ಅಮೃತ್ ಯೋಜನೆ ಹಾಗೂ ಒಳಚರಂಡಿ ಕಾಮಗಾರಿ ವಿಳಂಬ ಹಿನ್ನೆಲೆ ನಿಮಗೆ ಮಾನ ಮರ್ಯಾದೆ ಇದ್ಯಾ ಎಂದು ಅಧಿಕಾರಿಗಳಿಗೆ ಕ್ಲಾಸ್, ಕಳೆದ ನವಂಬರ್ ನಲ್ಲಿ ಮುಗಿಯಬೇಕಿದ್ದ ಕಾಮಗಾರಿಗಳು, ಆಗಸ್ಟ್ ಬಂದರು ಕಾಮಗಾರಿ ಮುಗಿಸದ ಹಿನ್ನೆಲೆ ಚಾರ್ಜ್
ಚಿಕ್ಕಮಗಳೂರು (ಆ.8): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮಗೆ ಮಾನ, ಮರ್ಯಾದೆ ಇದೆಯಾ, ಕೆಲಸ ಮಾಡಲು ಆಸಕ್ತಿ ಇಲ್ಲದಿದ್ದರೆ ಬಿಟ್ಟು ಹೋಗಿ. ಹೊಟ್ಟೆಗೆ ಅನ್ನ ತಿನ್ನುತ್ತೀರೋ ಇಲ್ಲ ಬೇರೆ ಏನಾದರೂ ತಿನ್ನುತ್ತೀರೋ. ಎಂದು ಅಧಿಕಾರಿಗಳಿಗೆ ಸಭೆಯಲ್ಲಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಳೆಹಾನಿ ಹಾಗೂ ನಗರದ ಅಭಿವೃದ್ಧಿಯ ಕುರಿತು ವಿವಿಧ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ನಗರದಲ್ಲಿ ನಡೆಯುತ್ತಿರುವ ಅಮೃತ್ ಯೋಜನೆ ಮತ್ತು ಒಳಚರಂಡಿ ಕಾಮಗಾರಿಯ ಕುರಿತು ನಗರಸಭೆಯ ಅಧಿಕಾರಿಗಳು, ಇಂಜಿನಿಯರ್ಗಳಿಂದ ಮಾಹಿತಿ ಪಡೆದರು.102 . 58 ಕೋಟಿ ರೂ. ವೆಚ್ಚದ ಅಮೃತ್ ಯೋಜನೆಯಲ್ಲಿ ಇಲ್ಲಿಯವರೆಗೆ ಎಷ್ಟು ಕಾಮಗಾರಿ ನಡೆಸಲಾಗಿದೆ. ಅಷ್ಟು ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಹಾಗೂ ಇಷ್ಟು ದಿನವಾದರೂ ಕಾಮಗಾರಿ ವಿಳಂಭವಾಗಲು ಕಾರಣ ಏನು ಎಂದು ಸಚಿವರು ಕೇಳಿದ ಪ್ರಶ್ನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕ ಉತ್ತರ ನೀಡುವಲ್ಲಿ ವಿಫಲರಾದ್ರು ಇದರಿಂದ ಗರಂಯಾದ ಸಚಿವರು ಸಭೆಯಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಮೃತ್ ಯೋಜನೆಯಿಂದ ನಿತ್ಯ ಜನರಿಗೆ ಸಮಸ್ಯೆ:
ಪ್ರಸ್ತುತ ಅಮೃತ್ ಯೋಜನೆಯ ಕಾಮಗಾರಿಯನ್ನು ಹೈದರಾಬಾದ್ ಮೂಲದ ಜಿ.ಕೆ.ಸಿ ಪ್ರಾಜೆಕ್ಟ್ ಲಿಮಿಟೆಡ್ ಹೈದರಾಬಾದ್ ಕಂಪನಿಯು ನಿರ್ವಹಿಸುತ್ತಿದ್ದು ಕಾಮಗಾರಿ ವಿಳಂಬ ಹಾಗೂ ಜನಸಾಮಾನ್ಯರಿಗೆ ಇದರಿಂದ ದಿನನಿತ್ಯ ಸಮಸ್ಯೆಗಳಾಗುತ್ತಿರುವ ಕುರಿತಾಗಿ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಅಧಿಕಾರಿಗಳು ಮತ್ತು ಗುತ್ತಿಗೆದಾರನ ವಿರುದ್ಧ ದೂರಿನ ಸುರಿಮಳೆಯನ್ನೇ ಸುರಿಸಿದರು.
undefined
ಇದೇ ವೇಳೆ ಗರಂ ಆದ ಸಚಿವರು ನಗರಸಭೆ ಆಯುಕ್ತರು, ನಗರಸಭೆಯ ಇಂಜಿನಿಯರ್ಗಳಿಗೆ ನೀಡಿದ್ದ ಗಡುವು ಹಾಗೂ ಎಷ್ಟರ ಮಟ್ಟಿಗೆ ಕೆಲ ಪೂರ್ಣಗೊಂಡಿದೆ. ಒಂದು ಯೋಜನೆ ಪೂರ್ಣಗೊಳ್ಳ ಬೇಕಾದರರೆ 10 ವರ್ಷಗಳ ಸಮಯ ಬೇಕೆ, ನಿಮಗೆ ಕೆಲಸ ಮಾಡಲು ಆಸಕ್ತಿ ಇದ್ದರೆ ಮಾಡಿ, ಇಲ್ಲದಿದ್ದರೆ ಬಿಟ್ಟು ಹೋಗಿ. ನಿಮಗೇನಾದರೂ ಮಾನ, ಮರ್ಯಾದೆ ಇದೆಯಾ. ಸರ್ಕಾರ ಅಂದರೆ ಏನೆಂದು ತಿಳಿದಿದ್ದೀರಿ. ಸರ್ಕಾರ ಅಂದರೆ ಜವಾಬ್ದಾರಿ. ಆ ಜವಾಬ್ದಾರಿ ನಿಭಾಯಿಸಲು ಕಷ್ಟವಾದರೆ ಬಿಟ್ಟು ನಡೆಯಿರಿ ಎಂದು ತರಾಟೆಗೆ ತೆಗೆದುಕೊಂಡರು.
