ರಾಜ್ಯದಲ್ಲಿ ಮತ್ತೊಂದು ಚುನಾವಣೆ: ಈಶ್ವರಪ್ಪ ಹೇಳಿದ್ದಿಷ್ಟು

By Kannadaprabha NewsFirst Published Jun 20, 2021, 7:50 AM IST
Highlights

* ಕೊರೋನಾ ಸಂಪೂರ್ಣ ನಿಯಂತ್ರಣಕ್ಕೆ ಬರಬೇಕೆಂಬುದು ಸರ್ಕಾರದ ಉದ್ದೇಶ
* 3ನೇ ಅಲೆಯ ಸೋಂಕು ಮತ್ತೆ ಎದುರಾಗುವ ಭೀತಿ
* ಜಿಪಂ, ತಾಪಂ ಚುನಾವಣೆ ಡಿಸೆಂಬರ್‌ವರೆಗೆ ನಡೆಸದೆ ಇರಲು ಸರ್ಕಾರ ತೀರ್ಮಾನ

ದಾವಣಗೆರೆ(ಜೂ.20):  ಕೊರೋನಾ ಮಹಾಮಾರಿಯಿಂದಾಗಿ ಡಿಸೆಂಬರ್‌ವರೆಗೆ ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಇಲ್ಲ ಎಂದು ಪಂಚಾಯತ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕು ಕಡಿಮೆಯಾಗುತ್ತಿದ್ದು, ಅದು ಸಂಪೂರ್ಣ ನಿಯಂತ್ರಣಕ್ಕೆ ಬರಬೇಕೆಂಬುದು ಸರ್ಕಾರದ ಉದ್ದೇಶ. ಅಲ್ಲದೇ 3ನೇ ಅಲೆಯ ಸೋಂಕು ಮತ್ತೆ ಎದುರಾಗುವ ಭೀತಿಯೂ ಇದೆ. ಇದೇ ಕಾರಣಕ್ಕೆ ಜಿಪಂ, ತಾಪಂ ಚುನಾವಣೆಗಳನ್ನು ಡಿಸೆಂಬರ್‌ವರೆಗೆ ನಡೆಸದೆ ಇರಲು ಸರ್ಕಾರ ತೀರ್ಮಾನಿಸಿದೆ ಎಂದರು.

ಶಾಸಕರೊಬ್ಬರು ಫೋನ್ ಮಾಡಿ ನಾನೇ CM, ಸಹಕಾರ ಕೊಡಿ ಅಂದ್ರು: ರೇಣುಕಾಚಾರ್ಯ ಬಾಂಬ್

ನಾಳೆ ಲಾಕ್‌ಡೌನ್‌ ತೀರ್ಮಾನ: 

ಇದೇ ವೇಳೆ ರಾಜ್ಯದಲ್ಲಿ ಕೊರೋನಾ ಲಾಕ್‌ಡೌನ್‌ ಮುಂದುವರಿಸುವ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತೀರ್ಮಾನ ಕೈಗೊಳ್ಳುತ್ತಾರೆ. ಅದೇ ದಿನ ಸಂಜೆ 4 ಗಂಟೆಗೆ ಸಚಿವ ಸಂಪುಟದ ಸಭೆ ನಡೆಯಲಿದೆ. ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ, ಲಾಕ್‌ಡೌನ್‌ ಮುಂದುವರಿಸಬೇಕಾ ಅಥವಾ ಬೇಡವಾ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಈಶ್ವರಪ್ಪ ತಿಳಿಸಿದರು.
 

click me!