ಮಂಗಳೂರು ಪ್ರಕರಣ, ತನಿಖೆ ಮಾಡಿ ಪರಿಹಾರ ಕೊಡ್ಲೇಬೇಕು: ಶ್ರೀರಾಮುಲು

By Suvarna News  |  First Published Dec 25, 2019, 3:06 PM IST

ಮಂಗಳೂರು ಗಲಭೆ ಪ್ರಕರಣ ಗಲಭೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ಕೊಡಲೇಬೇಕು ಎಂದ ಶ್ರೀರಾಮುಲು| ತನಿಖೆಯಿಂದ ಆದೇಶ ಏನು ಬರುತ್ತೋ ಅದನ್ನು ನೋಡಿಕೊಂಡು 100ಕ್ಕೆ 100 ರಷ್ಟು ಯಾರು ಸತ್ತಿದ್ದಾರೋ ಅಂತವರ ಕುಟುಂಬಸ್ಥರಿಗೆ ಪರಿಹಾರ ಕೊಡಲೇಬೇಕು| ಶಾಂತಿಯುತ ಹೋರಾಟದಲ್ಲಿ ಕಾಂಗ್ರೆಸ್ ಜಗಳ ಹಚ್ಚುವ ಕೆಲಸ ಮಾಡಿದೆ| ಕಾಂಗ್ರೆಸ್ ಅಧಿಕಾರದ ವೇಳೆಯಲ್ಲಿಯೂ ಜಗಳ ಹಚ್ಚಿದೆ|


ರಾಯಚೂರು[ಡಿ.25]: ಮಂಗಳೂರು ಗಲಭೆ ಪ್ರಕರಣ ಗಲಭೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ಕೊಡಲೇಬೇಕು. ತೂರಾಟದಲ್ಲಿ ಜೀವ ಕಳೆದುಕೊಂಡವರ ಬಗ್ಗೆ ತನಿಖೆ ನಡೆದಿದೆ. 
ತನಿಖೆಯಿಂದ ಆದೇಶ ಏನು ಬರುತ್ತೋ ಅದನ್ನು ನೋಡಿಕೊಂಡು 100ಕ್ಕೆ 100 ರಷ್ಟು ಯಾರು ಸತ್ತಿದ್ದಾರೋ ಅಂತವರ ಕುಟುಂಬಸ್ಥರಿಗೆ ಪರಿಹಾರ ಕೊಡಲೇ ಬೇಕು ಅದರಲ್ಲಿ ಬೇರೆ ಮಾತೇ ಇಲ್ಲ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. 

ಬುಧವಾರ ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಶಾಂತಿಯುತ ಹೋರಾಟದಲ್ಲಿ ಕಾಂಗ್ರೆಸ್ ಜಗಳ ಹಚ್ಚುವ ಕೆಲಸ ಮಾಡಿದೆ. ಕಾಂಗ್ರೆಸ್ ಅಧಿಕಾರದ ವೇಳೆಯಲ್ಲಿಯೂ ಜಗಳ ಹಚ್ಚಿದೆ. ಈಗ ಅಧಿಕಾರವಿಲ್ಲ ಈಗಲೂ ಅದೇ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

Latest Videos

undefined

ಮಂಗಳೂರು ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಪರಿಹಾರ ಇಲ್ಲ! ಆದೇಶ ಹಿಂಪಡೆದ ಸಿಎಂ

ಉಪಮುಖ್ಯಮಂತ್ರಿ ವಿಚಾರದ ಬಗ್ಗೆ ಮಾತನಾಡಿದ ಸಚಿವ ಬಿ. ಶ್ರೀರಾಮುಲು ಅವರು, ಮಂತ್ರಾಲಯದಲ್ಲಿ ಹರಕೆ ಇತ್ತು ಹೀಗಾಗಿ ಮಂತ್ರಾಲಯಕ್ಕೆ ಹೋಗಿ ಬಂದಿದ್ದೇನೆ. ಶ್ರೀರಾಮುಲು ಡಿಸಿಎಂ ಆಗಬೇಕು ಎಂಬುವುದು ಇಡೀ ರಾಜ್ಯದ ಜನರ ಅಭಿಪ್ರಾಯವಾಗಿದೆ. ಜನರು ಡಿಸಿಎಂ ಆಗಬೇಕು ಎಂದು ಕೂಗುವಾಗ ನಾನು ಜನರಿಗೆ ಮುಜುಗರ  ಮಾಡುವುದಿಲ್ಲ. ಜನರ ಬೇಡಿಕೆಯೂ‌ ನಾನು ತಿರಸ್ಕಾರ ಮಾಡುವುದಿಲ್ಲ. ನಾನು ರಾಷ್ಟ್ರೀಯ ಪಕ್ಷದಲ್ಲಿದ್ದೇನೆ. ಹೀಗಾಗಿ ಎಲ್ಲವು ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.  

ಡಿಸೆಂಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

"

click me!