ಚಿಕ್ಕಮಗಳೂರು: ಅಕ್ರಮ ಗೋಹತ್ಯೆ ತಡೆಗೆ 'ಯೋಗಿ' ಮಾಡೆಲ್: ಮೂಲಭೂತ ಸೌಕರ್ಯ ಕಟ್
ಮುಂಗಾರು ಬಿತ್ತನೆ: ಶೇ.53ರಷ್ಟುಸಾಧನೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಅಂದರೆ, ಎರಡನೇ ತಿಂಗಳಲ್ಲಿ ಸರಾಸರಿ ಶೇ.128 ರಷ್ಟುಬಂದಿದೆ. ಮುಂಗಾರಿನ ಬಿತ್ತನೆಯಲ್ಲೂ ಅದೇ ರೀತಿಯಲ್ಲಿ ಪ್ರಗತಿ ಕಂಡುಬಂದಿದೆ. 1,12,739 ಹೆಕ್ಟೇರ್ ಗುರಿ, ಈವರೆಗೆ 60,312 ಹೆಕ್ಟೇರ್ ಬಿತ್ತನೆಯಾಗಿದೆ. ಅಂದರೆ, ಶೇ.53ರಷ್ಟುಪ್ರಗತಿ ಸಾಧಿಸಲಾಗಿದೆ. ಚಿಕ್ಕಮಗಳೂರು, ಕಡೂರು ಹಾಗೂ ತರೀಕೆರೆ ತಾಲೂಕಿನಲ್ಲಿ ಏಕದಳ, ದ್ವಿದಳ ಹಾಗೂ ಎಣ್ಣೆ ಕಾಳು ಬಿತ್ತನೆ ಕಾರ್ಯ ಗುರಿಯನ್ನು ಸಮೀಪಿಸಿದೆ.
ಬೆಳೆಯ ಸ್ಥಿತಿಗತಿ: ರಾಗಿ ಬಿತ್ತನೆಗೆ ಇನ್ನು ಕಾಲಾವಕಾಶ ಇದೆ. ಆದರೂ ಕಡೂರು ತಾಲೂಕಿನಲ್ಲಿ ರಾಗಿ ಬಿತ್ತನೆ ನಿಗದಿತ ಗುರಿಯನ್ನು ಮುಟ್ಟಿದೆ. ಆದರೆ, ತರೀಕೆರೆ ಮತ್ತು ಚಿಕ್ಕಮಗಳೂರು ತಾಲೂಕುಗಳಲ್ಲಿ ಬಿತ್ತನೆ ಆಗಬೇಕಾಗಿದೆ. ಮುಸುಕಿನ ಜೋಳ 23100 ಹೆಕ್ಟೇರ್ ಬಿತ್ತನೆಯ ಗುರಿ ಹೊಂದಿದ್ದು, ಈವರೆಗೆ 11158 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕಡೂರು ಮತ್ತು ಚಿಕ್ಕಮಗಳೂರು ತಾಲೂಕಿನಲ್ಲಿ ಸೂರ್ಯಕಾಂತಿ ಬಿತ್ತನೆ ನಿರೀಕ್ಷೆಯಷ್ಟಾಗಿದೆ. ಮಲೆನಾಡಿನ ತಾಲೂಕುಗಳಲ್ಲಿ ಭತ್ತದ ನಾಟಿ ಕಾರ್ಯಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
Chikkamagaluru Rains; ಸರ್ಕಾರದ ನಡೆಯಿಂದ ಸಂತ್ರಸ್ಥರು ಬದುಕು ಬೀದಿಪಾಲು
ರಸಗೊಬ್ಬರ: ಮುಂಗಾರಿನಲ್ಲಿ ಜಿಲ್ಲೆಗೆ 1,24,874 ಟನ್ ರಸಗೊಬ್ಬರ ಬೇಕಾಗಿದೆ. ಈವರೆಗೆ 79,160 ಟನ್ ಬೇಡಿಕೆ ಇದ್ದು, 68,620 ಟನ್ ಪೂರೈಕೆಯಾಗಿದೆ. ಇದರಲ್ಲಿ 49,892 ಟನ್ ವಿತರಣೆಯಾಗಿದೆ. ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಕೆಯಾಗುತ್ತಿದೆ.
ಭಾರಿ ಮಳೆ: ಜಿಲ್ಲೆಯಲ್ಲಿ ಈ ಬಾರಿಯೂ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದೆ. ಸದ್ಯ ಬರುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ. ಕಳೆದ ಜೂನ್ ತಿಂಗಳಲ್ಲಿ ಶೇ.54 ರಷ್ಟುಹೆಚ್ಚುವರಿ ಮಳೆಯಾಗಿದೆ. ಜುಲೈನಲ್ಲಿ ಮಳೆ ಆರ್ಭಟ ಇನ್ನಷ್ಟುಜೋರಾಗಿದೆ. ಅಂದರೆ, ಶೇ.102ರಷ್ಟುಮಳೆ ಬಂದಿದೆ. ಚಿಕ್ಕಮಗಳೂರು ಹಾಗೂ ಕಡೂರು ತಾಲೂಕುಗಳಲ್ಲಿ ಹೆಚ್ಚುವರಿ ಮಳೆಯಾಗಿದೆ.