ಈ ವರ್ಷದ ಜೂ. 21ರಂದು ಮೈಸೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗುವ ಸಾಧ್ಯತೆಗಳಿದ್ದು, ಹಳೆಯ ಗಿನ್ನಿಸ್ ದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಲಾಗುವುದು ಎಂದು ಸಂಸದ ಪ್ರತಾಪ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು (ಏ.11): ಈ ವರ್ಷದ ಜೂ. 21ರಂದು ಮೈಸೂರಿನಲ್ಲಿ (Mysuru) ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ (International Yoga Day) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭಾಗಿಯಾಗುವ ಸಾಧ್ಯತೆಗಳಿದ್ದು, ಹಳೆಯ ಗಿನ್ನಿಸ್ ದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಲಾಗುವುದು ಎಂದು ಸಂಸದ ಪ್ರತಾಪ ಸಿಂಹ (Pratap Simha) ವಿಶ್ವಾಸ ವ್ಯಕ್ತಪಡಿಸಿದರು. ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಸಹಯೋಗದಲ್ಲಿ ಮೈಸೂರು ಯೋಗ ಫೌಂಡೇಷನ್ ಹಾಗೂ ಆಯುಷ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಅರಮನೆ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯೋಗೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಎರಡು ವರ್ಷದಿಂದ ಕೊರೋನಾ ಕಾರಣಕ್ಕೆ ಯೋಗ ದಿನಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಮೈಸೂರಿಗೆ ಬರುವಂತೆ ಮನವಿ ಮಾಡಲಾಗಿದೆ. ಲಡಾಖ್ ಅಥವಾ ಮೈಸೂರಿಗೆ ಬರಲು ಪ್ರಧಾನಿಗಳ ಪ್ರವಾಸ ಪಟ್ಟಿಮಾಡಲಾಗಿದೆ. ಅವರು ಮೈಸೂರಿಗೆ ಬರುತ್ತಾರೆ ಎಂಬ ಖಚಿತವಾದ ವಿಶ್ವಾಸವಿದೆ ಎಂದರು. ಯೋಗದ ವಿಷಯದಲ್ಲಿ ಈವರೆಗೆ ಯಾರೂ ರಾಜಕೀಯ ಮಾಡಿಲ್ಲ. ಈ ಹಿಂದೆ ಕಾಂಗ್ರೆಸ್ ಹಾಗೂ ಜಾ.ದಳ ಸರ್ಕಾರ ಇದ್ದಾಗಲೇ ಮೈಸೂರು ಯೋಗ ದಿನದಂದು ವಿಶ್ವ ದಾಖಲೆ ಮಾಡಿತ್ತು. ಈ ಬಾರಿ ಕೂಡ ಎಲ್ಲರೂ ಕೈಜೋಡಿಸುವ ಮೂಲಕ ಈಗ ಇರುವ ಒಂದು ಲಕ್ಷದ 2 ಸಾವಿರ ಜನರ ಯೋಗ ದಾಖಲೆಯನ್ನು ಮುರಿಯಬೇಕಾಗಿದೆ.
undefined
Karnataka Politics: ಬೊಮ್ಮಾಯಿ ಮಾತಾಡುವ ಬಸವಣ್ಣ ಅಲ್ಲ, ದುಡಿವ ಬಸವಣ್ಣ: ಪ್ರತಾಪ್ ಸಿಂಹ
ಈ ಬಾರಿ ಮೈಸೂರಿನಲ್ಲಿ ಒಂದು ಲಕ್ಷದ ಹತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಬಂಧುಗಳು ಸೇರುವ ನಿರೀಕ್ಷೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು. ಮೋದಿ ಅವರು ಪ್ರಧಾನಿಯಾದ ನಂತರ ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆಯ ಗೊತ್ತುವಳಿ ಮಂಡಿಸಿದರು. ಆಗ ಸಭೆಯಲ್ಲಿ ಹಾಜರಿದ್ದ 177 ದೇಶಗಳು ಗೊತ್ತುವಳಿಯನ್ನು ಒಕ್ಕೊರಲಿನಿಂದ ಅಂಗೀಕರಿಸಿದ್ದವು. ಅಲ್ಲದೆ 2019ರಲ್ಲಿ 197 ರಾಷ್ಟ್ರಗಳಲ್ಲಿ ಯೋಗ ದಿನಾಚರಣೆ ಆಚರಿಸುವ ಮೂಲಕ ಯೋಗದ ಮಹತ್ವವನ್ನು ಸಾರಿದವು. ಇದು ಭಾರತದ ಹಿರಿಮೆಗೆ ಹಿಡಿದ ಕನ್ನಡಿ ಎಂದು ಹೇಳಿದರು.
ಮೈಸೂರು ಅರಸರು ಹಾಗೂ ಹಿರಿಯ ಯೋಗ ಗುರುಗಳು ಇಲ್ಲಿನ ಯೋಗ ಪರಂಪರೆಯನ್ನು ವಿಶ್ವದಾದ್ಯಂತ ಹರಡಿದ್ದಾರೆ. ಅರಸರು ನೆಲೆಸಿರುವ ಅರಮನೆ ಮುಂಭಾಗದಲ್ಲಿ ಯೋಗ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು. ಎಂಡಿಎ ಅಧ್ಯಕ್ಷ ಎಚ್.ವಿ. ರಾಜೀವ್ ಮಾತನಾಡಿ, ಚೀನಾದಂತಹ ದೇಶದಲ್ಲಿ ಹಲವಾರು ಯೋಗ ಶಿಕ್ಷಕರು ಯೋಗ ಕಲಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಅರ್ಥಮಾಡಿಕೊಂಡರೆ ಯೋದ ಮಹತ್ವ ಎಂತಹುದು ಎಂಬುದು ತಿಳಿಯುತ್ತದೆ ಎಂದರು.
'ನಮ್ಮ ಸರ್ಕಾರವೇ ಅಧಿಕಾರದಲ್ಲಿರುವ ಸಮಯದಲ್ಲಿ ಕೊಲೆ ನಡೆದಿರುವುದು ನಾಚಿಕೆಗೇಡು'
ಯೋಗ ಫೌಂಡೇಷನ್ ಅಧ್ಯಕ್ಷ ಶ್ರೀಹರಿ ಮಾತನಾಡಿ, ಪ್ರಧಾನಿಗಳು ಯೋಗ ದಿನಾಚರಣೆಗೆ ಮೈಸೂರಿಗೆ ಬರುವ ಮೂಲಕ ಇಲ್ಲಿನ ಯೋಗ ಪರಂಪರೆಗೆ ಬೆಂಬಲ ನೀಡುವಂತಾಗಲಿ. ಇದರಿಂದ ಮೈಸೂರ ಬ್ರಾಂಡ್ ದೇಶ- ವಿದೇಶ ಮಟ್ಟದಲ್ಲಿ ಬೆಳೆಯಲು ಎಂದು ಆಶಯ ವ್ಯಕ್ತಪಡಿಸಿದರು. ರಾಘವೇಂದ್ರ ಪೈ ಹಾಗೂ ಗಣೇಶ್ ಅವರು ಶಂಖನಾದ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಮೇಯರ್ ಸುನಂದಾ ಫಾಲನೇತ್ರ ಹಾಜರಿದ್ದರು. ಡಾ. ಚಂದ್ರ ಆಚಾರ್ಯ ಅವರು ವಿಶೇಷ ಯೋಗಾಭ್ಯಾಸದ ಮೂಲಕ ಗಮನ ಸೆಳೆದರು.