ಬಡವರಿಗೆ ಒಳ್ಳೆಯದು ಮಾಡಲು ಪ್ರಧಾನಿ ಮೋದಿ ಬಂದಿಲ್ಲ: ಸಚಿವ ಕೆ.ವೆಂಕಟೇಶ್ ವಾಗ್ದಾಳಿ

Published : May 17, 2026, 10:26 PM IST
K Venkatesh

ಸಾರಾಂಶ

ಬಡವರಿಗೆ ಒಳ್ಳೆಯದು ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಂದಿಲ್ಲ. ಬಡವರ ರಕ್ತ ಹೀರಿ ಸರ್ಕಾರ ಹಣ ಮಾಡುವಂತೆ ಕಾಣುತ್ತಿದೆ ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು. ಇಂಧನ ಬೆಲೆ ಏರಿಕೆ ವಿರುದ್ಧ ಅಸಮಾಧಾನ ಹೊರಹಾಕಿದರು.

ಚಾಮರಾಜನಗರ (ಮೇ.17): ಬಡವರಿಗೆ ಒಳ್ಳೆಯದು ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಂದಿಲ್ಲ. ಬಡವರ ರಕ್ತ ಹೀರಿ ಸರ್ಕಾರ ಹಣ ಮಾಡುವಂತೆ ಕಾಣುತ್ತಿದೆ ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು. ಇಂಧನ ಬೆಲೆ ಏರಿಕೆ ವಿರುದ್ಧ ಅಸಮಾಧಾನ ಹೊರಹಾಕಿದರು. ಪ್ರಧಾನಿ ಮೋದಿ ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಹೊರೆ ಹಾಕಿದ್ದಾರೆ. ಈ ರೀತಿ ಬೆಲೆ ಏರಿಸಿದರೇ ಜನರು ಹೇಗೆ ಬದುಕಬೇಕು ಎಂದು ಕಿಡಿಕಾರಿದರು.

ಈಗ ಯುದ್ಧ ಇದೆ ಎನ್ನುತ್ತಿದ್ದಾರೆ. ಈ ಹಿಂದೆ ಬೆಲೆ ಏರಿಸಿದ್ದಾರಲ್ಲ, ಆಗ ಯುದ್ಧ ಎಲ್ಲಿತ್ತು. ಅಚ್ಚೇ ದಿನ್ ಎಂದು ಭಾಷಣ ಮಾಡುತ್ತಾರೆ. ದಿನಬಳಕೆ ವಸ್ತುಗಳ ಬೆಲೆ ಏರಿಸುವುದು ಅಚ್ಚೇ ದಿನವೇ. ಜನರಿಗೆ ಹೊರೆ ಹೊರಿಸಲು ಮೋದಿ ಬಂದಿದ್ದಾರೆ ಎಂದರು‌. ಇದೇ ವೇಳೆ, ಮತಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ಮಾತನಾಡಿ, ಮತಪಟ್ಟಿ ಪರಿಷ್ಕರಣೆ ನಡೆಸಲಿ ನಾವು ಯಾರೂ ಬೇಡ ಎನ್ನುವುದಿಲ್ಲ. ಆದರೆ, ವಸ್ತುನಿಷ್ಠವಾಗಿರಲಿ, ಪಶ್ಚಿಮ ಬಂಗಾಳದಲ್ಲಿ 90 ಲಕ್ಷ ಮತದಾರರನ್ನು ಈ ಬಾರಿ ಕೈ ಬಿಟ್ಟಿದ್ದಾರೆ. ಬರೀ ಒಂದೂವರೆ ಸಾವಿರ ಮತಗಳ ಅಂತರದಿಂದ ಸಾಕಷ್ಟು ಟಿಎಂಸಿ ಅಭ್ಯರ್ಥಿಗಳು ಸೋತಿದ್ದಾರೆ ಎಂದರು.

