ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗ್ತಾರ ಸುಮಲತಾ..? ವರ್ಕ್ ಆಗುತ್ತಾ ಟೆಕ್ನಿಕ್

Kannadaprabha News   | Asianet News
Published : Dec 15, 2020, 04:02 PM IST
ಕಾಂಗ್ರೆಸ್  ಗೆಲುವಿಗೆ ಸಹಕಾರಿಯಾಗ್ತಾರ ಸುಮಲತಾ..? ವರ್ಕ್ ಆಗುತ್ತಾ  ಟೆಕ್ನಿಕ್

ಸಾರಾಂಶ

ಕಾಂಗ್ರೆಸ್  ಮುಖಂಡರೋರ್ವರಿಗೆ ನೆರವಾಗುತ್ತಾ ಸುಮಲತಾ ಟೆಕ್ನಿಕ್.. ಏನಿದು ಹೊಸ ತಂತ್ರ..?

ಮಂಡ್ಯ (ಡಿ.15): ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ಮಾಜಿ ಸಚಿವ ಅಂಬರೀಶ್ ಸಂಸದೆ  ಸುಮಲತಾ ಅಂಬರೀಶ್ ಭಾವಚಿತ್ರದೊಂದಿಗೆ  ಕಹಳೆ ಊದುತ್ತಿರುವ  ಮನುಷ್ಯ ಗುರುತಿನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಕೈಗೊಂಡು ಚುನಾವಣಾ ಆಯೋಗದ ಸೂಚನೆ ಧಿಕ್ಕರಿಸಿದ್ದಾರೆ. 

ಚುನಾವಣೆಗೆ ಸ್ಪರ್ಧಿಸಿರುವ  ಅಭ್ಯರ್ಥಿಗಳು ರಾಜಕೀಯ ಮುಖಂಡರ ಭಾವಚಿತ್ರಗಳನ್ನು ಬಳಸದಂತೆ ಕಟ್ಟುನಿಟ್ಟಿನ  ಸೂಚನೆ ನೀಡಿದ್ದರು  ಬಿ ಎಸ್ ಪ್ರದೀಪ್ ಎಂಬ ಅಭ್ಯರ್ಥಿ  ಕಹಳೆ ಗುರುತು ಬಳಸಿಕೊಂಡು  ಅದಕ್ಕೆ ಸ್ವಾಭಿಮಾನದ  ಕಹಳೆ ಎಂದು ಹೆಸರಿಟ್ಟು  ಅಭ್ಯರ್ಥಿ ಭಾವಚಿತ್ರದೊಂದಿಗೆ ಮತ ಕೇಳುತ್ತಿರುವ ಕರಪತ್ರ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಸುಮಲತಾಗೆ ಒಲಿದಿದ್ದ ಅದೃಷ್ಟ : ಹೆಚ್ಚಾದ ಡಿಮ್ಯಾಂಡ್

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ  1993ರ ಪ್ರಕರಣ 7(2)ರಂತೆ ಗ್ರಾ ಪಂ ಚುನಾವಣೆಯನ್ನು ಕ್ಷದ ಆಧಾರ ರಹಿತವಾಗಿ  ನಡೆಸಲಾಗುತ್ತದೆ. 

ಈ ರೀತಿ ಬಳಸಿಕೊಳ್ಳುವುದು ಕಾನೂನು ರೀತಿ ಉಲ್ಲಂಘನೆಯಾಗುತ್ತದೆ. 

ಪ್ರದೀಪ್ ಅವರು ಮಂಡ್ಯ ವಿಧಾನಸಭಾ ಕ್ಷೇತ್ರ ಸಾಮಾಜಿಕ ಜಾಲತಾಣ ವಿಭಾಗದ ಮಾಜಿ  ಸಂಯೋಜಕರಾಗಿದ್ದು ಯೂತ್ ಕಾಂಗ್ರೆಸ್ ಮಂಡ್ಯ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ. 

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