ಗೌಡರು ಕಾಂಗ್ರೆಸ್ ಸೇರಲು ಹೊರಟಿದ್ರಂತೆ : HDD ಹೊಗಳಿದ H ವಿಶ್ವನಾಥ್

By Suvarna NewsFirst Published Dec 25, 2019, 2:46 PM IST
Highlights

ಜೆಡಿಎಸ್ ನಿಂದ ಹಾರಿಹೋಗಿ ಬಿಜೆಪಿ ಸೇರಿದ್ದ ಹಳ್ಳಿ ಹಕ್ಕಿ ಎಚ್. ವಿಶ್ವನಾಥ್ ಇದೀಗ ದೇವೇಗೌಡರನ್ನು ಹೊಗಳಿದ್ದಾರೆ. ಅಲ್ಲದೇ ಕಾಂಗ್ರೆಸ್ ಸೇರಲು ಬಯಸಿದ್ದ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. 

ಮೈಸೂರು [ಡಿ.25]: ದೇವೇಗೌಡರು ಮೂಲತಃ ಕಾಂಗ್ರೆಸಿನವರು. ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗದ ಕಾರಣ ಹೊಳೆನರಸೀಪುರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು ಎಂದು ಎಚ್. ವಿಶ್ವನಾಥ್ ಹೇಳಿದರು. 

ಮೈಸೂರಿನಲ್ಲಿ ಮಾತನಾಡಿದ ಎಸ್ ಎಂ ಕೃಷ್ಣ ರಾಜಕಾರಣಿಗಳು ತಮ್ಮ ಜೀವಿತಾವಧಿಯ ರಾಜಕೀಯ ವಿದ್ಯಮಾನಗಳನ್ನು ದಾಖಲಿಸಬೇಕು. ಈಗ ಎಸ್.ಎಂ.ಕೃಷ್ಣ ಅವರು ತಮ್ಮ ರಾಜಕೀಯದ ಬಗ್ಗೆ ಸ್ಮೃತಿ ವಾಹಿನಿ ಪುಸ್ತಕ ಬರೆದಿದ್ದು, ಬಿಡುಗಡೆ ಸಜ್ಜಾಗಿದೆ ಎಂದರು. 

ಎಸ್ ಎಂ ಕೃಷ್ಣ ಅವರ ಪುಸ್ತಕದಲ್ಲಿ ದೇವೇಗೌಡರು ಹಾಗೂ ಬೊಮ್ಮಾಯಿ ಕಾಂಗ್ರೆಸ್ ಸೇರಲಿ ಚಿಂತನೆ ನಡೆಸಿದ್ದರು ಎಂದು ಉಲ್ಲೇಖಿಸಲಾಗಿದೆ. ಆದರೆ ಆಗಿನ ಸನ್ನಿವೇಶ ಏನಿತ್ತು. ಯಾಕಾಗಿ ಪಕ್ಷಾಂತರ ಮಾಡಿದರು ಗೊತ್ತಿಲ್ಲ. ಅದೆಲ್ಲವೂ ಪಕ್ಷ ಹೊರಬಂದ ನಂತರವಷ್ಟೇ ಬಯಲಾಗಬೇಕಿದೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೇವೇಗೌಡರು ಹರದನಹಳ್ಳಿಯ ಮಣ್ಣಿನಿಂದ ಚಿಮ್ಮಿದ ಉಲ್ಕೆ. ಆ ಉಲ್ಕೆ ದೆಹಲಿವರೆಗೂ ಚಿಮ್ಮಿ ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿತ್ತು.ದೇವೇಗೌಡರು ಈಗಾಗಲೇ ಪುಸ್ತಕ ಬರೆದಿದ್ದಾರೆ. ಇನ್ನಷ್ಟು ಪುಸ್ತಕ ಬರೆದರೆ ಒಳ್ಳೆಯದು ಎಂದು ಬಿಜೆಪಿ ಮುಖಂಡ ಎಚ್. ವಿಶ್ವನಾಥ್ ಹೇಳಿದರು.

ಜೆಡಿಎಸ್ ನಲ್ಲಿದ್ದ ವಿಶ್ವನಾಥ್ ರಾಜೀನಾಮೆ ನೀಡಿ ಅನರ್ಹರಾಗಿದ್ದರು. ಬಳಿಕ ಬಿಜೆಪಿ ಸೇರಿ ಹುಣಸೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಅವರ ಎದುರು ಪರಾಭವಗೊಂಡರು.

click me!