ಎಚ್.ಟಿ. ಸೋಮಶೇಖರ, ಭೈರತಿ ಬಸವರಾಜ ಹಾಗೂ ಮುನಿರತ್ನ ಅವರಿಗೆ ಸಿದ್ದರಾಮಯ್ಯ ಕುರಿತು ಮಾತನಾಡುವ ಯಾವುದೇ ನೈತಿಕತೆ ಇಲ್ಲ| ವಲಸೆ ಹೋಗಿರುವ 17 ಶಾಸಕರನ್ನು ಬಿಜೆಪಿ ಮುಂದೊಂದು ದಿನ ಬೀದಿಗೆ ನಿಲ್ಲಿಸುತ್ತದೆ| ಈಗಾಗಲೇ ಬಿಜೆಪಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ|
ಕೊಪ್ಪಳ(ಜೂ.05): ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಎಚ್.ಟಿ. ಸೋಮಶೇಖರ, ಭೈರತಿ ಬಸವರಾಜ ಹಾಗೂ ಮುನಿರತ್ನ ಅವರನ್ನು ಎಸ್‌ಬಿಎಂ ಎಂದೇ ಕರೆಯುತ್ತಿದ್ದರು. ಸಿದ್ದರಾಮಯ್ಯ ಅವರಿಂದ ಲಾಭ ಪಡೆದು ಅವರ ಬೆನ್ನಿಗೆ ಚೂರಿ ಹಾಕಿದರು ಎಂದು ಕಾಂಗ್ರೆಸ್ ಕೊಪ್ಪಳ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದಾರೆ.
ಗುರುವಾರ ಏರೋಡ್ರೋಮ್‌ನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಬಿಎಂ ಎಂದು ಕರೆಯುತ್ತಿದ್ದ ಮೂವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
'ಸಿದ್ದರಾಮಯ್ಯ ಮೋಸ ಮಾಡಿದ್ದಕ್ಕೆ ನಾವು ಕಾಂಗ್ರೆಸ್ ಬಿಟ್ಟಿದ್ದು'
ಈ ಮೂವರಿಗೂ ಸಿದ್ದರಾಮಯ್ಯ ಅವರ ಕುರಿತು ಮಾತನಾಡುವ ಯಾವುದೇ ನೈತಿಕತೆ ಇಲ್ಲ. ವಲಸೆ ಹೋಗಿರುವ 17 ಶಾಸಕರನ್ನು ಬಿಜೆಪಿ ಮುಂದೊಂದು ದಿನ ಬೀದಿಗೆ ನಿಲ್ಲಿಸುತ್ತದೆ. ಈಗಾಗಲೇ ಬಿಜೆಪಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಪ್ರತಿ ಬಾರಿ ಅಧಿಕಾರಕ್ಕೆ ಬಂದಾಗಲು ಕಿತ್ತಾಡುವುದರಲ್ಲಿಯೇ ಕಾಲ ಕಳೆಯುತ್ತಾರೆ ಬಿಜೆಪಿಯವರು ಎಂದು ಆರೋಪಿಸಿದ್ದಾರೆ.