ಪೊಲೀಸರ ವಿರುದ್ಧವೇ ದೂರು ನೀಡುವ ವ್ಯವಸ್ಥೆ ಜಾರಿ

By Kannadaprabha News  |  First Published Sep 29, 2021, 3:44 PM IST
  • ಪೊಲೀಸರ ವಿರುದ್ಧವೂ ಹಲವಾರು ದೂರುಗಳು ಕೇಳಿ ಬರುತ್ತಿದೆ
  • ಪೊಲೀಸರ ವಿರುದ್ಧ ದೂರು ನೀಡುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ 

 ಮೈಸೂರು (ಸೆ.29):  ಪೊಲೀಸರ (Police) ವಿರುದ್ಧವೂ ಹಲವಾರು ದೂರುಗಳು ಕೇಳಿ ಬರುತ್ತಿದೆ. ಹೀಗಾಗಿ, ಪೊಲೀಸರ ವಿರುದ್ಧ ದೂರು ನೀಡುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga jnanendra) ತಿಳಿಸಿದರು.

ಮೈಸೂರಿನಲ್ಲಿ (Mysuru) ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್‌ ಠಾಣೆಗಳಲ್ಲಿ ಪೊಲೀಸರಿಂದ ಸಹ ಅಪರಾಧಗಳು ನಡೆಯುತ್ತಿದೆ. ಈ ಸಂಬಂಧ ಸಾರ್ವಜನಿಕರಿಂದ ಸಹ ಹಲವಾರು ದೂರುಗಳು ಕೇಳಿ ಬರುತ್ತಿದೆ. ಹೀಗಾಗಿ, ತಪ್ಪು ಮಾಡಿದರೇ ಪೊಲೀಸರಿಗೂ ಶಿಕ್ಷೆ ಆಗಬೇಕಿದೆ ಎಂದರು.

Tap to resize

Latest Videos

ಬಲವಂತ ಮತಾಂತರ ನಿಷೇಧಕ್ಕೆ ಕಾಯ್ದೆ?: ಸಚಿವ ಆರಗ ಜ್ಞಾನೇಂದ್ರ

ಪೊಲೀಸರ ಸಂಬಂಧ ದೂರು ನೀಡಲು ಡಿಜಿ ಮತ್ತು ಎಸ್ಪಿ (SP) ಕಚೇರಿಯಲ್ಲಿ ಎರಡು ದೂರವಾಣಿಗಳನ್ನು ಸ್ಥಾಪಿಸಲಾಗುವುದು. ಬೆಂಗಳೂರಿಗೆ ಹೋದ ತಕ್ಷಣ ಈ ಬಗ್ಗೆ ಅಧಿಕಾರಗಳ ಸಭೆ ನಡೆಸುತ್ತೇನೆ. ಜನಸ್ನೇಹಿ ಪೊಲೀಸ್‌ ದೃಷ್ಟಿಯಿಂದ ಈ ವ್ಯವಸ್ಥೆ ಶೀಘ್ರದಲ್ಲೇ ಜಾರಿ ಮಾಡಲಾಗುವುದು ಎಂದು ಅವರು ಹೇಳಿದರು.

ಮಂಗಳೂರಿನಲ್ಲಿ ನಡೆದ ನೈತಿಕ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಇಂತಹ ಪ್ರಕರಣ ನಡೆಯದಂತೆ ಕ್ರಮ ವಹಿಸಲಾಗುತ್ತಿದೆ. ನೈತಿಕ ಪೊಲೀಸ್‌ ಗಿರಿ ನಡೆಸುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

