ಬಳ್ಳಾರಿ: ಲಾಕ್‌ಡೌನ್‌ ಇದ್ರೂ ಸಚಿವ ಈಶ್ವರಪ್ಪ ದೇಗುಲ ಪೂಜೆ

By Kannadaprabha NewsFirst Published Jun 20, 2021, 11:27 AM IST
Highlights

*  ಮನೆ ದೇವರ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡ ಈಶ್ವರಪ್ಪ ಕುಟುಂಬ 
* ಬಳ್ಳಾರಿ ನಗರದ ಚೌಡೇಶ್ವರಿದೇವಿ ದೇವಸ್ಥಾನದಲ್ಲಿ ಪೂಜೆ
* ಈ ದೇಗುಲಕ್ಕೆ ಆಗಾಗ್ಗೆ ಆಗಮಿಸುವ ಈಶ್ವರಪ್ಪ ಕುಟುಂಬ 

ಬಳ್ಳಾರಿ(ಜೂ.20): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಭಕ್ತರ ಪ್ರವೇಶ, ಪೂಜೆ ಮತ್ತಿತರ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಆದರೆ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಶನಿವಾರ ಕುಟುಂಬ ಸಮೇತರಾಗಿ ಆಗಮಿಸಿ ನಗರದಲ್ಲಿ ತಮ್ಮ ಮನೆ ದೇವರ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಈಶ್ವರಪ್ಪ ಅವರ ಮನೆದೇವತೆಯಾದ ಇಲ್ಲಿನ ಸಣ್ಣ ತರಕಾರಿ ಮಾರುಕಟ್ಟೆ ಬಳಿಯ ಚೌಡೇಶ್ವರಿದೇವಿ ಶಿಲಾನ್ಯಾಸದ ಪೂಜೆಯನ್ನು ನೆರವೇರಿಸಿದ್ದಾರೆ.

ಬಳ್ಳಾರಿ: ದೇವರು ಹೇಳಿದ್ದಾನೆಂದು ಬಾಲಕಿಗೆ ತಾಳಿ ಕಟ್ಟಿದ ಪಾದ್ರಿ..!

ಪುಟ್ಟ ಜಾಗದಲ್ಲಿದ್ದ ಈ ದೇಗುಲಕ್ಕೆ ಈಶ್ವರಪ್ಪ ಹಾಗೂ ಕುಟುಂಬ ಸದಸ್ಯರು ಆಗಾಗ್ಗೆ ಆಗಮಿಸಿ, ಸಲ್ಲಿಸಿ ಹೋಗುತ್ತಿದ್ದರು. ದೇವಾಲಯವನ್ನು ದೊಡ್ಡದಾಗಿಸಲು ಪುನರ್‌ ನಿರ್ಮಿಸಲು ಸಚಿವರ ಕುಟುಂಬಸ್ಥರು ನಿರ್ಧರಿಸಿದ್ದು ಇದೀಗ ಶನಿವಾರ ಶಿಲಾನ್ಯಾಸ ನಡೆದಿದೆ.
 

click me!