ಮುಂಬೈನಿಂದ ತವರಿಗೆ ಬಂದ 8 ತಿಂಗಳ ಗರ್ಭಿಣಿಗೆ ಕೊರೋನಾ ಸೋಂಕು

By Kannadaprabha NewsFirst Published Jun 5, 2020, 2:03 PM IST
Highlights

ಮುಂಬೈನಿಂದ ಹುಣಸೂರಿನ ತನ್ನ ತವರು ಮನೆಗೆ ಬಂದಿದ್ದ 8 ತಿಂಗಳ ಗರ್ಭಿಣಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಗರ್ಭಿಣಿಯನ್ನು ಮೈಸೂರಿನ ಕೋವಿಡ್‌-19 ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಹುಣಸೂರು(ಜೂ.05): ಮುಂಬೈನಿಂದ ಹುಣಸೂರಿನ ತನ್ನ ತವರು ಮನೆಗೆ ಬಂದಿದ್ದ 8 ತಿಂಗಳ ಗರ್ಭಿಣಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಗರ್ಭಿಣಿಯನ್ನು ಮೈಸೂರಿನ ಕೋವಿಡ್‌-19 ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಒಂದು ದಿನ ತನ್ನೂರಿನಲ್ಲಿದ್ದ ಗರ್ಭಿಣಿಯ ತವರೂರು ಹೊಸಪೆಂಜಳ್ಳಿಯ ಸೋಂಕಿತರ ಮನೆಯ ಬೀದಿಯನ್ನು 28 ದಿನಗಳ ಕಾಲ ಕಂಟೈನ್‌ಮೆಂಟ್‌ ವಲಯವಾಗಿ ಪರಿವರ್ತಿಸಲಾಗಿದೆ.

ಕೊಡಗು ಮನೆ ಹಸ್ತಾಂತರದಲ್ಲಿ ಎಚ್‌ಡಿಕೆ ಕಡೆಗಣನೆ: ಜೆಡಿಎಸ್‌ ಪ್ರತಿಭಟನೆ

ತಾಲೂಕಿನ ಹನಗೋಡು ಹೋಬಳಿ ಹೊಸಪೆಂಜಳ್ಳಿ ಗ್ರಾಮದ ನಿವಾಸಿಯಾಗಿರುವ 28 ವರ್ಷದ ಮಹಿಳೆ 8 ತಿಂಗಳ ಗರ್ಭಿಣಿಯಾಗಿದ್ದರು. ಇವರ ಪತಿಯ ಮನೆ ಕೆ.ಆರ್‌. ನಗರದ ಹೆಬ್ಬಾಳದಲ್ಲಿದೆ. ಮುಂಬೈನಿಂದ ಜೂ.2ರ ಸಂಜೆ ಮೈಸೂರಿಗೆ ಆಗಮಿಸಿ, ಅಲ್ಲಿ ಗಂಟಲುದ್ರವ ಪರೀಕ್ಷೆ ನಡೆಸಿ, ಹುಣಸೂರಿನ ತಮ್ಮ ತವರು ಮನೆಗೆ 4 ವರ್ಷದ ತಮ್ಮ ಕಂದಮ್ಮನೊಂದಿಗೆ ಬಂದಿದ್ದಾರೆ. ಜೂ. 3ರಂದು ಸಂಜೆ ಆಕೆಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಹಿನ್ನೆಲೆ ಕೂಡಲೇ ಆಕೆಯನ್ನು ಮೈಸೂರಿನ ಕೋವಿಡ್‌ ಆಸ್ಪತ್ರಗೆ ದಾಖಲಿಸಲಾಗಿದೆ.

ತಾಲೂಕು ಆರೋಗ್ಯಾಧಿಕಾರಿ ಡಾ. ಕೀರ್ತಿಕುಮಾರ್‌ ಮಾಹಿತಿ ನೀಡಿ, ಗರ್ಭಿಣಿ ಮಹಿಳೆಯೊಂದಿಗೆ ಪ್ರಾಥಮಿಕ ಸಂಪರ್ಕಿಸಿದವರನ್ನು ಗುರುತಿಸಲಾಗುತ್ತಿದೆ. ನಂತರ ಎರಡನೆ ಹಂತದಲ್ಲಿ ಸಂಪರ್ಕ ಸಾಧಿಸಿದವರನ್ನೂ ಗುರುತಿಸಲಾಗುತ್ತಿದೆ ಎಂದರು.

ಕೊಡಗು ಮಹಾಮಳೆ ಸಂತ್ರಸ್ತರ ಮುಖದಲ್ಲಿ ಮಂದಹಾಸ: ಮನೆ ಹಸ್ತಾಂತರದ ಸಂಭ್ರಮದ ಕ್ಷಣ ಹೀಗಿತ್ತು

ಗುರುವಾರ ಬೆಳಗ್ಗೆ ತಹಸೀಲ್ದಾರ್‌ ಐ.ಇ. ಬಸವರಾಜ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ತಹಸೀಲ್ದಾರ್‌, ಕೊರೋನಾ ಸೋಂಕು ಪಾಸಿಟಿವ್‌ ಪ್ರಕರಣ ಪತ್ತೆಯಾದ ಹಿನ್ನೆಲೆ ಸೋಂಕಿತರ ಮನೆಯ ಬೀದಿ, ಅಕ್ಕಪಕ್ಕದ ಬೀದಿಗಳನ್ನು 28 ದಿನಗಳ ಕಾಲ ಕಂಟೈನ್‌ಮೆಂಟ್‌ ಜೋನ್‌ ಆಗಿ ಗುರುತಿಸಲಾಗಿದ್ದು, ಇಲ್ಲಿ ಹೊರಗಿನವರಿಗೆ ಮತ್ತು ಈ ಬೀದಿಗಳನ್ನು ಹೊರತುಪಡಿಸಿ ಗ್ರಾಮದ ಇನ್ನಿತರ ಬೀದಿಗಳ ಜನರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಗ್ರಾಮಸ್ಥರಿಗೆ ಕೃಷಿ ಚಟುವಟಿಕೆ ನಡೆಸಲು ಅವಕಾಶ ನೀಡಲಾಗಿದೆ ಎಂ¨ರು. ಡಿವೈಎಸ್‌ಪಿ ಕೆ.ಎಸ್‌. ಸುಂದರರಾಜ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ಸಿ. ಪೂವಯ್ಯ, ಇಒ ಗಿರೀಶ್‌, ಅಧಿಕಾರಿಗಳು ಇದ್ದರು.

click me!