'ಶೀಘ್ರ ಕುಮಾರಸ್ವಾಮಿಗೆ ಸಿಎಂ ಪಟ್ಟ : ಅಲ್ಲಿಂದಲೇ ಬಂತು ಹೇಳಿಕೆ'

Kannadaprabha News   | Asianet News
Published : Dec 15, 2020, 04:25 PM IST
'ಶೀಘ್ರ ಕುಮಾರಸ್ವಾಮಿಗೆ ಸಿಎಂ ಪಟ್ಟ : ಅಲ್ಲಿಂದಲೇ ಬಂತು   ಹೇಳಿಕೆ'

ಸಾರಾಂಶ

ರಾಜ್ಯ ರಾಜಕೀಯದಲ್ಲಿ ದಿನ ದಿನವೂ ಹೊಸ ಬದಲಾವಣೆಗಳಾಗುತ್ತಿದೆ.  ಇದೇ ವೇಳೆ ಹೊಸ ಸುದ್ದಿಯೊಂದನ್ನು ಹೇಳಲಾಗಿದೆ. 

ಕೆ.ಆರ್‌ ಪೇಟೆ (ಡಿ.15): ರಾಜ್ಯದಲ್ಲಿ ಬಿಜೆಪಿ ಸ್ವಂತ ಶಕ್ತಿಯಿಂದ ಅಧಿಕಾರ ನಡೆಸುತ್ತಿದ್ದು ಜೆಡಿಎಸ್ ಬೆಂಬಲದ ಅಗತ್ಯವುಲ್ಲ. ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗುವ ಭ್ರಮೆಯಲ್ಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ  ನಾರಾಯಣ ಗೌಡ  ಲೇವಡಿ ಮಾಡಿದರು. 

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ  ಸಚಿವರು ವರಿಷ್ಠರ ಮಟ್ಟದಲ್ಲಿ ಏನಾಗುತ್ತಿದೆ ಎನ್ನುವುದರ ಅರಿವು ನನಗಿಲ್ಲ.  ಆದರೆ ಎಚ್ ಡಿ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗುವ ಭ್ರಮೆಯಲ್ಲಿದ್ದು ತಾವೇ ಮುಂದಿನ ಮುಖ್ಯಮಂತ್ರಿ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ. 

ಸುಮಲತಾಗೆ ಒಲಿದಿದ್ದ ಅದೃಷ್ಟ : ಹೆಚ್ಚಾದ ಡಿಮ್ಯಾಂಡ್ ...

ಮುಂದಿನ ಎರಡೂವರೆ ವರ್ಷಗಳ ಕಾಲ ಬಿ ಎಸ ಯಡಿಯೂರಪ್ಪ ಅವರೆ ಮುಖ್ಯಮಂತ್ರಿಯಾಗಿರುತ್ತಾರೆ. ಕುಮಾರಸ್ವಾಮಿ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುವುದು ಕೇವಲ  ಭ್ರಮೆಯಾಗಿಯೇ  ಉಳಿಯಲಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಭದ್ರಕೋಟೆ ಛಿದ್ರ ಮಾಡಲಾಗಿದೆ ಎಂದು ನಾರಾಯಣ ಗೌಡ ಹೇಳಿದರು. 

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು