ಅವಳಿ ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆಯಿಂದ ದಿಗ್ಭ್ರಮೆಗೆ ಒಳಗಾಗಿದ್ದೇನೆ: ಸಚಿವ ಸುಧಾಕರ್‌

By Govindaraj S  |  First Published Nov 4, 2022, 11:40 PM IST

ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ತಾಯಿ ಮತ್ತು ಅವಳಿ ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆಯಿಂದ ದಿಗ್ಭ್ರಮೆಗೆ ಒಳಗಾಗಿದ್ದೇನೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್‌ ತಿಳಿಸಿದ್ದಾರೆ. ಘಟನೆ ನಡೆದ ಬಳಿಕ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. 


ತುಮಕೂರು (ನ.04): ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ತಾಯಿ ಮತ್ತು ಅವಳಿ ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆಯಿಂದ ದಿಗ್ಭ್ರಮೆಗೆ ಒಳಗಾಗಿದ್ದೇನೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್‌ ತಿಳಿಸಿದ್ದಾರೆ. ಘಟನೆ ನಡೆದ ಬಳಿಕ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮೇಲ್ನೋಟಕ್ಕೆ ಹೆರಿಗೆ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ದಾದಿಯರು ಕರ್ತವ್ಯ ಲೋಪ ಎಸಗಿದ್ದಾರೆ ಎನ್ನುವುದು ಗೊತ್ತಾಗಿದೆ. ಅಲ್ಲದೇ ಡ್ಯೂಟಿ ಡಾಕ್ಟರ್‌ ಕಡೆಯಿಂದಲೂ ಕರ್ತವ್ಯ ಲೋಪ ಆಗಿದೆ. 

ಅಷ್ಟೇ ಅಲ್ಲ ಅವರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದ ಅವರು ಈ ಸುದ್ದಿ ಗೊತ್ತಾದ ಬಳಿಕ ಊಟವನ್ನೇ ಮಾಡಿಲ್ಲ ಎಂದರು. ತುರ್ತು ಚಿಕಿತ್ಸೆ ಇದ್ದಾಗ ಯಾವುದೇ ದಾಖಲೆಗಳ ಅವಶ್ಯಕತೆ ಇಲ್ಲ. ಈಗಾಗಲೇ ಇದು ಜಾರಿಯಲ್ಲಿದೆ. ನಾನು ಮತ್ತೊಮ್ಮೆ ಇದನ್ನು ಆದೇಶ ನೀಡುತ್ತಿದ್ದೇನೆ. ತುರ್ತು ಸ್ಥಿತಿಯಲ್ಲಿ ರೋಗಿಯ ಯಾವುದೇ ದಾಖಲಾತಿ ನೀಡಲು ಒತ್ತಾಯಿಸಬಾರದು. ಇಂತಹ ಘಟನೆ ಮರುಕಳಿಸಿದಲ್ಲಿ ಸೇವೆಯಿಂದ ವಜಾಗೊಳಿಸುವುದಲ್ಲದೆ, ಕ್ರಿಮಿನಲ್‌ ಮೊಕದ್ದಮೆಯನ್ನು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

Tap to resize

Latest Videos

Tumakuru ಅವಳಿ ಶಿಶು ಧಾರುಣ ಸಾವು ಪ್ರಕರಣ: ಸಚಿವರ ರಾಜೀನಾಮೆಗೆ ಎಚ್‌ಡಿಕೆ ಆಗ್ರಹ

ವೈದ್ಯರಿಗೆ, ಅರೋಗ್ಯ ಸಿಬ್ಬಂದಿಗೂ ಮಾನವೀಯತೆ ಇರಬೇಕಾಗುತ್ತದೆ. ವೃತ್ತಿ ಧರ್ಮಕ್ಕೆ ಅನುಗುಣವಾಗಿ ನಡೆದುಕೊಳ್ಳದೆ ಇದ್ದಲ್ಲಿ ಸರ್ಕಾರ ಇವರ ವಿರುದ್ಧವೂ ಕ್ರಮ ಕೈಗೊಳ್ಳುತ್ತದೆ. ಈ ಘಟನೆ ತುಂಬಾ ನೋವನ್ನು ತಂದಿದೆ. ಪೊಲೀಸರು ಆಕೆಯ ಸಂಬಂಧಿಕರನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಸರ್ಜನ್‌ಗೂ ಶೋಕಾಸ್‌ ನೊಟೀಸ್‌ ನೀಡಿದ್ದು ಅವರಿಂದ ಉತ್ತರ ಪಡೆದುಕೊಳ್ಳುತ್ತೇವೆ. ಅದು ಸರಿ ಎನಿಸಿಲ್ಲ ಎಂದರೆ ಅವರ ವಿರುದ್ಧವು ಕ್ರಮವಾಗುತ್ತದೆ ಎಂದರು.

Tumkur: ಜಿಲ್ಲಾಸ್ಪತ್ರೆ ನಿರ್ಲಕ್ಷ್ಯಕ್ಕೆ ತಾಯಿ, ಅವಳಿ ಮಕ್ಕಳು ಬಲಿ..!

ಉನ್ನತ ವ್ಯಾಸಂಗಕ್ಕೆ ಸಹಾಯ: ಘಟನೆ ಸಂಬಂಧ ಹಿರಿಯ ಅಧಿಕಾರಿಗಳ ನೇತೃತ್ವದ ಸಮಿತಿ ತನಿಖೆ ನಡೆಸಲಿದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು. ಮೃತ ತಾಯಿಯ ದೊಡ್ಡ ಮಗಳಿಗೆ ಯಾರೂ ದಿಕ್ಕಿಲ್ಲದಂತಾಗಿದೆ. ಹೀಗಾಗಿ ಬಾಲಕಿಯ ಬಾಲಮಂದಿರಕ್ಕೆ ಕಳುಹಿಸಲಾಗುವುದು. ಆಕೆಗೆ 18 ವರ್ಷಗಳ ಕಾಲ ಉಚಿತ ಶಿಕ್ಷಣ, ಉಚಿತ ಆರೋಗ್ಯ ನೀಡಲಾಗುವುದು. ಆಕೆಯ ಖಾತೆಯಲ್ಲಿ ಹಣ ಹಾಕಿ ಅವಳ ಉನ್ನತ ವ್ಯಾಸಂಗಕ್ಕೆ ಸಹಾಯ ಮಾಡುವ ನಿರ್ಧಾರ ಮಾಡಲಾಗುವುದು. ವೈಯಕ್ತಿಕವಾಗಿಯೂ ನಾನು ಆಕೆಯ ಖಾತೆಗೆ ಹಣ ಹಾಕುತ್ತಿರುವುದಾಗಿ ತಿಳಿಸಿದರು.

click me!