ಬೀಳಗಿ ಮತಕ್ಷೇತ್ರದಲ್ಲಿ ಶೇ 100ರಷ್ಟು ನೀರಾವರಿ ಮಾಡುವುದು ನನ್ನ ಕನಸಾಗಿತ್ತು. ಅದರಂತೆ ಕಳೆದ 20 ವರ್ಷಗಳಲ್ಲಿ ಮತಕ್ಷೇತ್ರಕ್ಕೆ ತಂದ ನೀರಾವರಿ ಯೋಜನೆಗಳ ಮೂಲಕ ಅದು ಸಾಕಾರಗೊಳ್ಳುತ್ತ ಸಾಗಿದೆ. ಮುಂದಿನ 2 ವರ್ಷಗಳಲ್ಲಿ ಎಲ್ಲ ಯೋಜನೆಗಳು ಪೂರ್ಣಗೊಂಡು ಪೂರ್ಣಫಲ ಮತಕ್ಷೇತ್ರಕ್ಕೆ ದೊರೆಯಲಿದೆ: ಸಚಿವ ಮುರುಗೇಶ ನಿರಾಣಿ
ಬಾಗಲಕೋಟೆ(ಮಾ.07): ಬಾದಾಮಿ ತಾಲೂಕಿನ ಭೂಮಿ ಫಲವತ್ತಾಗಿದೆ. ನೀರು ಮತ್ತು ವಿದ್ಯುತ್ ನೀಡಿದರೆ ನಮ್ಮ ರೈತ ಶ್ರಮಪಟ್ಟು ದುಡಿದು ಆರ್ಥಿಕವಾಗಿ ಸದೃಢನಾಗುತ್ತಾನೆ.ಈ ನಿಟ್ಟನಲ್ಲಿ ನಾನು ಸಹಕಾರ ನೀಡಲು ಸಿದ್ಧ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.
ಬಾದಾಮಿ ತಾಲೂಕಿನ ಕೆರಕಲಮಟ್ಟಿಯ ಕೇದಾರನಾಥ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಕೇದಾರನಾಥ, ಎಂಆರ್‌ಎನ್ ಹಾಗೂ ಬಾದಾಮಿ ಸಕ್ಕರೆ ಕಾರ್ಖಾನೆಗಳ 2022-23ನೇ ಸಾಲಿನ ಹಂಗಾಮು ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
undefined
ಬೀಳಗಿ: ಮುರುಗೇಶ್ ನಿರಾಣಿ ಮಣಿಸುವವರು ಯಾರು?
ಬೀಳಗಿ ಮತಕ್ಷೇತ್ರದಲ್ಲಿ ಶೇ 100ರಷ್ಟು ನೀರಾವರಿ ಮಾಡುವುದು ನನ್ನ ಕನಸಾಗಿತ್ತು. ಅದರಂತೆ ಕಳೆದ 20 ವರ್ಷಗಳಲ್ಲಿ ಮತಕ್ಷೇತ್ರಕ್ಕೆ ತಂದ ನೀರಾವರಿ ಯೋಜನೆಗಳ ಮೂಲಕ ಅದು ಸಾಕಾರಗೊಳ್ಳುತ್ತ ಸಾಗಿದೆ. ಮುಂದಿನ 2 ವರ್ಷಗಳಲ್ಲಿ ಎಲ್ಲ ಯೋಜನೆಗಳು ಪೂರ್ಣಗೊಂಡು ಪೂರ್ಣಫಲ ಮತಕ್ಷೇತ್ರಕ್ಕೆ ದೊರೆಯಲಿದೆ. ಅದರೊಡನೆ ಮುಂದಿನ 20 ವರ್ಷಗಳ ಅವಗೆ ಕೊರತೆ ಆಗದಂತೆ ವಿದ್ಯುತ್ ದೊರೆಯುವಂತೆ ನಮ್ಮ ಮತಕ್ಷೇತ್ರದ ವಿದ್ಯುತ್ ಪ್ರಸರಣ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಕಾಮಗಾರಿಗಳು ನಡೆಯುತ್ತಿವೆ. ನಮ್ಮ ರೈತ ಸುಸ್ಥಿರನಾಗಬೇಕು. ಹೀಗಾಗಿ ನಾನು ಕೃಷಿ ನೀರಾವರಿಗೆ ಆದ್ಯತೆ ನೀಡಿದ್ದೇನೆ ಎಂದು ಹೇಳಿದರು.
