ಗೃಹಜ್ಯೋತಿ ಸ್ಕೀಂಗೆ ಜಾತಿ, ಪಾನ್‌ ಕಾರ್ಡ್‌ ಕೇಳೋದ್ರಲ್ಲಿ ತಪ್ಪೇನಿದೆ?: ಸಚಿವ ಜಾರ್ಜ್‌

Ravi Janekal   | Kannada Prabha
Published : Jul 02, 2026, 10:00 AM IST
KJ George on Gruhajyoti scheme

ಸಾರಾಂಶ

ಗೃಹಜ್ಯೋತಿ ಯೋಜನೆ ಪರಿಶೀಲನೆ ಆರಂಭವಾಗಿದೆ. ವಾಣಿಜ್ಯ ಉದ್ದೇಶಕ್ಕೆ ಬಳಕೆ ಸೇರಿದಂತೆ ಗೃಹಜ್ಯೋತಿ ಯೋಜನೆ ಕೆಲವರಿಂದ ದುರುಪಯೋಗ ಆಗುತ್ತಿದೆ ಹೀಗಾಗಿ ಪರಿಶೀಲನೆ ನಡೆಯುತ್ತಿದೆ. ಜಾತಿ ಪ್ರಮಾಣಪತ್ರ ಪಾನ್ ಕಾರ್ಡ್ ಕೇಳಿದ್ರೆ ತಪ್ಪೇನಿಲ್ಲ ಎಂದು ಸಚಿವ ಕೆಜೆ ಚಾರ್ಜ್ ಸಮರ್ಥಿಸಿಕೊಂಡರು.

ಚಿಕ್ಕಮಗಳೂರು (ಜು.2): ರಾಜ್ಯದಲ್ಲಿ ಗೃಹಜ್ಯೋತಿಗೆ ಪರಿಶೀಲನೆ ಆರಂಭವಾಗಿದೆ. ವಾಣಿಜ್ಯ ಉದ್ದೇಶಕ್ಕೆ ಬಳಕೆ ಸೇರಿದಂತೆ ಗೃಹಜ್ಯೋತಿ ಯೋಜನೆಯನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ದೂರು ಬಂದಿದೆ. ಹೀಗಾಗಿ, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ. 

ಜಾತಿ ಆಧಾರದಲ್ಲಿ ಯೋಜನೆ ನೀಡುತ್ತಿಲ್ಲ:

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಗೃಹಜ್ಯೋತಿ’ ಯೋಜನೆಗೆ ಜಾತಿ ಪ್ರಮಾಣ ಪತ್ರ, ಪಾನ್‌ ಕಾರ್ಡ್‌ ಕೇಳುವುದಲ್ಲಿ ತಪ್ಪೇನಿದೆ?. ಶಾಲಾ ದಾಖಲಾತಿ ವೇಳೆ ಜಾತಿ ಬರೆಸುವುದಿಲ್ಲವೇ ಎಂದು ಪ್ರಶ್ನಿಸಿದರು. ಹಾಗಂತ ಜಾತಿ ಆಧಾರದಲ್ಲಿ ಯೋಜನೆ ನೀಡುವುದಿಲ್ಲ. ಯುನಿಟ್‌ ಬಳಕೆ ಆಧಾರದಲ್ಲಿ ನೀಡಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಗೃಹಜ್ಯೋತಿ ಯೋಜನೆಯಡಿ 1.64 ಕೋಟಿ ಜನರಿಗೆ ಉಚಿತ ವಿದ್ಯುತ್

''ಗೃಹಜ್ಯೋತಿ'' ಯೋಜನೆಯಡಿ ಪ್ರಸ್ತುತ 1.64 ಕೋಟಿ ಜನ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. ವಾಣಿಜ್ಯ ಉದ್ದೇಶಕ್ಕೆ ಬಳಕೆ ಸೇರಿದಂತೆ ಕೆಲವರು ಗೃಹಜ್ಯೋತಿ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ದೂರು ಬಂದಿದೆ. ಹೀಗಾಗಿ, ಪರಿಶೀಲನೆ ನಡೆಸಲಾಗುತ್ತಿದೆ. ಈ ವೇಳೆ ಜಾತಿ ಪ್ರಮಾಣ ಪತ್ರ ಹಾಗೂ ಪಾನ್‌ ಕಾರ್ಡ್‌ಗಳನ್ನು ದಾಖಲೆಗಾಗಿ ಪಡೆಯಲಾಗುತ್ತಿದೆ.

PREV
Read more Articles on
click me!

Recommended Stories

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳಿಂದ ಪರಪ್ಪನ ಅಗ್ರಹಾರ ಜೈಲಿನ ವಾರ್ಡನ್ ಮೇಲೆ ಮಾರಣಾಂತಿಕ ಹಲ್ಲೆ
ಬೆಳಿಗ್ಗೆ ವೇಕ್-ಅಪ್ ಕಾಲ್, ಮನೆ ಬಾಗಿಲಿಗೇ ಕಾರ್: ಬೆಂಗಳೂರು ಏರ್‌ಪೋರ್ಟ್‌ನಿಂದ ಡೋರ್-ಟು-ಡೋರ್ ಐಷಾರಾಮಿ ಸೇವೆ