ಕೂಡಲ ಸಂಗಮಕ್ಕೆ ಭೇಟಿ ನೀಡಿ ಮೃತ್ತಿಕೆ ಸಂಗ್ರಹಿಸಿದ ರಾಜ್ಯದ 4 ಸಚಿವರು

By Suvarna News  |  First Published Nov 4, 2022, 10:01 PM IST

ತ್ರಿವೇಣಿ ಸಂಗಮದ ನಾಡು ಕೂಡಲಸಂಗಮದ ಸಂಗಮನಾಥ ದೇಗುಲ  ಮತ್ತು ಐಕ್ಯಮಂಟಪದ ದರ್ಶನ ಪಡೆದ ಸಚಿವರಾದ ಆರ್.ಆಶೋಕ, ಆರಗ ಜ್ಞಾನೇಂದ್ರ,   ಡಾ.ಅಶ್ವತ ನಾರಾಯಣ,   ನಾರಾಯಣಗೌಡ . ನಾಡಪ್ರಭು ಕೆಂಪೇಗೌಡರ ಮೂರ್ತಿ ಪ್ರತಿಷ್ಠಾಪನೆಗೆಗಾಗಿ ಪುಣ್ಯ ಭೂಮಿ ಕೂಡಲ ಸಂಗಮದಲ್ಲಿ ಮೃತ್ತಿಕೆ ಸಂಗ್ರಹ.


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್

ಬಾಗಲಕೋಟೆ (ನ.4): ಸಮಾನತೆ ಹರಿಕಾರ ಜಗಜ್ಯೋತಿ ಬಸವಣ್ಣನವರ ಪುಣ್ಯ ಭೂಮಿ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮಕ್ಕೆ ಸಚಿವರ ದಂಡೇ ಹರಿದು ಬಂದಿತ್ತು. ಪ್ರಮುಖವಾಗಿ  ಕಂದಾಯ ಸಚಿವ ಆರ್.ಆಶೋಕ, ಗೃಹಮಂತ್ರಿ ಆರಗ ಜ್ಞಾನೇಂದ್ರ, ಐಟಿ, ಬಿಟಿ ಸಚಿವ ಡಾ.ಅಶ್ವತ ನಾರಾಯಣ, ಕ್ರೀಡಾ ಸಚಿವ ನಾರಾಯಣಗೌಡ ಅವರು  ಭೇಟಿ ನೀಡಿ ಸಂಗಮನಾಥನ ದರ್ಶನ ಪಡೆದು ಮೃತ್ತಿಕೆಯನ್ನು ಸಂಗ್ರಹಿಸಿದರು. ಇನ್ನು ಸಂಗಮನಾಥನ ಸನ್ನಿಧಿಯಲ್ಲಿ ಮಹಾದೇವ ಸ್ವಾಮಿಜಿ ಅವರು  ಸಚಿವರಿಗೆ ವಚನ ಪಠಣ ಮಾಡಿಸಿದರು. ಬಳಿಕ ಬಸವಣ್ಣನವರ ಐಕ್ಯಮಂಟಪಕ್ಕೆ ಸಚಿವರುಗಳು ಭೇಟಿ ನೀಡಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಸಚಿವರುಗಳಿಗೆ ಬಸವಣ್ಣನವರ ಮೂರ್ತಿ ನೀಡಿ ಗೌರವಿಸಲಾಯಿತು. ಸಂಗಮನಾಥನ ದರ್ಶನ ಪಡೆದುಕೊಂಡು ಬಳಿಕ ಮಾತನಾಡಿದ ಐಟಿ, ಬಿಟಿ ಸಚಿವ ಅಶ್ವತ ನಾರಾಯಣ ಅವರು,  ಜಗಜ್ಯೋತಿ ಬಸವಣ್ಣನವರು ನೀಡಿರುವಂತಹ ಸಂದೇಶ, ಸಾಮಾಜಿಕ ನ್ಯಾಯದ ಮೂಲಕ ಕಲ್ಯಾಣ ಸಮಾಜ ಕಟ್ಟಲು ಪುಣ್ಯ ಭೂಮಿಯ ಮೃತ್ತಿಕೆಯನ್ನು ಸಂಗ್ರಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕೂಡಲ ಸಂಗಮ ಕ್ಷೇತ್ರಕ್ಕೆ ಆಗಮಿಸಿರುವುದಾಗಿ ತಿಳಿಸಿದರಲ್ಲದೆ, ಪುಣ್ಯ ಸ್ಥಳದ ಮೃತ್ತಿಕೆ ಪುಣ್ಯ ಮೃತ್ತಿಕೆಯಾಗಿರುತ್ತದೆ. ಇಂತಹ ಮೃತ್ತಿಕೆಗಳನ್ನು ಸಂಗ್ರಹ ಮಾಡಿಯೇ ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರನ್ನು ಸ್ಥಾಪನೆ ಮಾಡಿದ್ದಾರೆ. ಬಸವಣ್ಣನವರ ಸಂದೇಶ, ಅವರ ಜೀವನದಲ್ಲಿ ಜ್ಯಾತ್ಯಾತೀತ ಸಮಾಜ ನಿರ್ಮಾಣ, ಸಾಮಾಜಿಕ ನ್ಯಾಯ ಕೊಟ್ಟಿರುವದನ್ನು ಅಳವಡಿಸಿಕೊಂಡು ಇವರಿಬ್ಬರ ಸಂಗಮ ಮೃತ್ತಿಕೆ ಮೂಲಕ ತಂದು ನಾಡನ್ನು ಒಂದು ಕಡೆ ತಂದು ಶಕ್ತಿ ಕೇಂದ್ರವನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು. 

