ಉತ್ತರ ಕನ್ನಡ: ಜಿಲ್ಲಾ ಸರ್ಜನ್‌ಗೆ ಕ್ಲಾಸ್ ತೆಗೆದುಕೊಂಡ ಸಚಿವ ಮಂಕಾಳು ವೈದ್ಯ

By Govindaraj S  |  First Published Aug 4, 2023, 9:34 PM IST

ಜಿಲ್ಲೆಯ ಕಾರವಾರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಕಾರವಾರ ಜಿಲ್ಲಾ ಸರ್ಜನ್ ಡಾ.‌ಶಿವಾನಂದ‌ ಕುಡ್ತಲ್‌ಕರ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.


ಉತ್ತರ ಕನ್ನಡ (ಆ.04): ಜಿಲ್ಲೆಯ ಕಾರವಾರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಕಾರವಾರ ಜಿಲ್ಲಾ ಸರ್ಜನ್ ಡಾ.‌ಶಿವಾನಂದ‌ ಕುಡ್ತಲ್‌ಕರ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಭೆಯಲ್ಲಿ ವರದಿ ಮಂಡನೆ ವೇಳೆ ಬೇಜಬ್ದಾರಿಯಾಗಿ ಮಾತನಾಡಿದ ಡಾ.‌ಶಿವಾನಂದ‌ ಕುಡ್ತಲ್‌ಕರ್‌, ಸರ್ಕಾರಿ  ಆಸ್ಪತ್ರೆಗೆ ಬರುವ ಜನರು ಡ್ರಾಮಾ ಮಾಡಿ ಹೋಗ್ತಾರೆ. 

ಸರ್ಕಾರಿ‌‌ ಆಸ್ಪತ್ರೆಯಲ್ಲಿ ಚಿಕಿತ್ಸೆ, ಮೆಡಿಸಿನ್ ಎಲ್ಲವನ್ನೂ ಉಚಿತವಾಗಿ ಕೊಡ್ತೀವಿ. ಆದರೆ, ಖಾಸಗಿ ಆಸ್ಪತ್ರೆಯಲ್ಲಿ ಗಂಟೆಗೊಂದು ಮೆಡಿಸಿನ್ ಬರೆದು ಕೊಡುತ್ತಾರೆ. ಹೀಗಾಗಿ ನಾವು ಟ್ರೀಟ್ ಮೆಂಟ್ ಕೊಡಲ್ಲ ಎಂದೆನಿಸಿ ಜನರು ಖಾಸಗಿ ಆಸ್ಪತ್ರೆಗೆ ಹೋಗ್ತಾರೆ ಎಂದು ಅಸಡ್ಡೆಯ ಹೇಳಿಕೆ ನೀಡಿದ್ದರು. ಜಿಲ್ಲಾ ಸರ್ಜನ್ ಶಿವಾನಂದ ಕುಡ್ತಳ್‌ಕರ್ ಹೇಳಿಕೆಗೆ ಜಿಲ್ಲಾ ಸಚಿವರು ಹಾಗೂ ಶಾಸಕರು ಗರಂ ಆಗಿದ್ದನ್ನು ಕಂಡು ಡ್ರಾಮ ಅಲ್ಲ ಎಂದು ಸಮಜಾಯಿಸಿ ನೀಡಲು ಜಿಲ್ಲಾ ಸರ್ಜನ್ ಪರದಾಟ ನಡೆಸಿತ್ತು ಕಂಡುಬಂತು. 

Tap to resize

Latest Videos

undefined

ಲೋಕಸಭಾ ಚುನಾವಣೆ ಹಿನ್ನೆಲೆ: ಮಾಗಡಿ ವಿಧಾ​ನ​ಸಭಾ ಕ್ಷೇತ್ರ​ದಲ್ಲಿ ಆಪ​ರೇ​ಷನ್‌ ಹಸ್ತ!

