Mangaluru: ಹೋಲಿ ಡಿಜೆ ಸಂಭ್ರಮ ವೇಳೆ ಭಜರಂಗದಳ ದಾಳಿ ನಡೆಸಿ ದಾಂಧಲೆ!, 6 ಮಂದಿ ಅರೆಸ್ಟ್

Published : Mar 26, 2023, 03:21 PM ISTUpdated : Mar 26, 2023, 05:37 PM IST
Mangaluru: ಹೋಲಿ ಡಿಜೆ ಸಂಭ್ರಮ ವೇಳೆ ಭಜರಂಗದಳ ದಾಳಿ ನಡೆಸಿ ದಾಂಧಲೆ!, 6 ಮಂದಿ ಅರೆಸ್ಟ್

ಸಾರಾಂಶ

ಹೋಲಿ ಸಂಭ್ರಮದ ಡಿಜೆ ಪಾರ್ಟಿಗೆ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ವಸ್ತುಗಳಿಗೆ ಹಾನಿ ಮಾಡಿ ಬ್ಯಾನರ್ ಹರಿದು ದಾಂಧಲೆ ನಡೆಸಿದ ಘಟನೆ ಮಂಗಳೂರು ನಗರದ ಮರೋಳಿ ಎಂಬಲ್ಲಿ ನಡೆದಿದೆ.

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್  

ಮಂಗಳೂರು (ಮಾ.26): ಹೋಲಿ ಸಂಭ್ರಮದ ಡಿಜೆ ಪಾರ್ಟಿಗೆ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ವಸ್ತುಗಳಿಗೆ ಹಾನಿ ಮಾಡಿ ಬ್ಯಾನರ್ ಹರಿದು ದಾಂಧಲೆ ನಡೆಸಿದ ಘಟನೆ ಮಂಗಳೂರು ನಗರದ ಮರೋಳಿ ಎಂಬಲ್ಲಿ ನಡೆದಿದೆ. ರಂಗ್ ದೇ ಬರ್ಸಾ ಹೆಸರಿನಲ್ಲಿ ನಡೆಯುತ್ತಿದ್ದ ಹೋಲಿ ಆಚರಣೆಯಲ್ಲಿ ಡಿಜೆ ಪಾರ್ಟಿ ಜೊತೆಗೆ ಬಣ್ಣ ಎರಚಿ ಯುವಕ-ಯುವತಿಯರು ಸಂಭ್ರಮಿಸುತ್ತಿದ್ದರು. ಅಶ್ಲೀಲ ವರ್ತನೆ ಆರೋಪಿಸಿ ಹೋಲಿ ಸಂಭ್ರಮಕ್ಕೆ ಭಜರಂಗದಳ ದಾಳಿ ನಡೆಸಿದೆ. ಅನ್ಯಕೋಮಿನ ಯುವಕರ ಜೊತೆ ಹೋಲಿ ಆಚರಣೆ ಅಂತ ಆರೋಪಿಸಿ ದಾಳಿ ನಡೆಸಲಾಗಿದ್ದು, ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು ಎನ್ನಲಾಗಿದೆ.

ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಮರು 4% ಮೀಸಲಾತಿ ಪಡೆದುಕೊಂಡಿದ್ರು: ಪ್ರತಾಪ್ ಸಿಂಹ

ಹೋಲಿ ಸಂಭ್ರಮದ ಬ್ಯಾನರ್ ಹರಿದು ಹಾಕಿ ವಸ್ತುಗಳನ್ನ ಪುಡಿಗೈದು ದಾಂಧಲೆ ನಡೆಸಿದ್ದು, ಈ ವೇಳೆ ಭಜರಂಗದಳ ಕಾರ್ಯಕರ್ತರು ಮತ್ತು ಆಯೋಜಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆಯೋಜಕರು ಮತ್ತು ಕೆಲವರ ಮೇಲೆ ಹಲ್ಲೆಗೂ ಯತ್ನಿಸಿದ ಭಜರಂಗದಳದ ಕಾರ್ಯಕರ್ತರು ಕಾರ್ಯಕ್ರಮದ ಬಳಿ ದಾಂಧಲೆ ನಡೆಸಿದ್ದಾರೆ. ಧ್ವನಿ ವರ್ಧಕ ಸೇರಿ ಹಲವು ವಸ್ತುಗಳಿಗೆ ಹಾನಿ ಎಸಗಿರೋದಾಗಿ ಆರೋಪಿಸಲಾಗಿದೆ.  ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಭಜರಂಗದಳ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ವರುಣಾದಲ್ಲಿ ಸ್ಫರ್ಧೆ ಪಕ್ಷ ತೀರ್ಮಾನ ಮಾಡಿದ ಬಳಿಕ ಹೇಳುತ್ತೇನೆ: ವಿಜಯೇಂದ್ರ 

ಹೋಳಿ ಸಂಭ್ರಮದ ಡಿಜೆ ಪಾರ್ಟಿಗೆ ಭಜರಂಗದಳ ಕಾರ್ಯಕರ್ತರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ. ಆರು ಮಂದಿ ಭಜರಂಗದಳ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಗಣೇಶ್ ಅತ್ತಾವರ, ಜೈ ಪ್ರಶಾಂತ್, ಬಾಲಚಂದರ್, ಅಕ್ಷಯ್, ಚಿರಾಗ್ ಮತ್ತು ಮಿಥುನ್ ಬಂಧಿತರಾಗಿದ್ದಾರೆ.

PREV
Read more Articles on
click me!

Recommended Stories

ಇಂದು ಲೋಕಸಭೆಯಲ್ಲಿ ‘ವಂದೇ ಮಾತರಂ’ ಚರ್ಚೆ: ಮೋದಿ ಚಾಲನೆ
ಬೆಳಗಾವಿ ಅಧಿವೇಶನ: 89 ಸಂಘಟನೆಗಳಿಂದ ಪ್ರತಿಭಟನೆಗೆ ಕರೆ, 6000ಕ್ಕೂ ಹೆಚ್ಚು ಪೊಲೀಸರಿಂದ ಸರ್ಪಗಾವಲು