'ಗಲಭೆಕೋರರು ಯಾವ ಹೋರಾಟ ಮಾಡಿದ್ದರು ಅಂತ ಜಮೀರ್ ಪರಿಹಾರ ನೀಡಿದ್ದಾನೆ'

By Suvarna NewsFirst Published Aug 15, 2020, 2:25 PM IST
Highlights

ಕಾಂಗ್ರೆಸ್ ಪಕ್ಷಕ್ಕೆ ತಮ್ಮ ದಲಿತ ಶಾಸಕರಿಗೆ ರಕ್ಷಣೆ ಕೊಡಲು ಆಗಿಲ್ಲ| ಎಷ್ಟು ಜನ ಕಾಂಗ್ರೆಸ್ ಶಾಸಕರು ಅಖಂಡ ಶ್ರೀನಿವಾಸಮೂರ್ತಿಗೆ ಸಾಂತ್ವಾನ ಹೇಳುವ ಪ್ರಯತ್ನ ಮಾಡಿದ್ದಾರೆ|ವೋಟ್‌ ಬ್ಯಾಂಕ್‌ಗಾಗಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದ ಸಚಿವ ಸಿ. ಸಿ. ಪಾಟೀಲ| 

ಗದಗ(ಆ.15): ಬೆಂಗಳೂರು ಗಲಭೆ ಪ್ರಕರಣದಲ್ಲಿ ಸಾವನ್ನಪ್ಪಿದ ಗಲಭೆಕೋರರ ಕುಟುಂಬಕ್ಕೆ ಪರಿಹಾರ ನೀಡಿದ ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಸಚಿವ ಸಿ. ಸಿ. ಪಾಟೀಲ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಪಾದರಾಯನಪುರ ಗಲಾಟೆಯಲ್ಲಿ ಜೈಲಿಗೆ ಹೋಗಿ ಬಂದವರಿಗೆ ಸತ್ಕಾರ ಜಮಿರ್‌ ಅಹಮದ್‌ ಖಾನ್‌ ಮಾಡಿದ್ದ, ಯಡಿಯೂರಪ್ಪ ಸಿಎಂ ಆದರೆ ಸಿಎಂ ಮನೆ ವಾಚ್ ಮನ್ ಆಗುತ್ತೇನೆ ಎಂದು ಹೇಳಿದ್ದ, ಎಲ್ಲಿ ಆದ, ನಾಲಿಗೆಗೆ ಇತಿ ಮಿತಿ ಇರಬೇಕು, ಜವಾಬ್ದಾರಿ ಸ್ಥಾನದಲ್ಲಿ ಇರುವವರು ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು ಎಂದು ಶಾಸಕ ಜಮೀರ್‌ ವಿರುದ್ಧ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. 

'ಗಲಭೆಯಲ್ಲಿ ಮೃತಪಟ್ಟವರು ಅಮಾಯಕರು'; ಅವರ ಕುಟುಂಬಕ್ಕೆ 5 ಲಕ್ಷ ಕೊಡ್ತಾರಂತೆ ಜಮೀರ್..!

ಶಾಸಕರ‌ ಮನೆ, ಪೊಲೀಸ್ ಠಾಣೆ ಹಾಗೂ ಸಾರ್ವಜನಿಕರ ಆಸ್ತಿ ಪಾಸ್ತಿ ಹಾನಿ ಮಾಡಿದವರು ಸಾವನ್ನಪ್ಪಿದ್ದಾರೆ. ಯಾವ ಹೋರಾಟ ಮಾಡಿದ್ದಕ್ಕಾಗಿ ಜಮೀರ್ ಪರಿಹಾರ ನೀಡಿದ್ದಾನೆ. ಹನುಮಾನ್ ದೇವಸ್ಥಾನ ರಕ್ಷಣೆ ಮಾಡಿದ್ದೇನೆ ಎಂದು ಹೇಳಿದ್ದಾರೆ. ನಾಟಕ ಮಾಡಲು ಇತಿಮಿತಿ ಇರಬೇಕು. ಪೆಟ್ರೋಲ್ ಬಾಂಬ್, ಲಾಂಗು, ಮಚ್ಚು ಎಲ್ಲಿಂದ ಬಂದವು ಅಂತ ಕಿಡಿ ಕಾರಿದ್ದಾರೆ. 

ಕಾಂಗ್ರೆಸ್ ಪಕ್ಷಕ್ಕೆ ತಮ್ಮ ದಲಿತ ಶಾಸಕರಿಗೆ ರಕ್ಷಣೆ ಕೊಡಲು ಆಗಿಲ್ಲ, ಎಷ್ಟು ಜನ ಕಾಂಗ್ರೆಸ್ ಶಾಸಕರು ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಸಾಂತ್ವಾನ ಹೇಳುವ ಪ್ರಯತ್ನ ಮಾಡಿದ್ದಾರೆ. ವೋಟ್‌ ಬ್ಯಾಂಕ್‌ಗಾಗಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಸಚಿವ ಸಿ. ಸಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.  
 

click me!