Shakti Scheme: ಉಚಿತ ಪ್ರಯಾಣಿಸುವ ಮಹಿಳೆಯರಿಗೆ ಕಿರಿಕಿರಿ ಮಾಡಿದರೆ ಕಟ್ಟುನಿಟ್ಟಿನ ಕ್ರಮ

By Gowthami K  |  First Published Jun 11, 2023, 8:49 PM IST

ಮಡಿಕೇರಿಯಲ್ಲಿ ಶಕ್ತಿಯೋಜನೆಗೆ ಚಾಲನೆ ನೀಡಿದ ಸಣ್ಣ ನೀರಾವರಿ ಹಾಗೂ ವಿಜ್ನಾನ ತಂತ್ರಜ್ಞಾನ ಸಚಿವ ಭೋಸರಾಜ್ ಅವರು ಚಾಲನೆ ನೀಡಿದರು.


ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜೂ.11): ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಗೆ ಭಾನುವಾರ ಚಾಲನೆ ನೀಡಿದ ಹಿನ್ನೆಲೆ ಮಡಿಕೇರಿಯಲ್ಲೂ ಸಣ್ಣ ನೀರಾವರಿ ಮತ್ತು ವಿಜ್ನಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಭೋಸರಾಜ್ ಅವರು ಚಾಲನೆ ನೀಡಿದರು. ಮಡಿಕೇರಿಯ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿದ ಸಚಿವ ಭೋಸರಾಜ್ ಬಳಿಕ ಯೋಜನೆ ಜಾರಿಗಾಗಿ ಅಲಂಕೃತಗೊಂಡಿದ್ದ ಬಸ್ಸಿನಲ್ಲಿ ಮಹಿಳೆಯರಿಗೆ ಹೂವು ನೀಡಿ ಸ್ವಾಗತಿಸಿದರು. ಜೊತೆಗೆ ಸ್ವತಃ ತಾವೂ ಕೂಡ ಟಿಕೆಟ್ ಖರೀದಿಸಿ ಬಸ್ಸಿನಲ್ಲಿ ಪ್ರಯಾಣ ಮಾಡಿದರು. ಈ ವೇಳೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಸೇರಿದಂತೆ ಪ್ರಮುಖರು ಬಸ್ಸಿನಲ್ಲಿ ಟಿಕೆಟ್ ಪಡೆದು ಪ್ರಯಾಣ ಮಾಡಿದರು.

Tap to resize

Latest Videos

undefined

ಬಸ್ಸಿನಲ್ಲಿ ಪ್ರಯಾಣ ಮಾಡಿದ ಸಚಿವ ಭೋಸರಾಜ್ ಮತ್ತು ಮಡಿಕೇರಿ ಶಾಸಕ ಮಂತರ್ ಗೌಡ ಮಹಿಳೆಯರಿಗೆ ಸಿಹಿ ವಿತರಿಸಿದರು. ಈ ವೇಳೆ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿದ ಸಚಿವ ಭೋಸರಾಜ್, ನಾವು ಕೊಟ್ಟ ಮಾತಿನಂತೆ ಸರ್ಕಾರ ಬಂದು ಮೊದಲ ಸಚಿವ ಸಂಪುಟದಲ್ಲೇ ಐದು ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದೆವು. ಈಗ ಮೊದಲ ಯೋಜನೆಯಾಗಿ ಶಕ್ತಿಯೋಜನೆಯನ್ನು ಜಾರಿ ಮಾಡಿದ್ದೇವೆ. ಅಗಸ್ಟ್ 15 ಒಳಗಾಗಿ ಎಲ್ಲಾ ಯೋಜನೆಗಳನ್ನು ಮಾಡುತ್ತೇವೆ ಎಂದಿದ್ದಾರೆ.

ಮದುವೆಯಾಗಿ ವಿದೇಶಕ್ಕೆ ಹನಿಮೂನ್‌ ಹೋದ ಚೆನ್ನೈ ವೈದ್ಯ ದಂಪತಿ ಫೋಟೋಶೂಟ್

ಯಾವುದೇ ಕಾರಣಕ್ಕೂ ಯಾವ ಪ್ರಯಾಣಿಕರಿಗೂ ಯಾವುದೇ ತೊಂದರೆ ನೀಡಬಾರದು. ತೊಂದರೆ ನೀಡಿದರೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗುವುದು. ಅಧಿಕಾರಿಗಳ ಸಹಕಾರದಿಂದ ಈ ಯೋಜನೆ ಸಂಪೂರ್ಣ ಯಶಸ್ವಿ ಆಗಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಚಿವ ಭೋಸರಾಜ್ ಹೇಳಿದರು.

