ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ, ಇಡೋದು ಇಲ್ಲ: ಶಾಸಕ ಮುನೇನಕೊಪ್ಪ

By Kannadaprabha NewsFirst Published Nov 14, 2020, 1:46 PM IST
Highlights

ನನಗೆ ಮಂತ್ರಿ ಸ್ಥಾನ ಕೊಡಿ ಎಂದು ಬೇಡಿಕೆಯನ್ನೂ ಇಟ್ಟಿಲ್ಲ; ಇಡುವುದೂ ಇಲ್ಲ. ಸ್ಥಾನಮಾನಕ್ಕೆ ಲಾಬಿ ನಡೆಸುವ ಜಾಯಮಾನ ನನ್ನದ್ದಲ್ಲ. ಆದರೆ ಪಕ್ಷದ ವರಿಷ್ಠರು ತಮಗೆ ಏನೇ ಸ್ಥಾನ ಮಾನ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದ ಮುನೇನಕೊಪ್ಪ

ಹುಬ್ಬಳ್ಳಿ(ನ.14): ಬೆಂಗಳೂರಲ್ಲಿ ನಡೆದ ಬಿಜೆಪಿ ಶಾಸಕರ ಸಭೆಯಲ್ಲಿ ಪಾಲ್ಗೊಂಡಿದ್ದು ನಿಜ. ಆದರೆ ಮಂತ್ರಿ ಸ್ಥಾನದ ಬೇಡಿಕೆ ಇಟ್ಟಿಲ್ಲ; ಇಡುವುದೂ ಇಲ್ಲ. ಆದರೆ ಪಕ್ಷ ತಮಗೆ ಯಾವ ಸ್ಥಾನ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೋನಾನಿಂದ ಚೇತರಿಸಿಕೊಂಡ ಬಳಿಕ ಬೆಂಗಳೂರಿಗೆ ಬಹಳ ದಿನಗಳ ನಂತರ ತೆರಳಿದ್ದೆ. ಈ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಸಚಿವ ರಮೇಶ ಜಾರಕಿಹೊಳಿ ಅವರ ನಿವಾಸಗಳಲ್ಲಿ ನಡೆದ ಸಭೆಗಳಲ್ಲಿ ಭಾಗವಹಿಸಿದ್ದು ನಿಜ. ಎಲ್ಲ ಸಭೆಗಳಲ್ಲೂ ತಮ್ಮ ಸ್ನೇಹಿತರೊಂದಿಗೆ ಭಾಗಿಯಾಗಿದ್ದೆ ಎಂದರು.

ಸಮಯ ಬಂದಾಗ ಆಗಲಿದೆ ಸಂಪುಟ ವಿಸ್ತರಣೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಬಹಳ ದಿನಗಳ ಬಳಿಕ ಬೆಂಗಳೂರಿಗೆ ತೆರಳಿದ ಕಾರಣ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳು, ಸಚಿವರಿಗೆ ಮನವಿ ಸಲ್ಲಿಸಿದ್ದೇನೆ. ಸಬೆಗಳಲ್ಲಿ ಸಮಾಜದ ಬೆಳವಣಿಗೆ, ಇತ್ತೀಚಿನ ರಾಜಕೀಯದ ಬಗ್ಗೆ ಮಾತ್ರ ಚರ್ಚೆ ನಡೆಸಲಾಗಿದೆಯೇ ಹೊರತು ಯಾವುದೇ ಬೇಡಿಕೆಯನ್ನಿಟ್ಟಿಲ್ಲ.

ಇನ್ನೂ ನಾನಾಗಲೇ ನನಗೆ ಮಂತ್ರಿ ಸ್ಥಾನ ಕೊಡಿ ಎಂದು ಬೇಡಿಕೆಯನ್ನೂ ಇಟ್ಟಿಲ್ಲ; ಇಡುವುದೂ ಇಲ್ಲ. ಸ್ಥಾನಮಾನಕ್ಕೆ ಲಾಬಿ ನಡೆಸುವ ಜಾಯಮಾನ ನನ್ನದ್ದಲ್ಲ. ಆದರೆ ಪಕ್ಷದ ವರಿಷ್ಠರು ತಮಗೆ ಏನೇ ಸ್ಥಾನ ಮಾನ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ನುಡಿದರು.
 

click me!