ಡಿಸ್ಚಾರ್ಜ್ ಮೆಡಿಕಲ್ ಅಡ್ವೈಸ್ ಎಂಬುದಕ್ಕೆ ಡ್ರಾಮ ಎನ್ನುತ್ತಾರೆ ಎಂದು ಜಿಲ್ಲಾ ಸರ್ಜನ್ ಮಾತು ಬದಲಿಸಿದ್ದನ್ನು ನೋಡಿದ ಉಸ್ತುವಾರಿ ಸಚಿವರು, ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯದಿದ್ರೆ ಬೇರೆಡೆ ಹೋಗ್ತಾರೆ. ನಿಮ್ಮಲ್ಲಿ ಎಲ್ಲಾ ವ್ಯವಸ್ಥೆಯಿದೆ ಅಂತಾ ಹೇಳ್ತೀರಿ. ಆದ್ರೂ, ಬೇರೆಡೆ ಯಾಕೆ ಕಳುಹಿಸಬೇಕು? ವೈದ್ಯರಾಗಿ ನೀವು ಚೆನ್ನಾಗಿ ನೋಡಿಕೊಂಡರೆ ಜನರು ಕೂಡಾ ಬರ್ತಾರೆ ಎಂದು ಸಚಿವ ಮಾಂಕಾಳು ವೈದ್ಯ ಹೇಳಿದರು.

ಅಧಿಕಾರಿಗಳ ವಿರುದ್ಧ ಗರಂ: ಮಕ್ಕಳ ಶಿಕ್ಷಣಕ್ಕೆ ತೊಂದರೆ ಆದರೆ ಅಧಿಕಾರಿಗಳ ವಿರುದ್ಧ ಕ್ರಮವಹಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಎಚ್ಚರಿಕೆ ನೀಡಿದರು. ನಗರದ ಜಿಪಂನಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಗಳಿಗೆ ಅಗತ್ಯವಿರುವ ಸೌಲಭ್ಯದ ಕುರಿತಾಗಿ ಪಟ್ಟಿಮಾಡಿ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು. ನಿರ್ಲಕ್ಷ್ಯ ಮಾಡಿ ಸಮಸ್ಯೆಗಳು ಇದೆ ಎಂದು ದೂರು ಬಂದರೆ, ಮಕ್ಕಳ ಓದಿಗೆ ತೊಂದರೆ ಆದರೆ ನಿಮ್ಮ ವಿರುದ್ಧ ಕಠಿಣ ಕ್ರಮವಾಗುತ್ತದೆ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಕಾರವಾರ ಡಿಡಿಪಿಐ ಲತಾ ನಾಯಕ ಮಾತನಾಡಿ, 124 ಶಿಕ್ಷಕರ ಕೊರತೆ ಪ್ರಾಥಮಿಕ ವಿಭಾಗದಲ್ಲಿ, 12 ಶಿಕ್ಷಕರ ಕೊರತೆ ಪ್ರೌಢಶಾಲೆಯಲ್ಲಿ ಇದೆ. ಬಿಸಿಯೂಟಕ್ಕೆ ಆಹಾರ ಸಾಮಗ್ರಿ ಪೂರೈಕೆಯಾಗಿದೆ. ಸಮವಸ್ತ್ರ, ಪಠ್ಯಪುಸ್ತಕ ಪೂರೈಕೆಯಾಗಿದೆ ಎಂದು ಮಾಹಿತಿ ನೀಡಿದರು. ಸಚಿವ ವೈದ್ಯ ಮಾತನಾಡಿ, ಹಳೆ ಕಟ್ಟಡವನ್ನೇ ದುರಸ್ತಿ ಮಾಡುತ್ತಾ ಇರಬೇಡಿ. ಹೊಸ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಿ. ಹಲವು ಶಾಲೆಗಳಲ್ಲಿ ಶೌಚಾಲಯ ಇಲ್ಲದ ಬಗ್ಗೆ ಗಮನಕ್ಕೆ ಬಂದಿದೆ. ಅಂತಹ ಶಾಲೆಗಳನ್ನು ಪಟ್ಟಿಮಾಡಿ ಪ್ರಸ್ತಾವನೆ ಕಳಿಸಬೇಕು. ಶಾಲೆಗೆ ಯಾವುದೇ ಕೆಲಸಕ್ಕೂ ಹಣ ನೀಡಲು ಸರ್ಕಾರ ಸಿದ್ಧವಿದೆ. ಸರ್ಕಾರ ಹಾಗೂ ತಮ್ಮ ಪ್ರಥಮ ಆದ್ಯತೆ ಶಿಕ್ಷಣಕ್ಕೆ ಆಗಿದೆ ಎಂದರು.

