ಕಾಂಗ್ರೆಸ್ ಸೇರ್ತಾರಾ 17 ಬಿಜೆಪಿ ಶಾಸಕರು : ನೂತನ ಸಚಿವ ಬಿ.ಸಿ.ಪಾಟೀಲ್ ರಿಯಾಕ್ಷನ್

By Suvarna News  |  First Published Feb 28, 2020, 2:28 PM IST

ಬಿಜೆಪಿ 17 ಶಾಸಕರು ಕಾಂಗ್ರೆಸ್ ಸೇರ್ತಾರೆ ಎನ್ನುವ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವ ಹೇಳಿಕೆ ಸಂಬಂಧ ಸಚಿವ ಬಿಸಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ..


ಕೊಪ್ಪಳ [ಫೆ.28]: ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವ ಅವರನ್ನು ಕಾಂಗ್ರೆಸಿನವರೇ ಮರೆತಿದ್ದಾರೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದರು. 

ಕೊಪ್ಪಳದ ಗಂಗಾವತಿಯಲ್ಲಿ ಮಾತನಾಡಿದ ಕೃಷಿ ಸಚಿವ ಬಿಸಿ ಪಾಟೀಲ್ , ಬಿಜೆಪಿಯ 17 ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಿದ್ದಾರೆ. ಅವರು ವಿಚಾರ ಮಾಡಿ ಹೇಳಿಕೆ ನೀಡಬೇಕು ಎಂದು ಬಿ ಸಿ ಪಾಟೀಲ್ ಹೇಳಿದರು. 

Tap to resize

Latest Videos

ಪಕ್ಷಾಂತರ ಹೇಳಿಕೆಗಳನ್ನು ಅವರು ಯಾಕೆ ನೀಡಿದ್ದಾರೆ ಎಂದು ಅವರನ್ನೇ ಕೇಳಬೇಕು. ಅವರು ಎಲ್ಲಿದ್ದಾರೆ.. ಅವರ ಅಡ್ರೆಸ್ ಏನು ಎನ್ನುವುದೇ ಯಾರಿಗೂ ಗೊತ್ತಿಲ್ಲ . ಕಾಂಗ್ರೆಸ್, ಜೆಡಿಎಸ್ ಶಾಸಕರನ್ನೇ ಅವರ ಪಕ್ಷದವರು ಹಿಡಿದಿಟ್ಟುಕೊಂಡರೆ ಸಾಕಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಬಿಜೆಪಿಗೆ ಶಾಸಕರ ವಲಸೆ ಆರಂಭವಾಗಿದೆ. ಈ ಸಮಯದಲ್ಲಿ ಪಕ್ಷಕ್ಕೆ ಇರುವ ಗೌರವವನ್ನು ಮೊದಲು ಉಳಿಸಿಕೊಳ್ಳಲಿ ಎಂದು ಸಚಿವ ಬಿ ಸಿ ಪಾಟೀಲ್ ವ್ಯಂಗ್ಯವಾಡಿದರು. 

ದೇವೇಗೌಡರ ಕುಟುಂಬಕ್ಕೆ ಹೇಗೆ ಬಂತು ಸಾವಿರಾರು ಕೋಟಿ ಆಸ್ತಿ..?

ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಕರೆದರೆ ಬಿಜೆಪಿ ಶಾಸಕರು ಹೋಗುತ್ತಾರೆ ಎನ್ನುವ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಬಿಸಿ ಪಾಟೀಲ್ ಈಗ ಸಿದ್ದರಾಮಯ್ಯ ಕಥ ಏನಾಗಿದೆ..? ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದ್ದೇವೆ ಎಂದು ಬಿ.ಸಿ.ಪಾಟೀಲ್ ಹೇಳಿದರು. 

ಕೋಟಿ ವಾಚು ಕಟ್ಟುವ ಸಿದ್ದುಗೆ ಕಟೀಲ್ ಕುಟುಕಿದ್ದು ಹೀಗೆ..ಮಜವಾಗಿದೆ!...

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಆನಂದ್ ಸಿಂಗ್ ರಾಜೀನಾಮೆಗೆ ಕಾಂಗ್ರೆಸ್ ನಾಯಕರು ಒತ್ತಾಯ ಮಾಡುತ್ತಿದ್ದಾರೆ ಎನ್ನುವ ವಿಚಾರ ಸದ್ದು ಮಾಡುತ್ತಿದ್ದು, ಕಾಂಗ್ರೆಸಿನವರು ಊಸರವಳ್ಳಿ ಇದ್ದಂತೆ. ಸಮಯ ಹೇಗೆ ಬರುತ್ತದೆಯೋ ಹಾಗೆ ಬಣ್ಣ ಬದಲಾಯಿಸುತ್ತಾರೆ. ಆನಂದ್ ಸಿಂಗ್ ಕಾಂಗ್ರೆಸಿನಲ್ಲಿ ಇದ್ದಾಗ ಯಾವುದೇ ಆಪಾದನೆ ಇರಲಿಲ್ಲ. ಆದರೆ ಅವರು ಪಕ್ಷ ಬಿಡುತ್ತಿದ್ದಂತೆ ಅವರ ಮೇಲೆ ಆಪಾದನೆಗಳು ಆರಂಭವಾದವು ಎಂದು ವಾಕ್ ಪ್ರಹಾರ ನಡೆಸಿದರು.

click me!