ಗುಡ್ ನ್ಯೂಸ್ :ಶೀಘ್ರ ನಗರ ಸಾರಿಗೆಗಳ ಕಾರ್ಯಾಚರಣೆ ಆರಂಭ

Suvarna News   | Asianet News
Published : Aug 15, 2020, 02:07 PM IST
ಗುಡ್ ನ್ಯೂಸ್ :ಶೀಘ್ರ ನಗರ ಸಾರಿಗೆಗಳ ಕಾರ್ಯಾಚರಣೆ ಆರಂಭ

ಸಾರಾಂಶ

ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ನಗರ ಸಾರಿಗೆ ಮತ್ತೆ ಶೀಘ್ರ ಕಾರ್ಯಾಚರಣೆ ಆರಂಭಿಸಲಿದೆ. 

ತುಮಕೂರು (ಆ.15): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೋವಿಡ್‌-19 ಸಾಂಕ್ರಾಮಿಕ ರೋಗದ ಪರಿಣಾಮದಿಂದ ಸರ್ಕಾರದ ನಿರ್ದೇಶನದಂತೆ ದಿನಾಂಕ 31-07-2020 ರವರೆಗೆ ಜಾರಿಯಾಗಿದ್ದ ಲಾಕ್‌ಡೌನ್‌ನ್ನು ತೆರವುಗೊಳಿಸಿದ್ದು, ಶೀಘ್ರ ನಗರ ಸಾರಿಗೆ ಕಾರ್ಯಾರಂಭ ಮಾಡಲಿವೆ.

ಕೊರೋನಾ ಅಟ್ಟಹಾಸ: ಸಾಯುವ ಮುನ್ನ ಪತ್ರಕರ್ತ ಕಣ್ಣೀರು, ವಿಡಿಯೋ ವೈರಲ್..

ತುಮಕೂರು ವಿಭಾಗದಿಂದ ಆಗಸ್ಟ್‌ 17ರಿಂದ ನಗರ ವ್ಯಾಪ್ತಿಯಲ್ಲಿ ತುಮಕೂರು ಬಸ್‌ ನಿಲ್ದಾಣದಿಂದ ಸಿದ್ದಗಂಗಾಮಠ-ಹೆಗ್ಗೆರೆ, ಶೆಟ್ಟಿಹಳ್ಳಿ-ಎಲ್ಲಾಪುರ, ಗೂಳರಿವೆ-ಎಲ್ಲಾಪುರ, ಮೇಳೇಕೋಟೆ-ಬೆಳಗುಂಬ, ಊರುಕೆರೆ-ಮರಳೂರು ದಿಣ್ಣೆ ನಗರ ಸಾರಿಗೆಗಳನ್ನು ಪ್ರತಿ ಅರ್ಧ ಗಂಟೆಗೊಮ್ಮೆ ಬೆಳಗ್ಗೆ 6 ರಿಂದ ರಾತ್ರಿ 9 ಗಂಟೆಯವರೆಗೆ ಕಾರ್ಯಾಚರಣೆ ಆರಂಭಿಸಲಿವೆ.

ಸಾರಿಗೆ ಕಾರ್ಯಾರಂಭದ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್‌ ತಿಳಿಸಿದ್ದಾರೆ.

PREV
click me!

Recommended Stories

ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!