'ಮಾಜಿ ಸಿಎಂ ಕುಮಾರಸ್ವಾಮಿಗೆ ಅಷ್ಟು ಶಕ್ತಿ ಇಲ್ಲ'

By Kannadaprabha NewsFirst Published Jan 7, 2020, 8:35 AM IST
Highlights

ಮಾಜಿ ಸಿಎಂ ಕುಮಾರಸ್ವಾಮಿಗೆ ಅಂತಹ ಶಕ್ತಿ ಇಲ್ಲ ಎಂದು ಸಚಿವ ಮಾಧುಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಹಲವು ಮುಖಂಡರು ಬಿಜೆಪಿ ತ್ಯಜಿಸುವ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

ಚಿಕ್ಕಮಗಳೂರು [ಜ.07]: ರಾಜ್ಯ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸುವ ಶಕ್ತಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗಿಲ್ಲ ಎಂದು ರಾಜ್ಯದ ಕಾನೂನು, ಸಂಸದೀಯ ವ್ಯವಹಾರಗಳ ಖಾತೆ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಬಿಜೆಪಿಯ 10ರಿಂದ 15 ಶಾಸಕರು ಪಕ್ಷ ತೊರೆಯಲು ಸಿದ್ಧವಾಗಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಂಬಂಧಿಸಿ ಚಿಕ್ಕಮಗಳೂರಿನ ಸಿಂದಿಗೆರೆಯಲ್ಲಿ ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಉಪ ಚುನಾವಣೆಗೂ ಮುನ್ನ ಈ ಸರ್ಕಾರ ಅಸ್ಥಿರಗೊಳಿಸಲ್ಲ, ಸ್ಥಿರ ಸರ್ಕಾರ ಇರಬೇಕು ಎಂದು ಕುಮಾರಸ್ವಾಮಿ ಹೇಳಿದ್ದರು. 

‘36 ಜನರನ್ನೂ ಯಡಿಯೂರಪ್ಪ ಡಿಸಿಎಂ ಮಾಡಲಿ : HDK...

ಚುನಾವಣೆ ಘೋಷಣೆ ನಂತರ ಸರ್ಕಾರ ಸ್ಥಿರವಾಗಿರುತ್ತದೆ ಎಂದಷ್ಟೇ ಹೇಳಿದ್ದೇನೆ, ಆದರೆ, ಯಡಿಯೂರಪ್ಪ ಸರ್ಕಾರ ಅಂತ ಹೇಳಿರಲಿಲ್ಲ ಎಂದು ಹೇಳಿಕೊಂಡಿದ್ದರು ಎಂದು ಮಾಧುಸ್ವಾಮಿ ವ್ಯಂಗ್ಯವಾಡಿದರು. ಕುಮಾರಸ್ವಾಮಿ ಅವರು ತಮಗೆ ಸರ್ಕಾರಕ್ಕೆ ತೊಂದರೆ ಕೊಡುವ ಶಕ್ತಿ ಇದೆಯೋ ಇಲ್ಲವೋ ಎಂಬುದನ್ನು ಅವರೇ ಯೋಚನೆ ಮಾಡಬೇಕು. ಯಾವ ಶಾಸಕರು ಅವರ ಸಂಪರ್ಕದಲ್ಲಿದ್ದಾರೆ ಎಂಬ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ, ನಮ್ಮ ಶಾಸಕರು ಬೇರೆಯವರ ಸುಪರ್ದಿಯಲ್ಲಿ ಇಲ್ಲ. ಪ್ರೀತಿ, ವಿಶ್ವಾಸಕ್ಕೆ ಮಾತನಾಡಿದವರು ಪಕ್ಷಕ್ಕೆ ವಿರುದ್ಧವಾಗಿ ಹೋಗುತ್ತಾರೆಂದು ಹೇಳುವುದು ಸರಿಯಲ್ಲ ಎಂದು ಹೇಳಿದರು.

ಬಿಜೆಪಿಯಿಂದ ಹೊರ ಬರಲು ಸಿದ್ಧರಾಗಿದ್ದಾರೆ 15 ಮಂದಿ’...

ಕುಮಾರಸ್ವಾಮಿ ಭಾವೋದ್ವೇಗದಲ್ಲಿ ರೈತರ ಸಾಲಮನ್ನಾ ಮಾಡಿ ಖಜಾನೆ ಖಾಲಿ ಮಾಡಿದರು. ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬೇಕಾಗಿದ್ದ ಹಣವನ್ನು ಸಾಲ ಮನ್ನಾಕ್ಕೆ ತುಂಬಿಸುತ್ತ ಹೋಗಿದ್ದರು. ಅಭಿವೃದ್ಧಿ ಅಂದರೆ ಹಾಸನ, ಮಂಡ್ಯ ಅಂತ ಅವರು ಅಂದುಕೊಂಡಿದ್ದರು ಎಂದು ಕಿಡಿಕಾರಿದರು.

click me!