ಮೀಸಲಾತಿ ವಿಚಾರದಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ: ಶೆಟ್ಟರ್

Suvarna News   | Asianet News
Published : Feb 07, 2021, 03:29 PM IST
ಮೀಸಲಾತಿ ವಿಚಾರದಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ: ಶೆಟ್ಟರ್

ಸಾರಾಂಶ

ರೈತರಿಗೆ ಒಳ್ಳೆಯದಾಗಲಿ ಅಂತ ಕಾಯ್ದೆಗಳಿಗೆ ತಿದ್ದುಪಡಿ ತಂದ ಮೋದಿ| ಮೋದಿಯವರಿಗೆ ಜಾರಿಗೆ ತಂದ ಕಾಯ್ದೆಗಳ ಅನುಷ್ಠಾನಕ್ಕೆ ರೈತರು ಅವಕಾಶ ನೀಡಬೇಕು| ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ರೈತರನ್ನ ಪ್ರಚೋದಿಸುವ ಕೆಲಸ ಮಾಡುತ್ತಿವೆ| ರಾಜಕೀಯ ಪ್ರಚೋದನೆಯಿಂದ ರೈತ ಹೋರಾಟ| ಪ್ರತಿಭಟನೆ ಕೈ ಬಿಟ್ಟು, ಮೋದಿ ಮೇಲೆ ರೈತರು ವಿಶ್ವಾಸವಿಡಬೇಕು ಎಂದು ವಿನಂತಿಸಿಕೊಂಡ ಶೆಟ್ಟರ್‌|

ಹುಬ್ಬಳ್ಳಿ(ಫೆ.07): ಕುರುಬ ಸಮಾಜಕ್ಕೆ ಎಸ್‌ಟಿ ಹಾಗೂ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಹಿಂದುಳಿದ ವರ್ಗದ ಆಯೋಗಕ್ಕೆ ಶಿಫಾರಸು ಮಾಡಿದ್ದಾರೆ. ಆಯೋಗ ಸರ್ವೆ ನಡೆಸಿದ ಬಳಿಕ ಅದನ್ನು ಅವಲೋಕಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಮೀಸಲಾತಿ ವಿಚಾರದಲ್ಲಿ ಯೋಗ್ಯವಾದ ನಿರ್ಧಾರವನ್ನ ಕೈಗೊಳ್ಳಲಿದೆ ಎಂದಿದ್ದಾರೆ. 

ಹುಬ್ಬಳ್ಳಿ: ಮೂರುಸಾವಿರ ಮಠದ ಗೊಂದಲ, ಶೀಘ್ರದಲ್ಲೇ ಲಿಂಗಾಯತ ಮುಖಂಡರ ಸಭೆ

ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ ಒಳ್ಳೆಯದಾಗಲಿ ಅಂತ ಕಾಯ್ದೆಗಳಿಗೆ ತಿದ್ದುಪಡಿ ತಂದಿದ್ದಾರೆ. ಮೋದಿಯವರಿಗೆ ಜಾರಿಗೆ ತಂದ ಕಾಯ್ದೆಗಳ ಅನುಷ್ಠಾನಕ್ಕೆ ರೈತರು ಅವಕಾಶ ನೀಡಬೇಕು. ಆದರೆ, ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ರೈತರನ್ನ ಪ್ರಚೋದಿಸುವ ಕೆಲಸ ಮಾಡುತ್ತಿವೆ. ರಾಜಕೀಯ ಪ್ರಚೋದನೆಯಿಂದ ರೈತ ಹೋರಾಟ ನಡೆಯುತ್ತಿದೆ. ಇದನ್ನು ಕೈ ಬಿಡಬೇಕು, ಮೋದಿಯವರ ಮೇಲೆ ರೈತರು ವಿಶ್ವಾಸವಿಡಬೇಕು ಎಂದು ವಿನಂತಿಸಿಕೊಂಡಿದ್ದಾರೆ. 

ಮೋದಿಯವರು ಜಾರಿಗೆ ತಂದ‌ ಕೃಷಿ ಕಾಯ್ದೆ ಜಾರಿಯಾಗಲಿ. ಕಾಯ್ದೆ ಜಾರಿ ಆಗದೆ ಒಳಿತು- ಕೆಡಕು ನಿರ್ಧಾರವಾಗೋದು ಹೇಗೆ..? ಎಂದು ಪ್ರಶ್ನಿಸಿದ್ದಾರೆ.
 

PREV
click me!

Recommended Stories

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್