ಮಾಜಿ ಸಚಿವ ಎ. ಮಂಜು ಬಿಜೆಪಿಗೆ..? ಕೊನೆಗೂ ಸ್ಪಷ್ಟನೆ ನೀಡಿದ ಮಾಜಿ ಸಚಿವ

By Web DeskFirst Published Aug 16, 2018, 6:24 PM IST
Highlights

ರಾಮನಾಥಪುರದ ಕಾವೇರಿ ನದಿ ಬಳಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಕುರಿತು ಇನ್ನು ಅನಿಶ್ಚಿತತೆ ಇದೆ. ಸಮ್ಮಿಶ್ರ ಸರ್ಕಾರದಲ್ಲಿ ಇರೋದ್ರಿಂದ ನಾನೇ ಅಭ್ಯರ್ಥಿ ಎಂದು ಹೇಳಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ ಮಂಡ್ಯ ಅಥವಾ ಹಾಸನ ಕಾಂಗ್ರೆಸ್ ಪಕ್ಷಕ್ಕೆ ನೀಡಬೇಕು. 

ಹಾಸನ[ಆ.16]: ರಾಜಕಾರಣದಲ್ಲಿ ಏನು ಬೇಕಾದ್ರೂ ಆಗಬಹುದು. ಅದು ನಿಂತ ನೀರಲ್ಲ. ಆದರೆ ನಾನು ಬಿಜೆಪಿಗೆ ಹೋಗುತ್ತೇನೆ ಎನ್ನುವುದು ಮಾಧ್ಯಮಗಳ ಊಹಾಪೋಹ ಎಂದು ಮಾಜಿ ಸಚಿವ ಎ. ಮಂಜು ಹೇಳಿದ್ದಾರೆ.

ರಾಮನಾಥಪುರದ ಕಾವೇರಿ ನದಿ ಬಳಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಕುರಿತು ಇನ್ನು ಅನಿಶ್ಚಿತತೆ ಇದೆ. ಸಮ್ಮಿಶ್ರ ಸರ್ಕಾರದಲ್ಲಿ ಇರೋದ್ರಿಂದ ನಾನೇ ಅಭ್ಯರ್ಥಿ ಎಂದು ಹೇಳಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ ಮಂಡ್ಯ ಅಥವಾ ಹಾಸನ ಕಾಂಗ್ರೆಸ್ ಪಕ್ಷಕ್ಕೆ ನೀಡಬೇಕು. ದೇವೇಗೌಡರೇ ಹಾಸನದ ಅಭ್ಯರ್ಥಿಯಾಗುವುದಾದರೆ, ನಮಗೆ ಮಂಡ್ಯ ಬೇಕು. ಇದು ನನ್ನ ವೈಯುಕ್ತಿಕ ಕಳಕಳಿ ಎಂದು ಮಂಜು ಹೇಳಿದ್ದಾರೆ. 

ಜೆಡಿಎಸ್’ನವರೂ ಕೂಡ ಸ್ವಲ್ಪ ವಿಶಾಲ ಮನೋಭಾವನೆಯನ್ನು ತೋರಿಸಬೇಕು. 37 ಕ್ಷೇತ್ರಗಳನ್ನು ಗೆದ್ದ ಜೆಡಿಎಸ್’ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ಮಂಜು ಅವರ ಈ ಹೇಳಿಕೆ ರಾಜ್ಯರಾಜಕಾರಣದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಮಾತು ದಟ್ಟವಾಗುತ್ತಿದೆ
 

click me!