ಸರ್ಕಾರ ಟೇಕ್ ಆಫ್ ಆಗಿಲ್ಲ ಎನ್ನೋರಿಗೆ ತಿರುಗೇಟು ನೀಡಿದ ರೇವಣ್ಣ

By Web DeskFirst Published Aug 27, 2018, 4:46 PM IST
Highlights

ಮುಖ್ಯಮಂತ್ರಿ ಕುಮಾರಸ್ವಾಮಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ನಾಲ್ಕುವರೆ ವರ್ಷದಲ್ಲಿ ರೈತರಿಗೆ ಕೇಂದ್ರ ಸರ್ಕಾರದ ಕೊಡುಗೆ ಏನು.? ಈಗಲಾದರೂ ಕೇಂದ್ರ ಸರ್ಕಾರ ಪರಿಹಾರ ನೀಡಲು ರಾಜ್ಯದಲ್ಲಿರೊ ಕೇಂದ್ರ ಸಚಿವರು ಒಂದಾಗಿ ಒತ್ತಾಯ ಮಾಡಲಿ ಎಂದು ರೇವಣ್ಣ ಆಗ್ರಹಿಸಿದ್ದಾರೆ. 

ಹಾಸನ[ಆ.27]: ರಾಜ್ಯದಲ್ಲಿ ಮೊದಲ ಬಾರಿಗೆ 39 ಸಾವಿರ‌‌‌ ಕೋಟಿ ರುಪಾಯಿ ಸಾಲ ಮನ್ನಾ ಆಗಿದೆ, ಪದವಿ ಕಾಲೇಜುಗಳ ಉಪನ್ಯಾಸಕರ ನೇಮಕಾತಿಗೆ ಆದೇಶ ನೀಡಲಾಗಿದೆ ಇವೆಲ್ಲಾ ಟೇಕ್ ಆಫ್ ಅಲ್ವಾ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಸರ್ಕಾರ ಇನ್ನು ಟೇಕ್ ಆಫ್ ಆಗಿಲ್ಲ ಎಂದು ಪದೇಪದೇ ಟೀಕಿಸುವ ಬಿಜೆಪಿ ಸರಿಯಾಗಿ ಅಂಕಿ ಅಂಶಗಳನ್ನು ಇಟ್ಟುಕೊಂಡು ಮಾತನಾಡಲಿ, ರಾಜಕೀಯ ಬಿಟ್ಟು ಎಲ್ಲಾ ನಾಯಕರು ಅಭಿವೃದ್ದಿಗೆ ಕೈಜೋಡಿಸಲಿ ಎಂದು ರೇವಣ್ಣ ಕಿವಿಮಾತು ಹೇಳಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ರೇವಣ್ಣ, ರಾಜ್ಯದಲ್ಲಿ ಸಾವಿರಾರು ಕಿಲೋ ಮೀಟರ್ ರಸ್ತೆಗಳು ಹಾಳಾಗಿವೆ. ಕೇಂದ್ರ ಸಚಿವರು ಕೊಡಗಿಗೆ ಭೇಟಿ ನೀಡಿದರೂ ಅಗತ್ಯ ಅನುದಾನ ನೀಡಿಲ್ಲ. ತಮ್ಮ ಅನುದಾನದಲ್ಲಾದರೂ ಅವರು ಪರಿಹಾರ ಘೋಷಿಸಬೇಕಿತ್ತು ಎಂದು ರಕ್ಷಣಾ ಸಚಿವರ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದರು.

click me!