* ಅಕ್ಕಿ ನೀಡುವುದು ಕೇಂದ್ರವೇ ಹೊರತು ರಾಜ್ಯ ಸರ್ಕಾರವಲ್ಲ
* ಸಿದ್ದರಾಮಯ್ಯದು ತಾಲಿಬಾನ್ ಮನಸ್ಥಿತಿ
* ರಾಜಕೀಯ ದಿವಾಳಿ ಅನುಭವಿಸುತ್ತಿರುವ ಕಾಂಗ್ರೆಸ್
ಬಳ್ಳಾರಿ(ಸೆ.29): ನನ್ನ ಅವಧಿಯಲ್ಲಿ ಬಡವರಿಗೆ ಅಕ್ಕಿ ನೀಡಿದ್ದೇನೆ ಎಂದು ಪದೇ ಪದೇ ಹೇಳುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah), ತನ್ನ ಮನೆಯಿಂದ ಬಡವರಿಗೆ ತಂದು ಕೊಟ್ರಾ? ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು(B Sriramulu) ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಡಿತರ ಅಕ್ಕಿ ನೀಡುತ್ತಿರುವುದು ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರವಲ್ಲ. ಆದರೆ, ಸಿದ್ದರಾಮಯ್ಯ ಬಡವರಿಗೆ ಅಕ್ಕಿ ಕೊಟ್ಟೆಎಂದು ದೊಡ್ಡದಾಗಿ ಹೇಳಿಕೊಳ್ಳುತ್ತಾರೆ. ಅಕ್ಕಿ ಎಲ್ಲಿಂದ ತಂದು ಕೊಟ್ರು? ಅವರ ಮನೆಯಿಂದನಾ ಎಂದು ಕೇಳಿದರು.
undefined
ಸಿದ್ದರಾಮಯ್ಯ ಮುಖ್ಯಮಂತ್ರಿ ಖುರ್ಚಿಯ ಹಗಲು ಕನಸು ಕಾಣುತ್ತಿದ್ದು ಏನೇನೋ ಮಾತನಾಡುತ್ತಾರೆ. ಈ ಹಿಂದೆ ಅವರನ್ನು ಸಮಾಜವಾದಿ ಎನ್ನುತ್ತಿದ್ದರು. ಇದೀಗ ಖುರ್ಚಿಗಾಗಿ ಎನ್ನುವಂತಾಗಿದ್ದಾರೆ. ಅಧಿಕಾರದ ದುರಾಸೆ ಹೊತ್ತು ಕಲಾಪವನ್ನು ವ್ಯರ್ಥ ಮಾಡಿದರು. ಬಿಜೆಪಿ ಟೀಕಿಸುವ ಅವರು, ಡಿ.ಕೆ. ಶಿವಕುಮಾರ ಜತೆ ಹೇಗಿದ್ದಾರೆ? ಎಂಬುದನ್ನು ಹೇಳಲಿ. ಒಬ್ಬರ ಮುಖ ಮತ್ತೊಬ್ಬರು ನೋಡದವರು ಬಿಜೆಪಿ ಟೀಕಿಸಲು ಯಾವ ನೈತಿಕತೆ ಹೊಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ ಅವರು ಸಹ ಸಿದ್ದರಾಮಯ್ಯರ ಕಣ್ಣಿಗೆ ಕಾಣುವುದೇ ಇಲ್ಲ ಎಂದು ಶ್ರೀರಾಮುಲು ಟೀಕಿಸಿದರು.
ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ, ರಾಕ್ಷಸೀ ಪ್ರವೃತ್ತಿ ಇರುವ ತಾಲಿಬಾನಿಗಳು: ಸಿದ್ದರಾಮಯ್ಯ
ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಕಾಂಗ್ರೆಸ್ ತಿರಸ್ಕೃತಗೊಂಡಿದೆ. ಬಾದಾಮಿ ಜನರು ಸಿದ್ದರಾಮಯ್ಯಗೆ ಪುನರ್ಜನ್ಮ ನೀಡಿದ್ದಾರೆ. ಅವರನ್ನೇ ಮರೆತಿರುವ ಇವರಿಗೆ ಅದೇ ಜನ ಮೂಲಗುಂಪು ಮಾಡಲಿದ್ದಾರೆ ಎಂದು ಹರಿಹಾಯ್ದರು.
ಸಿದ್ದರಾಮಯ್ಯದು ತಾಲಿಬಾನ್ ಮನಸ್ಥಿತಿ
ತಾಲಿಬಾನಿಗಳ(Taliban)ಕೃತ್ಯವನ್ನು ಆರ್‌ಎಸ್‌ಎಸ್‌ಗೆ(RSS) ಹೋಲಿಸುವ ಸಿದ್ದರಾಮಯ್ಯರ ಮನಸ್ಥಿತಿ ತಾಲಿಬಾನ್ ಮನಸ್ಥಿತಿಯೇ ಆಗಿದೆ ಎಂದು ಸಚಿವ ಬಿ. ಶ್ರೀರಾಮುಲು ವಾಗ್ದಾಳಿ ನಡೆಸಿದರು. ರಾಜಕೀಯ ದಿವಾಳಿ ಅನುಭವಿಸುತ್ತಿರುವ ಕಾಂಗ್ರೆಸ್(Congress) ತಾಲಿಬಾನ್ ಸಂಸ್ಕೃತಿ ಹೊಂದಿದೆ. ಹೀಗಾಗಿ ಸಿದ್ದರಾಮಯ್ಯ ಅದೇ ಶೈಲಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.