MTB ನಾಗರಾಜ್, ಶಂಕರ್, ವಿಶ್ವನಾಥ್‌ಗೆ ಬಿಜೆಪಿ ಟಿಕೆಟ್‌ ನೀಡಲೇಬೇಕು: ಸಚಿವ ನಾಗೇಶ್

By Suvarna NewsFirst Published Jun 5, 2020, 2:12 PM IST
Highlights

ನ್ಯಾಯಬದ್ದವಾಗಿ ಮೂವರಿಗೂ ಟಿಕೆಟ್ ಕೊಡಬೇಕು| ಬಿಜೆಪಿ ಸರ್ಕಾರ  ರಚನೆಯ ಸಂದರ್ಭದಲ್ಲಿ 18 ಶಾಸಕರ ಪಾತ್ರ ಅತಿಮುಖ್ಯವಾಗಿತ್ತು| ಯಡಿಯೂರಪ್ಪ ಕೊಟ್ಟ ಮಾತು ತಪ್ಪುವುದಿಲ್ಲ| ಒಂದು ಬಾರಿ ಯಡಿಯೂರಪ್ಪ ಹೇಳಿದ್ರೆ ಅದು ಖಂಡಿತ ಆಗೇ ಆಗುತ್ತದೆ| ಎಂಎಲ್‌ಸಿ ಟಿಕೆಟ್ ಕೊಡೊದಾಗಿ ಹೇಳಿದ್ದಾರಂತೆ, ಕೊಡುತ್ತಾರೆ ಎಂಬ ನಂಬಿಕೆಯಿದೆ|

ಕೋಲಾರ(ಜೂ.05): ಎಂಟಿಬಿ ನಾಗರಾಜ್, ಅರ್. ಶಂಕರ್, ಹೆಚ್. ವಿಶ್ವನಾಥ್‌ ಅವರಿಗೆ ಬಿಜೆಪಿ ವಿಧಾನ ಪರಿಷತ್‌ ಟಿಕೆಟ್‌ ಟಿಕೆಟ್ ಕೊಡಲೇಬೇಕು ಎಂದು ಅಬಕಾರಿ ಸಚಿವ ಎಚ್. ನಾಗೇಶ್ ಅವರು ಆಗ್ರಹಿಸಿದ್ದಾರೆ.

ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನ್ಯಾಯಬದ್ದವಾಗಿ ಮೂವರಿಗೂ ಟಿಕೆಟ್ ಕೊಡಬೇಕು. ಬಿಜೆಪಿ ಸರ್ಕಾರ  ರಚನೆಯ ಸಂದರ್ಭದಲ್ಲಿ 18 ಶಾಸಕರ ಪಾತ್ರ ಅತಿಮುಖ್ಯವಾಗಿತ್ತು ಎಂದು ಹೇಳಿದ್ದಾರೆ. 

ರಾಜ್ಯಸಭೆ ಸೀಟು ನೆಪ ಮಾತ್ರ! ಬಂಡಾಯದ‌ ಹಿಂದಿದೆ 3 ಕುಟುಂಬಗಳ ಆ ರಹಸ್ಯ

ಯಡಿಯೂರಪ್ಪ ಅವರು ಕೊಟ್ಟ ಮಾತು ತಪ್ಪುವುದಿಲ್ಲ, ಒಂದು ಬಾರಿ ಯಡಿಯೂರಪ್ಪ ಹೇಳಿದ್ರೆ ಅದು ಖಂಡಿತ ಆಗೇ ಆಗುತ್ತದೆ. MLC ಟಿಕೆಟ್ ಕೊಡೊದಾಗಿ ಹೇಳಿದ್ದಾರಂತೆ, ಕೊಡುತ್ತಾರೆ ಎಂಬ ನಂಬಿಕೆಯಿದೆ ಎಂದು ತಿಳಿಸಿದ್ದಾರೆ. 
ಉಪ ಚುನಾವಣೆಯಲ್ಲಿ ಸೋತವರಿಗೆ ಟಿಕೆಟ್ ನೀಡಲು ಬಿಜೆಪಿಯಲ್ಲಿ ವಿರೋಧ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಎಚ್‌.ನಾಗೇಶ್‌ ಅವರು, ಪಕ್ಷಾಂತರ ಮಾಡದೇ ಇದ್ದಿದ್ದರೆ ಇವತ್ತು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ. ವಿರೋಧ ಪಕ್ಷದಲ್ಲಿ ಕೂತಿರಬೇಕಿತ್ತು. ಕಾರಣಾಂತರದಿಂದ ಎಲೆಕ್ಷನ್‌ನಲ್ಲಿ ಸೋತಿದ್ದಾರೆ, ಮತ್ತೆ ಆಯ್ಕೆಯಾದರೆ ಸರ್ಕಾರಕ್ಕೆ ಮತ್ತಷ್ಟು ಬಲ ಬರುತ್ತೆ ಎಂದು ತಿಳಿಸಿದ್ದಾರೆ. 

ಇನ್ನು ಎಂಟಿಬಿ ನಾಗರಾಜ್ ಪರ ಕೋಲಾರ ಸಂಸದ ಮುನಿಸ್ವಾಮಿ ಅವರೂ ಕೂಡ ಬ್ಯಾಟ್‌ ಬೀಸಿದ್ದಾರೆ. ಹೌದು, ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇವೆರಲ್ಲ ಕಾಂಗ್ರೆಸ್ ದುರಾಡಳಿತ ತೊರೆದು ಬಿಜೆಪಿಗೆ ಬಂದಿದ್ದಾರೆ. ಮಂತ್ರಿ ಸ್ಥಾನಕ್ಕೂ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದಾರೆ.ಎಂಟಿಬಿ ನಾಗರಾಜ್ ಹಿರಿಯರು, ಟಿಕೆಟ್ ಕೊಟ್ಟು ಉಳಿಸಿಕೊಳ್ಳಬೇಕು. ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಸಿಎಂ ಯಡಿಯೂರಪ್ಪ ಅವರಿಗೆ ನಾನು ಸಹ ಒತ್ತಡ ಹಾಕಿದ್ದೇನೆ ಎಂದು ಹೇಳಿದ್ದಾರೆ.

#NewsIn100Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್‌

"

click me!