* ನಾನೆಂದೂ ನೀರಿನ ವಿಚಾರದಲ್ಲಿ ತಗಾದೆ ತೆಗೆದಿರಲಿಲ್ಲ
* ನಾವು ನೀರಾವರಿ ಹೋರಾಟ ಮಾಡುವಾಗ ಮಾಧುಸ್ವಾಮಿ ಎಲ್ಲೂ ಇರಲಿಲ್ಲ
* ನಾನು ಇವರಿಗಿಂತ ಮೊದಲೇ ವಕೀಲನಾಗಿ, ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ
ತುಮಕೂರು(ಆ.23): ಮದಲೂರು ಕೆರೆಗೆ ನೀರು ಹರಿಸಿದರೆ ಅಧಿಕಾರಿಗಳು ಜೈಲಿಗೆ ಹೋಗಬೇಕಾಗುತ್ತದೆ ಎಂದು ಬೆದರಿಕೆಯೊಡ್ಡುತ್ತಿರುವ ಸಚಿವ ನೀರಾವರಿ ಹೋರಾಟಗಾರರೇ ಅಲ್ಲ, ನಾವು ಹೋರಾಟ ಮಾಡುವಾಗ ಅವರು ಇರಲೇ ಇಲ್ಲ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಕಿಡಿಕಾರಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮದಲೂರು ಕೆರೆಗೆ 0.4 ಟಿಎಂಸಿ ನೀರು ಹಂಚಿಕೆಯಾಗಿದೆ. ಈಗಾಗಲೇ 2 ಬಾರಿ ಕೆರೆಗೆ ನೀರು ಹರಿಸಲಾಗಿದೆ. ಹೀಗಿದ್ದರೂ ಕಾನೂನು ಸಚಿವ ಪದೇ ಪದೆ ಮದಲೂರು ಕೆರೆಗೆ ನೀರು ಹರಿಸುವುದು ಕಾನೂನು ಬಾಹಿರ ಎಂದು ಕ್ಯಾತೆ, ತಗಾದೆ ತೆಗೆಯುತ್ತಲೇ ಇದ್ದಾರೆ. ಅವರು ಇಂಥ ಬೆದರಿಕೆಯನ್ನು ನಿಲ್ಲಿಸಲಿ. ನಾನು ಸಹ ಕಾನೂನು, ಜಿಲ್ಲಾ ಉಸ್ತುವಾರಿ ಸಚಿವನಾಗಿ 5 ವರ್ಷ ಕೆಲಸ ಮಾಡಿದ್ದೆ. ನಾನೆಂದೂ ನೀರಿನ ವಿಚಾರದಲ್ಲಿ ತಗಾದೆ ತೆಗೆದಿರಲಿಲ್ಲ. ಮಾಧುಸ್ವಾಮಿ ಹೋರಾಟಗಾರರಲ್ಲ, ನಾವು ಹೋರಾಟ ಮಾಡುವಾಗ ಅವರು ಎಲ್ಲೂ ಇರಲಿಲ್ಲ ಎಂದರು.
11 ‘ಅಮೃತ’ ಯೋಜನೆಗೆ ಸಂಪುಟ ಅಸ್ತು: ಸಚಿವ ಮಾಧುಸ್ವಾಮಿ
ನಾನು ಇವರಿಗಿಂತ ಮೊದಲೇ ವಕೀಲನಾಗಿ, ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ಒಂದು ಯೋಜನೆ ಬಗ್ಗೆ ಸರ್ಕಾರಿ ಆದೇಶವಾಗಬೇಕಾದರೆ ಹಲವು ಕಾನೂನಾತ್ಮಕ ಕ್ರಮಗಳನ್ನು ಅನುಸರಿಸಲಾಗಿರುತ್ತದೆ. ಈ ಬಗ್ಗೆ ಮೇಧಾವಿಗಳಿಗೆ ಅರಿವಿರಬೇಕು ಎಂದರು.