ಶಾಸಕ ಸತೀಶ ಸೈಲ್‌ ಮಾತನಾಡಿ, ಬಂದ್‌ ಆದ ಶಾಲೆಗಳ ಜಾಗವನ್ನು ಅತಿಕ್ರಮಣ ಮಾಡಲಾಗುತ್ತಿದೆ. ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ನೀಡಬೇಕು. ಸ್ಮಾರ್ಚ್‌ ಕ್ಲಾಸ್‌ ಯೋಜನೆ ಜಾರಿಗೆ ಬಂದಿದ್ದು, ಹಲವು ಶಾಲೆಗಳಲ್ಲಿ ನೆಟ್‌ವರ್ಕ್ ಇಲ್ಲ. ಅಂತಹ ಶಾಲೆಗಳಿಗೆ ಸ್ಮಾರ್ಚ್‌ಕ್ಲಾಸ್‌ ಉಪಕರಣ ನೀಡಿದರೆ ಏನು ಪ್ರಯೋಜನವಿದೆ. ಅದರ ಬದಲು ಯಾವ ಶಾಲೆಗೆ ಉಪಯೋಗವಾಗುತ್ತದೆ ಅಂತಹ ಕಡೆ ನೀಡಿ. ನೆಟ್‌ವರ್ಕ್ ಇಲ್ಲದ ಕಡೆ ಬೇರೆ ಯಾವ ರೀತಿ ವ್ಯವಸ್ಥೆ ಮಾಡಬಹುದು ಎಂದು ಯೋಚಿಸಿ ಎಂದು ಸಲಹೆ ನೀಡಿದರು.

ಎಂ.ಟಿ.ಆರ್ ಹೋಟೆಲ್ ದೋಸೆ ಸವಿದ ಸಿಎಂ ಸಿದ್ದರಾಮಯ್ಯ!

ಶಾಸಕ ಸೈಲ್‌, ಅಂಕೋಲಾ ತಾಲೂಕಾಸ್ಪತ್ರೆಯಲ್ಲಿ ಡಯಾಲಿಸಸ್‌ ನಡೆಯುತ್ತಿಲ್ಲ ಎಂದು ಆರೋಗ್ಯ ಇಲಾಖೆ ಗಮನಕ್ಕೆ ತಂದರು. ಡಿಎಚ್‌ಒ ಡಾ. ನೀರಜ್‌ ಬಿ.ವಿ. ಮಾತನಾಡಿ, ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ರಾಜ್ಯಮಟ್ಟದಲ್ಲೇ ಅವರ ಧರಣಿ ಇತ್ತು. ಗುರುವಾರ ಸರ್ಕಾರ ಮಾತುಕತೆ ಮಾಡಿದ್ದು, ಶುಕ್ರವಾರದಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ನಿಯೋಜಿತ ಸಿಬ್ಬಂದಿ ಧರಣಿಯಲ್ಲಿ ಇದ್ದಿದ್ದರಿಂದ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು ಎಂದರು. ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಯಾರೇ ಧರಣಿಯಲ್ಲಿದ್ದರೂ ಜನರಿಗೆ ಸಮಸ್ಯೆ ಉಂಟಾಗಬಾರದು. ರೋಗಿಗಳಿಗೆ ಚಿಕಿತ್ಸೆ ಪಡೆಯಲು ಬೇರೆ ವ್ಯವಸ್ಥೆಯನ್ನು ಮಾಡಿ ಎಂದು ಸೂಚಿಸಿದರು.

click me!