ಬಾವಿ ತೋಡುವ ಕೆಲಸವನ್ನು ಕೈಬಿಡಿ: ಗೌರಿ ನಾಯ್ಕ್ ಅವರಿಗೆ ಮನವಿ ಮಾಡಿದ ಸಚಿವ ಮಂಕಾಳು ವೈದ್ಯ!

By Govindaraj S  |  First Published Feb 18, 2024, 10:40 PM IST

ಜಿಲ್ಲೆಯ ಶಿರಸಿಯ ಗಣೇಶ್‌ನಗರದಲ್ಲಿ ಜನವರಿ 30ರಿಂದ ಬಾವಿ ತೋಡುತ್ತಿರುವ ಗೌರಿ ನಾಯ್ಕ್ ಅವರನ್ನು ಭೇಟಿಯಾದ ಸಚಿವ ಮಂಕಾಳು ವೈದ್ಯ, ಗೌರಿ ನಾಯ್ಕ ತೋಡುತ್ತಿರುವ ಬಾವಿಯನ್ನು ವೀಕ್ಷಿಸಿ ಕೆಲಸ ಕೈ ಬಿಡುವಂತೆ ಮನವಿ ಮಾಡಿದರು. 


ಉತ್ತರ ಕನ್ನಡ (ಫೆ.18): ಜಿಲ್ಲೆಯ ಶಿರಸಿಯ ಗಣೇಶ್‌ನಗರದಲ್ಲಿ ಜನವರಿ 30ರಿಂದ ಬಾವಿ ತೋಡುತ್ತಿರುವ ಗೌರಿ ನಾಯ್ಕ್ ಅವರನ್ನು ಭೇಟಿಯಾದ ಸಚಿವ ಮಂಕಾಳು ವೈದ್ಯ, ಗೌರಿ ನಾಯ್ಕ ತೋಡುತ್ತಿರುವ ಬಾವಿಯನ್ನು ವೀಕ್ಷಿಸಿ ಕೆಲಸ ಕೈ ಬಿಡುವಂತೆ ಮನವಿ ಮಾಡಿದರು. ಅಂಗನವಾಡಿ ಮಕ್ಕಳಿಗೆ ಕುಡಿಯಲು ನೀರಿನ ಸಮಸ್ಯೆಯಿದೆ ಎಂಬ ಕಾರಣಕ್ಕಾಗಿ ಗಣೇಶ ನಗರದವರೇ ಆದ ಗೌರಿ ನಾಯ್ಕ ಬಾವಿ ತೋಡಲು ಮುಂದಾಗಿದ್ದರು. 

ಆದರೆ, ಅದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅನುಮತಿ ಪಡೆಯದ ಕಾರಣ ಸಾಕಷ್ಟು ಗೊಂದಲ ಉಂಟಾಗಿತ್ತು. ಬಳಿಕ ಅಂತಿಮವಾಗಿ ಬಾವಿ ತೋಡಲು ಮೌಖಿಕವಾಗಿ ಅನುಮತಿ ನೀಡಿದ್ದರು. ಶಾಸಕ ಭೀಮಣ್ಣ ನಾಯ್ಕ ಸಹ ಮುತವರ್ಜಿ ವಹಿಸಿದ್ದರು. ಈ ಹಿನ್ನಲೆಯಲ್ಲಿ ಇಂದು ಸಚಿವ ವೈದ್ಯ ಸ್ಥಳಕ್ಕೆ ಭೇಟಿ ನೀಡಿ, ಕುಡಿಯುವ ನೀರಿಗೆ ಅಗತ್ಯವಿರುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಅಲ್ಲದೇ, ಬಾವಿಯ ಅಗಲ ಸಣ್ಣದಾಗಿರುವ ಕಾರಣ ಉಸಿರು ಗಟ್ಟುವ ಸಾಧ್ಯತೆಯಿದ್ದು, ಇಲ್ಲಿಗೆ ಕೆಲಸ ಕೈಬಿಡುವಂತೆ ಹಾಗೂ ಬಾವಿ ತೋಡುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಎಂದು ಹೇಳಿದರು. 

Tap to resize

Latest Videos

Uttara Kannada: ಅಂಗನವಾಡಿ ಮಕ್ಕಳಿಗಾಗಿ ಗಂಗೆಯನ್ನು ತರಲು ಗೌರಿಯ ಭಗೀರಥ ಪ್ರಯತ್ನ!

ಆದರೆ ಸ್ಥಳದಲ್ಲಿದ್ದ ಗೌರಿ ನಾಯ್ಕ, ನೀರು ಕೊಡುವುದು ನನ್ನ ಉದ್ದೇಶ. ಒಮ್ಮೆ ನೀರು ಬಂದ ನಂತರ ಯಾರು ಏನು ಬೇಕಾದರೂ ಅಭಿವೃದ್ಧಿ ಮಾಡಲಿ ಎಂದರು. ಇದೇ ವೇಳೆ ಸ್ಥಳದಲ್ಲಿದ್ದ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹಾಗೂ ಸಚಿವ ವೈದ್ಯ ಅವರು ಗೌರಿ ನಾಯ್ಕ ಅವರನ್ನು ಸನ್ಮಾನಿಸಿದರು. ಹೆಬ್ಬಾರ್ ಅವರು ಅಂಗನವಾಡಿಗೆ ಕಂಪೌಂಡ್ ನಿರ್ಮಾಣ ಹಾಗೂ ರಸ್ತೆಯನ್ನು ನಿರ್ಮಿಸಿಕೊಡುತ್ತಿದ್ದು, ಈ ಕಾರ್ಯವನ್ನು ಸಚಿವರು ಶ್ಲಾಘಿಸಿದರು. 

click me!