ಮೈಸೂರು (ಆ.29): ಸಾಮಾಜಿಕ ಜಾಲತಾಣದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳ ಸ್ವಪ್ರಶಂಸೆ, ಫ್ಯಾನ್ ಪೇಜ್‌ಗೆ ನಿಷೇಧ ಹೇರಬೇಕೆಂಬ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಸಾ.ರಾ. ಮಹೇಶ್ ಬೆಂಬಲ ಸೂಚಿಸಿದ್ದಾರೆ.
ಈ ಸಂಬಂಧ ಧನಿಗೂಡಿಸಿ ಮಾತನಾಡಿದ ಅವರು, ಈ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಆಡಿರುವ ಮಾತುಗಳನ್ನು ಒಪ್ಪುತ್ತೇನೆ. ಸರ್ಕಾರಿ ಅಧಿಕಾರಿಗಳು ಸಿಂಗಂ, ಮಂಗಂ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸಿಕೊಳ್ಳಬಾರದು. ಈ ಸಂಬಂಧ ಕೇಂದ್ರ ವಾರ್ತಾ ಇಲಾಖೆಯ ಮಂತ್ರಿಗಳಿಗೆ ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ನಾವು ಜನಪ್ರತಿನಿಧಿಗಳಾಗಿರುವುದರಿಂದ ಮುಂದಿನ ಚುನಾವಣೆ ದೃಷ್ಟಿಯಿಂದ ನಮ್ಮ ಸಾಧನೆಗಳನ್ನು ಜನರ ಮುಂದೆ ಹೇಳಿಕೊಳ್ಳುವುದು, ಬಿಂಬಿಸಿಕೊಳ್ಳುವುದು ಅನಿವಾರ್ಯ ಎಂದರು.
undefined
ಐಎಎಸ್, ಐಪಿಎಸ್ ಫ್ಯಾನ್‌ಪೇಜ್ ನಿಷೇಧಿಸಲು ಪ್ರತಾಪ್‌ಸಿಂಹ ಮನವಿ
ಆದರೆ, ಸರ್ಕಾರಿ ಅಧಿಕಾರಿಗಳು ಅವರ ಹೆಸರಿನಲ್ಲಿ ಅಭಿಮಾನಿಗಳ ಸಂಘ ಹುಟ್ಟು ಹಾಕಿಕೊಂಡು, ಸರ್ಕಾರದ ಸಾಧನೆಗಳನ್ನು ತಮ್ಮದೇ ಸಾಧನೆಗಳೆಂಬಂತೆ ಬಿಂಬಿಸಿಕೊಳ್ಳಲು ಅವಕಾಶ ನೀಡಬಾರದು ಎಂದು ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ನೀಡುತ್ತೇನೆ
ಬರುವ ಬುಧವಾರ ಮೈಸೂರು ಜಿಲ್ಲೆಯೇ ಬೆಚ್ಚಿ ಬೀಳುವಂತಹ ಬ್ರೇಕಿಂಗ್ ನ್ಯೂಸ್ ನೀಡುತ್ತೇನೆ. ಇಡೀ ಮೈಸೂರನ್ನು ಬೆಚ್ಚಿ ಬೀಳಿಸುವ ಹಗರಣ ಅದಾಗಿದೆ. 6 ಕೋಟಿ ನುಂಗಿ ಹಾಕುವ ಯತ್ನ ಮಾಡಿದ್ದರು. ಅದನ್ನು ನಾವು ತಡೆದಿದ್ದೇವೆ. ಈ ಬಗ್ಗೆ ದಾಖಲೆಗಳ ಸಮೇತ ಬರುವ ಬುಧವಾರ ತಿಳಿಸುತ್ತೇನೆ ಎಂದು ಅವರು ಮಾರ್ಮಿಕವಾಗಿ ನುಡಿದರು.