ಎಸ್‌ಡಿಎ ಪರೀಕ್ಷೆಯಲ್ಲೂ ವಿಜಯನಗರ ಜಿಲ್ಲೆ ಪ್ರಸ್ತಾಪ

Kannadaprabha News   | Asianet News
Published : Sep 20, 2021, 12:37 PM IST
ಎಸ್‌ಡಿಎ ಪರೀಕ್ಷೆಯಲ್ಲೂ ವಿಜಯನಗರ ಜಿಲ್ಲೆ ಪ್ರಸ್ತಾಪ

ಸಾರಾಂಶ

*  ರಾಜ್ಯದ 31ನೇ ಜಿಲ್ಲೆಯಾಗಿ ಉದಯವಾಗಿರುವ ವಿಜಯನಗರ *  ವಿಜಯನಗರ ಜಿಲ್ಲೆಗೆ ಆರು ತಾಲೂಕು ಸೇರ್ಪಡೆ  *  ಭಾನುವಾರ ನಡೆದ ಎಸ್‌ಡಿಎ ಪರೀಕ್ಷೆ 

ಹೊಸಪೇಟೆ(ಸೆ.20):  ಕರ್ನಾಟಕ ಲೋಕಸೇವಾ ಆಯೋಗ ಭಾನುವಾರ ನಡೆಸಿದ ಎಸ್‌ಡಿಎ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ನೂತನ ವಿಜಯನಗರ ಜಿಲ್ಲೆ ಕುರಿತ ಪ್ರಶ್ನೆ ಕೇಳಲಾಗಿದೆ. ಕರ್ನಾಟಕದ ವಿಜಯನಗರ ಹೊಸ ಜಿಲ್ಲೆಯಲ್ಲಿ ಎಷ್ಟು ತಾಲೂಕುಗನ್ನು ಸೇರಿಸಲಾಗಿದೆ ಎಂದು ಪ್ರಶ್ನೆ ಕೇಳಲಾಗಿದೆ.

ರಾಜ್ಯದ 31ನೇ ಜಿಲ್ಲೆಯಾಗಿ ಉದಯವಾಗಿರುವ ವಿಜಯನಗರ ಜಿಲ್ಲೆಗೆ ಆರು ತಾಲೂಕುಗಳನ್ನು ಸೇರ್ಪಡೆ ಮಾಡಲಾಗಿದೆ. ಪ್ರಶ್ನೆಪತ್ರಿಕೆಯ ಸರಣಿಯೊಂದರ 29ನೇ ಕ್ರಮ ಸಂಖ್ಯೆಯಲ್ಲಿ ಪ್ರಶ್ನೆ ಕೇಳಲಾಗಿದೆ. 

ಶೀಘ್ರವೇ ವಿಜಯನಗರಕ್ಕೆ ಡಿಸಿ, ಸಿಇಒ ನೇಮಕ: ಸಚಿವ ಆನಂದ್‌ ಸಿಂಗ್‌

ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ, ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಮತ್ತು ಹರಪನಹಳ್ಳಿ ತಾಲೂಕುಗಳು ಬರಲಿವೆ. ಎಸ್‌ಡಿಎ ಪರೀಕ್ಷೆಯಲ್ಲೂ ವಿಜಯನಗರ ಉಲ್ಲೇಖಗೊಂಡಿರುವ ಹಿನ್ನೆಲೆಯಲ್ಲಿ ಈ ಭಾಗದ ಜನ ಖುಷಿಯಾಗಿದ್ದಾರೆ.
 

PREV
click me!

Recommended Stories

ಹೋರಾಟದಲ್ಲೇ ಉರುಳಿದ 2025ರ ವರ್ಷ, ಬಿಡದಿ ಟೌನ್ ಶಿಪ್ ಯೋಜನೆ ರಾಮನಗರ ಬೆಂಗಳೂರು ದಕ್ಷಿಣವಾಗಿ ಬದಲಾಗಿದ್ದೆ ಸಾಧನೆ!
ಹೊಸ ವರ್ಷದ ಕಿಕ್‌ನಲ್ಲಿ ಡ್ರಿಂಕ್ ಆಂಡ್ ಡ್ರೈವ್ ಮಾಡಿದ್ರೆ ಅಷ್ಟೇ.. ಬೆಂಗಳೂರಿನ 50 ಫ್ಲೈ ಓವರ್‌ಗಳು ಬಂದ್; ರಸ್ತೆಗಿಳಿಯುವ ಮುನ್ನ ತಿಳಿಯಿರಿ