗಾರೆ, ಹುಬ್ಬಳ್ಳಿ ವಿಭಾಗದ ವಿಜಯ್ ಕಾಟ್ಕರ್, ಪ್ರದೀಪ್‌ಕುಮಾರ್, ಚಿತ್ರದುರ್ಗ ತಹಸೀಲ್ದಾರ್ ಸತ್ಯನಾರಾಯಣ ಇದ್ದರು.
ಒಳ ಮೀಸಲಾತಿ ಜಾರಿ ಬಗ್ಗೆ ಯಾರಿಗೂ ಮನಸ್ಸಿಲ್ಲ: ಕೇಂದ್ರ ಸಚಿವ ಎ. ನಾರಾಯಣಸ್ವಾಮಿ
-ಎಲ್ಲವೂ ಪ್ರೊಸೀಡಿಂಗ್‌್ಸನಲ್ಲಿ ಬರಬೇಕು
ಚಿತ್ರದುರ್ಗ: ರೈಲ್ವೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸಚಿವ ಎ.ನಾರಾಯಣಸ್ವಾಮಿ ಚರ್ಚಿಸಿದ ವಿಷಯ ಪ್ರೊಸೀಂಡಿಂಗ್‌ನಲ್ಲಿ ಬರಬೇಕು ಎಂದು ಸೂಚನೆ ನೀಡಿದರು. ಒಂದು ಹಂತದಲ್ಲಿ ಪ್ರೊಸೀಡಿಂಗ್ ಬರೆಯುತ್ತಿರುವವರು ಯಾರು ಎಂದು ಕೇಳಿ ಖಚಿತ ಪಡಿಸಿಕೊಂಡರು. ಎಲ್ಲವೂ ದಾಖಲಾಗಬೇಕೆಂದು ಸೂಚನೆ ನೀಡಿದ್ದು, ವಿಶೇಷವಾಗಿ ಕಂಡಿತು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಪ್ರೊಸೀಡಿಂಗ್‌್ಸ ಬರೆಯುವಲ್ಲಿ ಅಧಿಕಾರಿಗಳು ಲೋಪ ಎಸಗಿದ್ದರು. ಚರ್ಚಿಸಲಾದ ಪ್ರಮುಖ ಸಂಗತಿಯನ್ನೇ ಕೈ ಬಿಟ್ಟಿದ್ದರು. ಡಿಸಿ ಕಚೇರಿಯಲ್ಲಿ ಇಂತಹುಗಳು ನಡೆಯುತ್ತವಾ ಎಂಬ ಸಂಗತಿ ಜನರಲ್ಲಿ ಹರಿದಾಡಿತ್ತು. ಈ ಕಾರಣಕ್ಕಾಗಿಯೇ ಸಚಿವ ನಾರಾಯಣಸ್ವಾಮಿ ಪ್ರೊಸೀಡಿಂಗ್‌್ಸನಲ್ಲಿ ಎಲ್ಲವೂ ಬರಬೇಕೆಂದು ತಾಕೀತು ಮಾಡಿದರು ಎನ್ನಲಾಗಿದೆ.