ಇದೆಲ್ಲಾ ಸರಿಯಲ್ಲ ಎಂದು ಅಸಮಾಧಾನಗೊಂಡ ರಮೇಶ್ ಕುಮಾರ್

Suvarna News   | stockphoto
Published : Apr 10, 2021, 02:12 PM IST
ಇದೆಲ್ಲಾ ಸರಿಯಲ್ಲ ಎಂದು ಅಸಮಾಧಾನಗೊಂಡ ರಮೇಶ್ ಕುಮಾರ್

ಸಾರಾಂಶ

 ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಮಾಜಿ ಸ್ಪೀಕರ್ ಕೈ ನಾಯಕ ರಮೇಶ್ ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ. ಜನ ಪರದಾಡುತ್ತಿದ್ದಾರೆ. ಸರ್ಕಾರ ಅನುಸರಿಸುವ ನಡೆ ಒಪ್ಪುವಂತದ್ದಲ್ಲ ಎಂದು ರಮೇಶ್ ಕುಮಾರ್ ಹೇಳಿದ್ದಾರೆ. 

ಕೋಲಾರ (ಏ.10):ಮುಷ್ಕರ ನಿರತ ಕಾರ್ಮಿಕರ ಆರ್ಥಿಕ ಪರಿಸ್ಥಿತಿ ಅತ್ಯಂತ ಕೆಳಮಟ್ಟದಲ್ಲಿದೆ. ಬಸ್‌ ಇಲ್ಲದೇ ಪರದಾಡುತ್ತಿರುವವರೂ ಅವರೇ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

ಕೋಲಾರದ ಶ್ರೀನಿವಾಸಪುರದಲ್ಲಿಂದು ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮುಷ್ಕರ ನಿರತ ಸಾರಿಗೆ ಸಂಸ್ಥೆ ನೌಕರರು ಕೆಳ ಆರ್ಥಿಕ ಗುಂಪಿಗೆ ಸೇರಿರುವವರು. ಸಾಕಷ್ಟು ಸಮಯವಿದೆ ಅನಿವಾರ್ಯ ಸ್ಥಿತಿಗೆ ಹೊಗುವವರಗೆ ಬಿಟ್ಟು ಈಗ ಶಾಸನ, ಕಾನೂನು ಪ್ರಯೋಗ ಮಾಡುತ್ತೇವೆ ಎನ್ನುವ ಸರ್ಕಾರದ ಕ್ರಮ ಸರಿಯಲ್ಲ ಎಂದರು.

ಸರ್ಕಾರ ಮುಷ್ಕರ ಬಗ್ಗು ಬಡಿಯುವ ಪ್ರಯತ್ನ ಮಾಡುತ್ತಿದೆ. ಅದನ್ನು ಸರಿ ಪಡಿಸುವ ಕೆಲಸ ಮಾಡುತ್ತಿಲ್ಲ. ಮುಷ್ಕರ ಹತ್ತಿಕ್ಕುವ ಕೆಲಸ ನಡೆಯುತ್ತಿದೆ, ಸಾಮಾನ್ಯ ಜನ ಪರದಾಡುತ್ತಿದ್ದಾರೆ. ಕಾನೂನು ಪ್ರಯೋಗ  ಅಸ್ತ್ರವಾಗಬೇಕು ಎಂದು ರಮೇಶ್ ಕುಮಾರ್ ಹೇಳಿದರು. 

'ಸಿದ್ದರಾಮಯ್ಯರನ್ನು ಮಾಜಿ ಸಿಎಂ ಅಂತ ಕರೆದ್ರೆ ಅಪಮಾನ ಮಾಡಿದಂತೆ'
 
ಸಾರಿಗೆ ಬದಲಾಗಿ ಸಂಚರಿಸುವ ಖಾಸಗಿ ಬಸ್ ಗಳು ಎಷ್ಟಿವೆ..? ಬೆಂಗಳೂರಲ್ಲಿ ಕಿ.ಮೀ.ಗಟ್ಟಲೆ ನಿಂತಿರುತ್ತವೆ. ಖಾಸಗಿ ಬಸ್‌ನವರು ನಷ್ಟ ಮಾಡಿಕೊಂಡು ಬಸ್ ಚಲಾಯಿಸುವುದಿಲ್ಲ. ಇಂಥ ಪರಿಸ್ಥಿತಿ ನಿರ್ಮಾಣ ಮಾಡಿ ನಷ್ಟವನ್ನು ನೌಕರರ ಮೇಲೆ ಹಾಕುವುದು ಸರಿಯಲ್ಲ ಎಂದು ರಮೇಶ್ ಕುಮಾರ್ ಹೇಳಿದರು. 

ಈ ಸಂದರ್ಭದಲ್ಲಿ ಸರ್ಕಾರ ಕೂಡಲೆ ಮಧ್ಯ ಪ್ರವೇಶ ಮಾಡಬೇಕು. ಸರ್ಕಾರ ತನ್ನ ಪ್ರತಿಷ್ಠೆ ಬಿಟ್ಟು ಸಮಸ್ಯೆ ಬಗೆಹರಿಸಬೇಕು ಎಂದು ರಮೇಶ್ ಕುಮಾರ್ ಹೇಳಿದರು.

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!