ಶಿಕ್ಷಣ, ರಸ್ತೆ, ಆರೋಗ್ಯ, ಮೂಲ ಸೌಕರ್ಯ, ಕುಡಿಯುವ ನೀರು ಎಲ್ಲ ವಿಭಾಗಗಳಲ್ಲಿಯೂ ಬೀಳಗಿ ಮತಕ್ಷೇತ್ರ ಅಭಿವೃದ್ಧಿಯಡೆಗೆ ಸಾಗುತ್ತಿದೆ. ಹಲಕುರ್ಕಿಯಲ್ಲಿ ವಿಮಾನ ನಿಲ್ದಾಣ ಹಾಗೂ .25 ಸಾವಿರ ಕೋಟಿ ವೆಚ್ಚದ ಕæೖಗಾರಿಕಾ ಕಾರಿಡಾರ್ ನಿರ್ಮಾಣವಾಗಲಿದ್ದು 30 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ. ಮುಚ್ಚಿದ್ದ ಕಾರ್ಖಾನೆ ಮುರು ಪ್ರಾರಂಭ ಆಗಿರುವುದರಿಂದ ಈ ಭಾಗದ ರೈತರಿಗೆ ಅನುಕೂಲವಾಗುವ ಜೊತೆಗೆ ಸ್ಥಳೀಯ ಯುವಕರಿಗೆ ಉದ್ಯೋಗ ದೊರೆತಿದೆ. ನಿರಾಣಿ ಸಮೂಹ ಈಗ ಸಕ್ಕರೆ ಉತ್ಪಾದನೆಯಲ್ಲಿ ದೇಶದಲ್ಲಿಯೇ ದ್ವಿತೀಯ ಹಾಗೂ ಎಥೆನಾಲ್ ಉತ್ಪಾದಲ್ಲಿಯೇ ಏಷಿಯಾದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಈ ಬೆಳವಣಿಗೆಗೆ ಈ ಭಾಗದ ರೈತ ಕುಟುಂಬಗಳ ಆಶೀರ್ವಾದವೇ ಕಾರಣ ಎಂದು ಅವರು ಹೇಳಿದ್ದಾರೆ.
ನಿರಾಣಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಪ. ಸದಸ್ಯ ಹಣಮಂತ ನಿರಾಣಿ, ಮಾಜಿ ಜಿ.ಪಂ. ಅಧ್ಯಕ್ಷ ಹೂವಪ್ಪ ರಾಠೋಡ್, ಹಿರಿಯ ಮುಖಂಡರಾದ ಆರ್.ಆರ್.ನಾಯ್ಕ್, ಆನಂದ ದೇಸಾಯಿ, ಬಿಜೆಪಿ ಬೀಳಗಿ ಮಂಡಲ ಅಧ್ಯಕ್ಷ ಈರಣ್ಣ ಗಿಡ್ಡಪ್ಪನವರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಬ್ಬು ವಿಭಾಗದ ಮುಖ್ಯಸ್ಥ ಕಾಂಡೇಕರ್ ಸ್ವಾಗತಿಸಿದರು. ಮಹೇಂದ್ರ ಪಾಟೀಲ ವಂದಿಸಿದರು. ಗಿರೀಶ ಸುನಗದ, ಹಣಮಂತಗೌಡ ಪಾಟೀಲ, ಕೃಷ್ಣಗೌಡ ನಾಡಗೌಡ, ಸುರೇಶ ಕೊಳ್ಳಿ, ಬಶೆಟ್ಟಿಅಂಗಡಿ, ಸಂಗಯ್ಯ ಸರಗಣಾಚಾರಿ, ಮಹಾದೇವಪ್ಪ ಪಟ್ಟಣಶೆಟ್ಟಿ, ರಾಮಣ್ಣ ಕಾಳಪ್ಪಗೋಳ, ಪ್ರವೀಣ ಅರಕೇರಿ, ಹಣಮಂತ ಪಾಟೀಲ, ಮಲ್ಲಪ್ಪ ಹೆರಕಲ್, ಹಣಮಂತ ಗೋಡಿ ಪ್ರಮುಖರು ಉಪಸ್ಥಿತರಿದ್ದರು.