'ದೇವೇಗೌಡರು ವರ್ಕ್ ಇನ್ಸ್ ಪೆಕ್ಟರ್ ಆಗಿದ್ರು : ನಿಮಗೆ ಹೇಗೆ ಬಂತು ಸಾವಿರಾರು ಕೋಟಿ ಆಸ್ತಿ..?'

By Suvarna News  |  First Published Feb 28, 2020, 1:26 PM IST

ನಿಮ್ಮ ತಂದೆ ವರ್ಕ್ ಇನ್ಸ್ ಪೆಕ್ಟರ್ ಆಗಿದ್ರು..? ನಿಮ್ಮ ಹಿನ್ನೆಲೆ ಏನು..? ನಿಮಗೆ ಹೇಗೆ ಬಂತು ಸಾವಿರಾರು ಕೋಟಿ ಆಸ್ತಿ ಹೀಗೆಂದು ಬಸನಗೌಡ ಪಾಟೀಲ್ ಯತ್ನಾಳ್,  ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.


ಚಿತ್ರದುರ್ಗ [ಫೆ.28]:  ಮಾಜಿ ಸಿಎಂ ಕುಮಾರಸ್ವಾಮಿ ಏನು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹುಟ್ಟಿದ್ರಾ ? ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದಿದ್ದಾರೆ. 

ಚಿತ್ರದುರ್ಗದಲ್ಲಿ ಮಾತನಾಡಿದ ಯತ್ನಾಳ್, ದೊರೆಸ್ವಾಮಿ ಹೋರಾಟದ ಸಮಯದಲ್ಲಿ ಯತ್ನಾಳ್ ಹುಟ್ಟಿದ್ದರೋ ಇಲ್ಲವೋ ಎನ್ನುವ ಎಚ್ ಡಿಕೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 

Tap to resize

Latest Videos

ಯಾರಿಗೆ ಊಟಕ್ಕೆ ಇಲ್ಲವೋ ಅಂತವರು ಸೇನೆಗೆ ಸೇರುತ್ತಾರೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದರು. ಈ ರೀತಿ ಎಲ್ಲಾ ಮಾತಾಡುವ ಅವರಿಗೆ ನಾಚಿಕೆ ಆಗಬೇಕು ಎಂದರು. 

ದೊರೆಸ್ವಾಮಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ: ಸಚಿವ ಸೋಮಣ್ಣ...

ಅಲ್ಲದೇ ನಿಮ್ಮ ತಂದೆ ವರ್ಕ್ ಇನ್ಸ್ಪೆಕ್ಟರ್ ಆಗಿದ್ದರು. ಸಾವಿರಾರು ಕೋಟಿ ಆಸ್ತಿ ನಿಮಗೆ ಹೇಗೆ ಬಂತು..? ನೀವು ಯಾಕೆ ರಾಜಕಾರಣಕ್ಕೆ ಸೇರಿದ್ರಿ? ನಿಮ್ಮದೇನಿತ್ತು ಮೂಲ ಎಂದು ಪ್ರಶ್ನೆ ಮಾಡಿದರು. 

ನನ್ನ ಬಗ್ಗೆ ಮಾತನಾಡುವ ನೈತಿಕತೆ ಎಚ್ ಡಿ ಕುಮಾರಸ್ವಾಮಿ ಅವರಿಗೆ ಇಲ್ಲ. ಅವರ ತಂದೆ ಏನು ಸ್ವಾತಂತ್ರ್ಯ ಸೈನಿಕರೇ..? ಎಲ್ಲಾ ರಾಜಕಾರಣಿಗಳು ಅಡ್ಜಸ್ಟ್ ಮೆಂಟ್ ಇರಬಹುದು. ಯತ್ನಾಳ್ ಜೊತೆ ಇದೆಲ್ಲಾ ಸಾಧ್ಯ ಇಲ್ಲ ಎಂದರು. 
 
ಸಚಿವ ನಾರಾಯಣಗೌಡ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿರುವ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ ಯತ್ನಾಳ್ ಅವರೇನು ಪಾಕಿಸ್ತಾನಕ್ಕೆ ಜೈ ಅಂದಿದ್ದಾರಾ? 

ನಮ್ಮ‌ ದೇಶದ ಒಂದು ಭಾಗಕ್ಕೆ‌ ಜೈ ಅಂದಿದ್ದಾರೆ.  ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದರು. ಹುಬ್ಬಳ್ಳಿ, ಬೆಂಗಳೂರಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕುವಾಗ ಕನ್ನಡಪರ ಹೋರಾಟಗಾರರು ಎಲ್ಲಿ ಹೋಗಿದ್ದರು ಎಂದು ಟಾಂಗ್ ಕೊಟ್ಟ ಯತ್ನಾಳ್.

click me!