Tap to resize

Latest Videos

undefined

ಕನ್ನಡ ನಾಡಿನಲ್ಲಿ ಹುಟ್ಟಿರುವ ಪುಣ್ಯ ಪುರುಷರ ಸ್ಥಳಗಳ ಮೃತ್ತಿಕೆ ಸಂಗ್ರಹ:
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ ನಾಡಪ್ರಭು ಕೆಂಪೇಗೌಡ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಹೆಸರು ಇಡುವ ಮೂಲಕ ವಿದೇಶಿಯರು ಅವರ ಬಗ್ಗೆ ಕೇಳುವಂತಾಗಿದೆ. ನಾಡಿನ ಸಮೃದ್ದಿಗಾಗಿ ಕನ್ನಡ ನಾಡಿನಲ್ಲಿ ಹುಟ್ಟಿರುವ ಪುಣ್ಯ ಪುರುಷರ ಸ್ಥಳಗಳ ಮೃತ್ತಿಕೆಯನ್ನು ಸಂಗ್ರಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಗಜ್ಯೋತಿ ಬಸವಣ್ಣನವರ ಪುಣ್ಯ ಭೂಮಿ ಕೂಡಲಸಂಗಮದಲ್ಲಿ ಮೃತ್ತಿಕೆ ಸಂಗ್ರಹಿಸಲು ನಾಲ್ಕು ಜನ ಸಚಿವರು ಬಂದಿದ್ದೇವೆ. ಈ ಸ್ಥಳದ ಅಭಿವೃದ್ದಿಗಾಗಿ 500 ಕೋಟಿ ರೂ.ಗಳ ನೀಡಲಾಗುತ್ತಿದ್ದು, ಹಂತ ಹಂತವಾಗಿ ಬಸವಣ್ಣನವರ ಪುಣ್ಯ ಸ್ಥಳವನ್ನು ಅಭಿವೃದ್ದಿ ಪಡಿಸಲಾಗುತ್ತಿದೆ ಎಂದರು.

ಕೆಂಪೇಗೌಡ ಥೀಮ್‌ ಪಾರ್ಕ್‌ಗೆ ಮಣ್ಣು ಸಂಗ್ರಹ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು: ಸಚಿವ ಅರಗ ಜ್ಞಾನೇಂದ್ರ:
ಮಾಜಿ ಸಚಿವ ರೇಣುಕಾಚಾರ್ಯ ಅವರ ಸಹೋದರನ ಮಗ  ಚಂದ್ರಶೇಖರ ನಿಗೂಢ ಸಾವಿನ ಕುರಿತು  ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಹೇಳಿದರು. ಈ ಸಂಭಂದ ಚಂದ್ರಶೇಖರ ಕುಟುಂಬಸ್ಥರು ದೂರು ನೀಡಿದ್ದು, ದೂರಿನ ಅಧಾರದ ಮೇಲೆ ತನಿಖೆ ನಡೆಸಲಾಗುವುದು ಎಂದರು. ರೇಣುಕಾಚಾರ್ಯರು ಸರ್ಕಾರದ ಭಾಗವಾಗಿದ್ದು, ಚಂದ್ರಶೇಖರ್ ಅವರ ಸಾವಿನ ಬಗೆಗೆ ಯಾವುದೇ ನಿರ್ಲಕ್ಷ್ಯ ಭಾವನೆ ತಾಳದೆ ಸರ್ಕಾರ ತನಿಖೆ ನಡೆಸಲಿದೆ ಎಂದು ಸ್ಪಷ್ಟ ಪಡಿಸಿದರು, ರೇಣುಕಾಚಾರ್ಯ ಅವರ ಮನೆಗೆ ಭೇಟಿ ನೀಡುವುದಾಗಿ ತಿಳಿಸಿದ ಅವರು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತನಿಖೆ ಬಳಿಕವೇ ಸಾವಿನ ಬಗೆಗೆ ಸ್ಪಷ್ಟನೆ ಸಿಗಲಿದೆ. ಈಗಾಗಲೇ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.

ಕೆಂಪೇಗೌಡರ ಕಂಚಿನ ಪ್ರತಿಮೆಗಾಗಿ ಮುಡುಕುತೊರೆಯಲ್ಲಿ ಮೃತ್ತಿಕೆ ಸಂಗ್ರಹ

ಇದೇ ಸಂದರ್ಭದಲ್ಲಿ ಕೂಡಲ ಸಂಗಮದ ಮಹಾದೇವ ಸ್ವಾಮಿಗಳು, ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಕೂಡಲ ಸಂಗಮ ಅಭಿಬೃದ್ದಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಇನ್ನು ನಾಲ್ವರು ಸಚಿವರನ್ನು ಜಾನಪದ ಕಲಾತಂಡಗಳ ಮೂಲಕ ಸ್ವಾಗತಿಸಲಾಯಿತು.

click me!