250 ಸಿಬ್ಬಂದಿ ನೇಮಕ 

ಅಪರಾಧ ಪ್ರಕರಣಗಳು ನಡೆದ ತಕ್ಷಣ ಸಾಕ್ಷಾಧಾರಗಳನ್ನು ಸಂಗ್ರಹಿಸುವ, ಆ ವಿಷಯದಲ್ಲಿ ಅಧ್ಯಯನ ಮಾಡಿರುವ 250 ಮಂದಿ ತಾಂತ್ರಿಕ ಸಿಬ್ಬಂದಿಯನ್ನು ದೇಶದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ನೇಮಿಸಲಾಗುತ್ತಿದೆ. ಜೊತೆಗೆ ಎಫ್‌ಎಸ್‌ಎಲ್‌ (FSL) ಬಲಪಡಿಸುವ ಕಾರ್ಯವು ನಡೆಯುತ್ತಿದೆ. ಅಲ್ಲದೆ, 10 ಸಾವಿರ ಪೊಲೀಸ್‌ ಗೃಹ ನಿರ್ಮಾಣ, ಪೊಲೀಸ್‌ ಕಚೇರಿಗಳು, ಕಟ್ಟಡಗಳು ನಿರ್ಮಾಣ ಕಾರ್ಯ ಸಹ . 200 ಕೋಟಿ ವೆಚ್ಚದಲ್ಲಿ ಹಮ್ಮಿಕೊಳ್ಳಲಾಗುತ್ತಿದ ಎಂದು ಅವರು ವಿವರಿಸಿದರು.

ಔರಾದ್ಕರ್‌ ವರದಿ ಜಾರಿ, ಪೊಲೀಸರಿಗೆ 10000 ಮನೆ

ಅಸಹಾಯಕರನ್ನು ರಕ್ಷಿಸುವ ಕೆಲಸವನ್ನು ಪೊಲೀಸರು ಮಾಡಬೇಕು : ಅಸಹಾಯಕರನ್ನು ರಕ್ಷಿಸುವ ಕೆಲಸವನ್ನು ಪೊಲೀಸರು ಮಾಡಬೇಕು. ನಾಗರಿಕರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಪೊಲೀಸ್‌ ಇಲಾಖೆಯ ಶಿಸ್ತು ಸಂಯಮ, ಜನರ ಮನಸ್ಸಿನಲ್ಲಿ ಪೊಲೀಸ್‌ ಎನ್ನುವ ಭಯ ಇರಬಾರದು. ಸಾಮಾನ್ಯ ಜನರಿಗೆ ಪೊಲೀಸ್‌ ಎಂದರೆ ನಮ್ಮ ರಕ್ಷಕರು, ಸ್ನೇಹಿತರು ಎನ್ನುವ ಭಾವನೆ ಇರಬೇಕು. ಅಪರಾಧಿಗಳಿಗೆ, ದರೋಡೆಕೋರರಿಗೆ, ಕಳ್ಳರಿಗೆ ಪೊಲೀಸರನ್ನು ಕಂಡರೇ ಭಯ ಇರಬೇಕೇ ಹೊರತು ಜನ ಸಾಮಾನ್ಯರಿಗಲ್ಲ. ಠಾಣೆಗೆ ಬಂದ ಸಾಮಾನ್ಯ ಜನರನ್ನು ಗೌರವಿಸಬೇಕು. ನಾಗರಿಕರ ಸ್ನೇಹಿಯಾಗಿ ಪೊಲೀಸರು ನಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಪೊಲೀಸರು ಅಂದ ತಕ್ಷಣ ಪುರುಷರು ಅನ್ನುವ ಪರಿಕಲ್ಪನೆ ನಿರ್ಮಾಣವಾಗುತ್ತಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಮಹಿಳಾ ಸಿಬ್ಬಂದಿಯನ್ನು ಪೊಲೀಸ್‌ ಪಡೆಯಲ್ಲಿ ನೇಮಕ ಮಾಡಿಕೊಳ್ಳುವ ಪಾಲಿಸಿ ತಂದಿದೆ. 100ಕ್ಕೆ 25 ಪಾಲು ಮಹಿಳೆಯರು ಪೊಲೀಸ್‌ ಪಡೆಯಲ್ಲಿ (women police wing) ಇರಬೇಕು. ರಾಜ್ಯದಲ್ಲಿ ಶೇ.10 ರಷ್ಟುಮಹಿಳಾ ಪೊಲೀಸ್‌ ಸಿಬ್ಬಂದಿಯಿದ್ದು, ಕ್ರಮೇಣ ಇದನ್ನು ಹೆಚ್ಚಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದರು.

click me!