ಹಿಜಾಬ್ ವಿವಾದ, ಸಮಸ್ಯೆಯನ್ನು ನಾವು ಹುಟ್ಟುಹಾಕಿಲ್ಲ, ಈ ಸಮಸ್ಯೆಯನ್ನು ಆಚೆಗೆ ತಂದಿದ್ದೇ ಬಿಜೆಪಿಯವರು, ಯಾವ ಕಾಲದಿಂದ ಹಿಜಾಬ್ ಇದೆ. ಈಗೇನು ಹೊಸದಾಗಿ ಬಂದಿದೆಯಾ ? ಸಾವಿರಾರು ವರ್ಷಗಳ ಪದ್ಧತಿಯನ್ನು ಬಿಜೆಪಿ ಅವರು ಬದಲಾಯಿಸಿ ಎಂದರೆ ಈಗ ಬದಲಾಯಿಸಲಾಗುತ್ತದೆಯೇ? ಆದಕ್ಕಾಗಿ ನಾವು ಹಿಜಾಬ್ ಮೇಲಿನ ನಿಷೇಧವನ್ನು ತೆಗೆದು ಹಾಕಿದ್ದೇವೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ನೀರಿನ ಸಮಸ್ಯೆ ಪರಿಹಾರ ತಡಮಾಡದಿರಿ

ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಕುಡಿಯುವ ನೀರಿನ ಸಂಬಂಧ ಚಾಮರಾಜನಗರ ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಶನಿವಾರ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ಮೊದಲಿಗೆ 1ನೇ ವಾರ್ಡಿನ ಸೋಮವಾರಪೇಟೆ ಬಡಾವಣೆಯ ಹೊರಭಾಗದಲ್ಲಿರುವ ಹಂದಿಜೋಗಿ ಕಾಲೋನಿಗೆ ಸಚಿವರು ಭೇಟಿ ನೀಡಿದರು. ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿದೆಯೇ, ಏನಾದರೂ ಸಮಸ್ಯೆ ಇದೆಯೇ ಎಂದು ನಿವಾಸಿಗಳನ್ನು ವಿಚಾರಿಸಿದರು.

ಬಳಿಕ ಮಾತನಾಡಿ, ಜನರಿಗೆ ಆದ್ಯತೆ ಮೇರೆಗೆ ನೀರು ಒದಗಿಸಬೇಕು. ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಗತ್ಯವಿದ್ದರೆ ಟ್ಯಾಂಕರ್‌ ಮೂಲಕ ಸಮರ್ಪಕವಾಗಿ ನೀರು ಪೂರೈಕೆ ಮಾಡುವಂತೆ ಸ್ಥಳದಲ್ಲಿಯೇ ಇದ್ದ ನಗರಸಭೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚಿಸಿದರು.ಇದೇ ವೇಳೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಕುಡಿಯುವ ನೀರಿನ ಸಮಸ್ಯೆ ಎದುರಾದಲ್ಲಿ ತಕ್ಷಣವೇ ಸ್ಪಂದಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಬಳಿಕ ಸೋಮವಾರಪೇಟೆ ಹಾಗೂ ಗಾಳೀಪುರ ಬಡಾವಣೆಗೆ ಆಗಮಿಸಿದ ವೆಂಕಟೇಶ್‌, ಅಲ್ಲಿಯೂ ನೀರಿನ ಸಮಸ್ಯೆ ಕುರಿತು ಜನರೊಂದಿಗೆ ಮಾತನಾಡಿದರು. ನೀರು 3 ದಿನಗಳಿಗೊಮ್ಮೆ ಸರಬರಾಜು ಆಗುತ್ತಿದೆ. ಹೆಚ್ಚುವರಿ ಬೋರ್‌ವೆಲ್ ಕೊರೆಸಬೇಕು. ಕಸ ಸಂಗ್ರಹಣೆ ವಾಹನ ವಾರಕ್ಕೊಮ್ಮೆಯಾದರೂ ಬರಬೇಕು. ಚರಂಡಿಗಳು ಸ್ವಚ್ಚತೆಯಿಲ್ಲದೆ ದುರ್ವಸನೆಯಿಂದ ಕೂಡಿವೆ. ಅದನ್ನು ಸರಿಪಡಿಸುವಂತೆ ಬಡಾವಣೆಗೆ ನಿವಾಸಿಗಳು ಸಚಿವರಿಗೆ ಮನವಿ ಮಾಡಿದರು.

PREV
Read more Articles on
click me!

Recommended Stories

ನಮಗೂ ಪೊರಕೆ, ದೊಣ್ಣೆ, ಒನಕೆ ಹಿಡಿದು ಪ್ರತಿಭಟಿಸಲು ಬರುತ್ತದೆ: ಶಾಸಕ ಕೆ.ಎಂ.ಉದಯ್ ಕಿಡಿ
ಬಿಬಿಎಂಪಿಯಲ್ಲಿ 40 ಸಾವಿರ ಕೋಟಿ ಹಗರಣ ಆರೋಪ, 9,700 ಪುಟಗಳ ದಾಖಲೆ ಸಹಿತ ದೂರು ಕೊಟ್ಟ ರಮೇಶ್‌ !