ಮೈಸೂರು ಗ್ಯಾಂಗ್‌ರೇಪ್‌: ನನ್ನ ಇಲಾಖೆಯಿಂದ ಎಲ್ಲ ಕೆಲಸ ಆಗಿದೆ, ಸಚಿವ ಆಚಾರ್‌

By Kannadaprabha News  |  First Published Aug 30, 2021, 7:31 AM IST

*  ಸಂತ್ರಸ್ತೆ ಈವರೆಗೂ ದೂರು ಹಾಗೂ ಹೇಳಿಕೆ ನೀಡಿಲ್ಲ
*  ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಆಚಾರ್‌ 
*  ಕಾನೂನು ಅಡಿ ಆರೋಪಿಗಳಿಗೆ ಶಿಕ್ಷೆ


ಕೊಪ್ಪಳ(ಆ.30):  ಮೈಸೂರು ಗ್ಯಾಂಗ್‌ರೇಪ್‌ ಪ್ರಕರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಏನೇನು ಕೆಲಸಗಳು ಆಗಬೇಕಿತ್ತೋ ಆ ಎಲ್ಲ ಕೆಲಸಗಳನ್ನು ಈಗಾಗಲೇ ಮಾಡಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹೇಳಿದ್ದಾರೆ.

ಯಲಬುರ್ಗಾ ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣದಲ್ಲಿ ಸಂತ್ರಸ್ತೆ ಈವರೆಗೂ ದೂರು ಹಾಗೂ ಹೇಳಿಕೆಯನ್ನು ನೀಡಿಲ್ಲ. ಇದಕ್ಕೆ ಆಕೆ ಘಟನೆಯಲ್ಲಿ ತೀವ್ರ ಆಘಾತಕ್ಕೊಳಗಾಗಿರುವುದೇ ಕಾರಣ ಇರಬಹುದು ಎಂದರು.

Tap to resize

Latest Videos

ಕೊಪ್ಪಳ: ವಿವಾದಾತ್ಮಕ ಹೇಳಿಕೆ, ರಾಯರಡ್ಡಿ ವಿರುದ್ಧ ಆಕ್ರೋಶ

ಆದರೂ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದೆ ಕಾನೂನು ಅಡಿ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಖಂಡಿತವಾಗಿಯೂ ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
 

click me!