ರಾಜ್ಯದಲ್ಲಿ ಯಾವುದೇ ಭಾಗಕ್ಕೆ ಪ್ರಯಾಣ ಮಾಡುವುದಕ್ಕೆ ಉಚಿತ ಇರಲಿದೆ. ಎಸಿ, ಫ್ಲೆಬಸ್ ಸೇರಿದಂತೆ ಕೆಲವು ಬಸ್ಸುಗಳಲ್ಲಿ ಪ್ರಯಾಣಿಸುವುದಕ್ಕೆ ಮಹಿಳೆಯರಿಗೆ ಯಾವುದೇ ವಿನಾಯಿತಿ ಇಲ್ಲ. ಆ ಬಸ್ಸುಗಳಲ್ಲಿ ಓಡಾಡುವವರು ಸ್ಥಿತಿವಂತರು. ಹೀಗಾಗಿ ಜನಸಾಮಾನ್ಯರಿಗೆ ಅನುಕೂಲ ಆಗಲೇಬೇಕೆಂಬ ದೃಷಿಯಿಂದ ಕೆಂಪು ಬಸ್ಸುಗಳಲ್ಲಿ ಉಚಿತವಾಗಿ ಓಡಾಡುವುದಕ್ಕೆ ಅವಕಾಶ ನೀಡಲಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ವಿದ್ಯುತ್ ಬಿಲ್ಲು ಡಬ್ಬಲ್ ಆಗಿರುವುದರಲ್ಲಿ ನಮ್ಮ ಪಾತ್ರವಿಲ್ಲ. ಅದು ಕೆಆರ್ಸಿಎಲ್ ದರ ಹೆಚ್ಚಿಸುವ ಮತ್ತು ಅದನ್ನು ಮಾರಾಟ ಮಾಡುವ ನಿರ್ಧಾರ ಮಾಡುತ್ತದೆ. ಅದೇ ರೀತಿ ಈ ಹಿಂದಿನ ಬಿಲ್ಲನ್ನು ಜಾಸ್ತಿ ಮಾಡಿದೆಯಷ್ಟೇ ಎಂದು ಕೊಡಗು ಉಸ್ತುವಾರಿ ಸಚಿವ ಭೋಸರಾಜ ಅವರು ಹೇಳಿದ್ದಾರೆ.

ಮಡಿಕೇರಿಯಲ್ಲಿ ಶಕ್ತಿಯೋಜನೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು ಗೃಹಜ್ಯೋತಿ ಯೋಜನೆಯನ್ನು ನಾವು ಇನ್ನೂ ಜಾರಿ ಮಾಡಿಲ್ಲ. ನಾವು ಆಶ್ವಾಸನೆ ಕೊಟ್ಠಿರುವಂತೆ ಯೋಜನೆಯನ್ನು ಜಾರಿ ಮಾಡಿಯೇ ಮಾಡ್ತೇವೆ. 200 ಯುನಿಟ್ ವರೆಗೆ ಉಚಿತವಾಗಿ ಎಲ್ಲರಿಗೂ ಕೊಡ್ತೇವೆ. ಈ ಕಾರ್ಯಕ್ರಮವನ್ನು ಜುಲೈ ತಿಂಗಳಿಂದ ಜಾರಿ ಮಾಡುತ್ತೇವೆ. ಈಗ ಜಾಸ್ತಿ ಆಗಿರುವುದು ಸರ್ಕಾರ ಮಾಡಿದ್ದಲ್ಲ ಎಂದಿದ್ದಾರೆ

ಆರೋಗ್ಯ ಇಲಾಖೆಯ ಅಧಿಕಾರಿಗಳ ಚಳಿ ಬಿಡಿಸಿದ ಧಾರವಾಡ ಜಿಲ್ಲಾ ಉಸ್ತುವಾರಿ

ಇನ್ನು ಮದ್ಯದ ಬೆಲೆ ಹೆಚ್ಚಳ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಯಿಸಿದ ಅವರು ಮದ್ಯಪಾನ ನಿಷೇಧಿಸಬೇಕೆಂದು ರಾಜ್ಯದಲ್ಲಿ ಹಲವು ಸಂಘಟನೆಗಳು ಪ್ರಯತ್ನಿಸುತ್ತಿವೆ. ಮದ್ಯ ಸೇವನೆ ಮಾಡುವವರು ಕೆಲವರು ಮಾತ್ರವೇ. ಆದ್ದರಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗದಂತೆ ಸರ್ಕಾರ ಆದಾಯ ಮಾಡುತ್ತೆ ಎಂದು ಮದ್ಯದ ಬೆಲೆ ಹೆಚ್ಚಿಸಿರುವುದನ್ನು ಸಚಿವ ಸಮರ್ಥಿಸಿಕೊಂಡಿದ್ದಾರೆ.

ರಾಯಚೂರಿನಲ್ಲಿ ಸಚಿವಸ್ಥಾನಕ್ಕೆ ಪ್ರತಿಭಟನೆ ನಡೆಯುತ್ತಿಲ್ಲ. AIIMS ಆಸ್ಪತ್ರೆ ವಿಚಾರಕ್ಕಾಗಿ 300 ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ ಎಂದು ಭೋಸರಾಜ್ ಹೇಳಿದ್ದಾರೆ. ಹಿಂದೆ ರಾಯಚೂರಿಗೆ ಎಐಐಎಂಎಸ್ ಆಸ್ಪತ್ರೆ ಮಂಜೂರಾಗಿತ್ತು. ಇದನ್ನು ಅಲ್ಲಿಗೆ ಮಾಡಲಾಗುವುದು ಎಂಬ ಭರವಸೆ ನೀಡಲಾಗಿತ್ತು. ಆದರೆ ಮೊನ್ನೆಯಷ್ಟೇ ಪಕ್ಕದ ಗುಲ್ಬರ್ಗ ಜಿಲ್ಲೆಯವರಾದ ಶರಣಪ್ರಕಾಶ ಪಾಟೀಲ್ ಅವರು ಗುಲ್ಭರ್ಗಕ್ಕೆ ಎಐಐಎಂಎಸ್ ಆಸ್ಪತ್ರೆ ಮಾಡಲಾಗುವುದು ಎಂದು ಹೇಳಿದ್ದರು. ಇದರ ವಿರುದ್ಧ ರಾಯಚೂರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ.  ಈ ಸಮಸ್ಯೆ ಈಗ ಬಗೆ ಹರಿದಿದ್ದು ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದಾರೆ.

click me!